spot_img
Tuesday, February 17, 2026
spot_img

ಜನತಾ ಆವಿಷ್ಕಾರ್ 2k24 : ಆತ್ಮಹತ್ಯೆಯ ಯೋಚನೆಯೇ ಮನಸ್ಸಿನಲ್ಲಿ ಬರಬಾರದು-ಈಶ್ವರ ಮಲ್ಪೆ

ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಜನತಾ ಆವಿಷ್ಕಾರ್ 2k24 ಬ್ಯುಸಿನೆಸ್ ಡೇ ಉದ್ಘಾಟನೆ
ಹೆಮ್ಮಾಡಿ:ನ.12 (ಜನಪ್ರತಿನಿಧಿ ವಾರ್ತೆ) ವಿದ್ಯಾರ್ಥಿಗಳು ಮೊಬೈಲ್‌ಗಳಿಂದ ಆದಷ್ಟು ದೂರವಿರಿ, ಅಗತ್ಯಕ್ಕಷ್ಟೇ ಮೊಬೈಲ್ ಬಳಸಿ, ಮೊಬೈಲು ಗೀಳು ಇವತ್ತು ಆತ್ಮಹತ್ಯೆಯೆಡೆಗೆ ದೂಡುವುದನ್ನು ಕಾಣುತ್ತಿದ್ದೇವೆ. ನಮ್ಮಲ್ಲಿ ಎಂದೂ ಆತ್ಮಹತ್ಯೆಯಂತಹ ನಕರಾತ್ಮಕ ಆಲೋಚನೆಯೇ ಮನಸ್ಸಿನಲ್ಲಿ ಬರಲೇಬಾರದು. ಸಕರಾತ್ಮಕವಾದ ಯೋಚನೆಗಳನ್ನೇ ಮೈಗೂಡಿಸಿಕೊಳ್ಳಿ. ಇಂದಿನ ಮಕ್ಕಳೆ ದೇಶದ ಕೀರ್ತಿ ಆಗಬೇಕು ಎಂದು ಪ್ರಸಿದ್ಧ ಮುಳುಗುತಜ್ಞ ಈಶ್ವರ ಮಲ್ಪೆ ಹೇಳಿದರು.
ನ.೧೨ರಂದು ಶ್ರೀ ವಿ.ವಿ.ವಿ ಮಂಡಳಿ ಹೆಮ್ಮಾಡಿ, ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ, ಸಮರ್ಪಣ ಎಜ್ಯುಕೇಶನ್ ಟ್ರಸ್ಟ್, ಜನತಾ ನ್ಯೂ ಇಂಗ್ಲೀಷ್ ಮಿಡಿಯಂ ಸ್ಕೂಲ್ ಕಿರಿಮಂಜೇಶ್ವರ ಇವರ ಆಶ್ರಯದಲ್ಲಿ ಹೆಮ್ಮಾಡಿ ಜನತಾ ಕಾಲೇಜಿನಲ್ಲಿ ನಡೆದ ಜನತಾ ಆವಿಷ್ಕಾರ್ 2k24 ಬ್ಯುಸಿನೆಸ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ವ್ಯವಹಾರದ ಕೌಶಲ್ಯವನ್ನು ಉಂಟು ಮಾಡುವುದು ಇವತ್ತಿನ ಕಾಲಘಟ್ಟದಲ್ಲಿ ತುಂಬಾ ಅಗತ್ಯವಿದೆ. ವ್ಯವಹಾರ ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಲು ಅನುಕೂಲ. ಮುಂದೆ ದೊಡ್ಡ ದೊಡ್ಡ ಸಾಧನೆ ಮಾಡಲು ಇದು ಪ್ರೇರಕವಾಗುತ್ತದೆ. ಶಿಕ್ಷಣದೊಂದಿಗೆ ಇಂಥಹ ಜೀವನವಶ್ಯಕ ಕಾರ್ಯಕ್ರಮಗಳನ್ನು ಮಾಡುವುದು ಅರ್ಥಪೂರ್ಣ ಎಂದು ಹೇಳಿದರು.
ಜೀವನದಲ್ಲಿ ಕಷ್ಟ ಬರುವುದು ಸ್ವಾಭಾವಿಕ. ಅದಕ್ಕೆ ಧೃತಿಗೆಡಬಾರದು. ಧೈರ್ಯದಿಂದ ಎದುರಿಸಬೇಕು. ಆಗಲೇ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿದಿಸೆಯಿಂದ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಿ. ನಿಮ್ಮಿಂದ ಆದ ಸೇವೆಯನ್ನು ಮಾಡಿ. ಸೇವಾ ಮನೋಭಾವ ನಿಮ್ಮಲ್ಲಿ ಜಾಗೃತವಾಗಲಿ. ಅದುವೆ ಮುಂದೊಂದು ದಿನ ನಿಮ್ಮ ಬೆಳವಣಿಗೆಗೆ ಪೂರಕವಾಗುತ್ತದೆ. ಸಮಾಜ ನಮ್ಮ ಜೊತೆಗಿರುತ್ತದೆ ಎಂದರು.
ಇನ್ನೊರ್ವ ಮುಖ್ಯ ಅತಿಥಿ ಸಮಾಜಸೇವಕ ರವಿ ಕಟಪಾಡಿ ಮಾತನಾಡಿ, ಬದುಕು ನಾವು ಭಾವಿಸಿದಂತೆ ಇರುವುದಿಲ್ಲ. ನನ್ನ ಸೇವಾಪ್ರವೃತ್ತಿಗೆ ನನ್ನ ತಂದೆಯ ಮಾತೇ ಕಾರಣ. ನಾವು ಯಾರಿಗಾದರೂ ಉಪಕಾರ ಮಾಡಬೇಕೇ ಹೊರತು ಉಪದ್ರ ಕೊಡಬಾರದು. ಎನಿಲ್ಲದಿದ್ದರೆ ಯಾರೂ ಇಲ್ಲ. ನಾವು ಕಷ್ಟಪಡಬೇಕು. ಕಷ್ಟಪಟ್ಟು ಮೇಲೆ ಬಂದರೆ ಸಂಬಂಧಿಕರು ಎಲ್ಲರೂ ಹತ್ತಿರ ಬರುತ್ತಾರೆ. ಹಾಗಾಗಿ ನಾವು ಸಾಧಿಸಿ ಎನೆಂಬುದನ್ನು ಸಾಧಿಸಿ ತೋರಿಸಿಬೇಕು. ಅಂಥಹ ಸಾಧನೆಗಳಿಗೆ ಇಂಥಹ ವೇದಿಕೆಗಳು ಪೂರಕವಾಗುತ್ತವೆ ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಸೃಷ್ಟಿ ಇನ್ಫೋಟೆಕ್‌ನ ಹರ್ಷವರ್ಧನ್ ಶೆಟ್ಟಿ, ಪ್ರಗತಿ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕುಂದಾಪುರ ಸಿಟಿ ಜೇಸಿ‌ಐ ಅಧ್ಯಕ್ಷ ರಾಘವೇಂದ್ರ ಕುಲಾಲ್, ಗೋವ ಉದ್ಯಮಿ ಸುರೇಶ ಪೂಜಾರಿ, ರಾಜಾರಾಮ ಗುರೂಜಿ ಯಡಮೊಗೆ, ಜನತಾ ಸಂಸ್ಥೆಯ ಮಾರ್ಗದರ್ಶಕರಾದ ಚಿತ್ರ ಕಾರಂತ, ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜು ಕಾಳಾವರ, ಜನತಾ
ನ್ಯೂ ಇಂಗ್ಲಿಷ್ ಮಿಡಿಯಂ ಸ್ಕೂಲ್‌ನ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ, ಸಂಸ್ಥೆಯ ಉಪ ಪ್ರಾಂಶುಪಾಲ ರಮೇಶ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಈಶ್ವರ ಮಲ್ಪೆ, ರವಿ ಕಟಪಾಡಿ ಸೇರಿದಂತೆ ಎಲ್ಲಾ ಅತಿಥಿಗಳನ್ನು ಸನ್ಮಾನಿಸಲಾಯಿತು. ಜನತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಅಧ್ಯಕ್ಷರೂ ಆಗಿರುವ ಗಣೇಶ ಮೊಗವೀರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ್ ವಂದಿಸಿದರು. ಉಪನ್ಯಾಸಕ ಉದಯ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.
”ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಇವತ್ತಿನ ಒತ್ತಡದ ದಿನಗಳನ್ನು ಎದುರಾಗುವ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸ, ಧೈರ್ಯ ಅಗತ್ಯವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಎದುರಾಗುವ ಒತ್ತಡ ಸವಾಲುಗಳನ್ನು ಎದುರಿಸುವುದು ಹೇಗೆ? ಮುನ್ನಡೆಯುವ ಧೈರ್ಯವನ್ನು ಇಲ್ಲಿ ಬರುತ್ತದೆ. ಉದ್ಯಮದ ಕಷ್ಟಗಳು ಅವರಿಗೆ ಅರ್ಥವಾಗುತ್ತದೆ. ಮುಂದಿನ ದಾರಿಗಳ ಬಗ್ಗೆ ಸ್ಪಷ್ಟತೆ ಮೂಡುತ್ತದೆ. ಆ ಹಿನ್ನೆಯಲ್ಲಿ ಈ ವ್ಯವಹಾರ ಮೇಳವನ್ನು ಆಯೋಜಿಸಲಾಗಿದೆ”-ಗಣೇಶ ಮೊಗವೀರ, ಪ್ರಾಂಶುಪಾಲರು.
ಜನತಾ ಆವಿಷ್ಕಾರ್: ಏನೆಲ್ಲಾ ಇದ್ದವು?
ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸುಮಾರು ೫೦ ಮಳಿಗೆಗಳನ್ನು ತೆರೆದಿದ್ದರು. ವೈವಿಧ್ಯಮಯವಾದ ಮಳಿಗೆಗಳು ವಿದ್ಯಾರ್ಥಿಗಳ ವ್ಯವಹಾರ ಕೌಶಲ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಯಿತು. ತಿಂಡಿ ತಿನಿಸು ಸ್ಟಾಲ್‌ಗಳು, ಸಸ್ಯಹಾರಿ, ಮಾಂಸಹಾರಿ ಹೋಟೆಲ್, ಐಸ್ ಕ್ರೀಮ್, ತಂಪು ಪಾನೀಯ, ಎಳನೀರು, ಪೋಟಾಟೋ ಟ್ರಿಸ್ಟರ್, ಸಿಹಿ ತಿಂಡಿ ಸ್ಟಾಲ್, ಚರ್ಮುರಿ, ಉಪ್ಕರಿ, ಚಾಟ್ಸ್, ಹಾರರ್ ಜೂಮ್, ಗೇಮ್ಸ್, ನರ್ಸರಿ, ದಿನಬಳಕೆ ವಸ್ತುಗಳು, ಕರಿದ ತಿನಿಸುಗಳು, ಗೋಲಿ ಸೋಡ, ಜ್ಯೂಸ್, ಬಟ್ಟೆ, ಮೆಹಂದಿ, ಸ್ಟೇಷನರಿ ವಸ್ತುಗಳ ಮಳಿಗೆ ಇತ್ಯಾದಿ ಮಳಿಗೆಗಳು ಇದ್ದವು. ಹೊರಾಂಗಣದಲ್ಲಿ ಸಾಂಪ್ರಾದಾಯಿಕ ತೊಟ್ಟಿಲು, ಕುದುರೆ ಬಂಡಿಗಳಿದ್ದವು. ಜನತಾ ಚಿತ್ರ ಸಿರಿಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಬಿಡಿಸಿದ ಚಿತ್ರಗಳ ಪ್ರದರ್ಶನ ಗಮನ ಸಳೆಯಿತು. ಬೇರೆ ಬೇರೆ ಶಾಲೆಯ ವಿದ್ಯಾರ್ಥಿಗಳ ವಿಜ್ಞಾನ ಮಾದರಿ ಪ್ರದರ್ಶನವೂ ಮೇಳದಲ್ಲಿದ್ದವು.
ಹೊರಾಂಗಣದಲ್ಲಿ 50 ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯನ್ನು ಬಿಂಬಿಸುವ ನೃತ್ಯವನ್ನು ಪ್ರದರ್ಶಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಕನ್ನಡ ನಾಡಿನ ಹಿರಿಮೆಯನ್ನು ಸಾರುವ ನೃತ್ಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಅದ್ಭುತವಾಗಿ ಪ್ರಸ್ತುತ ಪಡಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!