spot_img
Sunday, April 5, 2026
spot_img

ಉಡುಪಿ ಜಿಲ್ಲಾ ಸಹಕಾರ ಸಪ್ತಾಹ ಉದ್ಘಾಟನೆ : ವಿಕಸಿತ ಭಾರತವೆಂದರೆ ಬದುಕನ್ನು ಸಮೃದ್ಧಿಗೊಳಿಸುವ ಅಭಿಯಾನದ ಪರಿಕಲ್ಪನೆ : ಪ್ರೊ. ಕೊಕ್ಕರ್ಣೆ

ಜನಪ್ರತಿನಿಧಿ (ಉಡುಪಿ/ಮಂದಾರ್ತಿ) : “ವಿಕಸಿತ ಭಾರತವೆಂದರೆ ಅದೊಂದು ಪ್ರತಿ ಕುಟುಂಬದ ಬದುಕನ್ನು  ಸಮೃದ್ಧಿಗೊಳಿಸುವ ಅಭಿಯಾನದ ಪರಿಕಲ್ಪನೆ. ವಿಕಸಿತ ಭಾರತದಲ್ಲಿ ಬಡತನ  ನಿರುದ್ಯೋಗ ತೊಡೆದು ಹಾಕಿ ದೇಶದಲ್ಲಿ  ಆಧುನಿಕ ಸೌಲಭ್ಯಗಳನ್ನು  ಜನಸಾಮಾನ್ಯರಿಗೆ ತಲುಪಿಸುವುದೇ ಸುಂದರವಾದ ಪರಿಕಲ್ಪನೆ. ಇದನ್ನು ನಾವು ಸಾಧಿಸ ಬೇಕಾದರೆ ನಮ್ಮಮೊದಲ ಆದ್ಯತಾ ವಲಯವಾಗಿ ಸಹಕಾರ ಕ್ಷೇತ್ರವನ್ನು ಒಪ್ಪಿಕೊಂಡು ನಡೆಯ ಬೇಕಾದ ಅನಿವಾರ್ಯತೆ ಇದೆ. ಬರೇ ಕೈಗಾರಿಕೆ ಉದ್ಯಮವನ್ನೆ ಬೆಳೆಸುವುದರ ಮೂಲಕ  ವಿಕಸಿತ  ಭಾರತದಲ್ಲಿ ಹಸಿವು ನಿರುದ್ಯೋಗ ತೊಡೆದು ಹಾಕಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ತಲಾ ಆದಾಯ ಹೆಚ್ಚಿಸುವಲ್ಲಿ ಈ ಸಹಕಾರ ವ್ಯವಸ್ಥೆಯನ್ನು ಗ್ರಾಮೀಣ ಮಟ್ಟದಿಂದ ಇನ್ನಷ್ಟು ವಿಸ್ತರಣೆ ಮಾಡ ಬೇಕಾದ ಅಗತ್ಯತೆ ಇದೆ ಎಂದು ಉಡುಪಿ ಎಂಜಿಎಂ. ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ  ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಪಟ್ಟರು.

ಮಂದಾತಿ೯ಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ಉಡುಪಿ  ಜಿಲ್ಲಾ ಸಹಕಾರ ಯೂನಿಯನ್ ಮತ್ತು ಮಂದಾರ್ತಿ ಹಾಗೂ ಸಹಕಾರ  ಇಲಾಖೆ  ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ  ನಡೆದ 71ನೇ ಅಖಿಲ  ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ  ದಿಕ್ಸೂಚಿ ಉಪನ್ಯಾಸ ನೀಡಿ ಅಭಿಪ್ರಾಯಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸಹಕಾರ  ಯೂನಿಯನ್ ಅಧ್ಯಕ್ಷ  ಬಿ.ಜಯಕರ ಶೆಟ್ಟಿ  ಇಂದ್ರಾಳಿ ಇವರು ವಹಿಸಿದ್ದರು ಉದ್ಘಾಟನೆಯನ್ನು ಎಚ್.ಧನಂಜಯ್ಯ ಶೆಟ್ಟಿ  ಅನುವಂಶಿಕ ಆಡಳಿತ  ಮೊಕ್ತೇಸರರು ಮಂದಾತಿ೯ ಶ್ರೀ ದುಗಾ೯ ಪರಮೇಶ್ವರಿ  ದೇವಸ್ಥಾನ ಇವರು ನೆರವೇರಿಸಿದರು. ಕೆ.ಆರ್.ಲಾವಣ್ಯ ಸಹಕಾರ ಸಂಘಗಳ  ಉಪನಿಬಂಧಕರು ಉಡುಪಿ ಜಿಲ್ಲೆಇವರು ಸಮಾರಂಭಕ್ಕೆ ಶುಭ ಹಾರೈಸಿದರು.

ಮಂದಾರ್ತಿ ಸಹಕಾರ ಸಂಸ್ಥೆಯ ನಿದೇ೯ಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಹಕಾರ ಸಂಸ್ಥೆಯಲ್ಲಿ ಸಾಧನೆಗೈದವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.

ಮಂದಾರ್ತಿ ಸೇವಾ ಸಹಕಾರಿ ಸಂಘದ  ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ ಪ್ರಾಸ್ತಾವಿಕ ಮಾತುಗಳಾಡಿದರು. ಅನುಷಾ ಕೇೂಟ್ಯಾನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಡುಪಿ  ಜಿಲ್ಲಾ ಸಹಕಾರ  ಯುನಿಯನ್ ಇವರು ಸ್ವಾಗತಿಸಿದರು. ರಾಮಕೃಷ್ಣ ಶೆಟ್ಟಿ  ಮುಖ್ಯ  ಕಾರ್ಯ ನಿರ್ವಹಣಾಧಿಕಾರಿ ಮಂದಾರ್ತಿ ಸೇವಾ  ಸಹಕಾರಿ  ಸಂಘ ಇವರು ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!