spot_img
Monday, March 16, 2026
spot_img

ಯಕ್ಷೋತ್ಸವ ಹೇರಿಕುದ್ರು: ‘ಯಕ್ಷಸಿಂಚನ’ ಪ್ರಶಸ್ತಿ ಪ್ರದಾನ

ಕುಂದಾಪುರ: ಶ್ರೀ ಮಹಾಗಣಪತಿ ಯಕ್ಷೋತ್ಸವ ಸಮಿತಿ ಹೇರಿಕುದ್ರು ಕನ್ನಡ ರಾಜ್ಯೋತ್ಸವದ ಅಂಗವಾಗಿ “ಯಕ್ಷೋತ್ಸವ ಹೇರಿಕುದ್ರು” ಕಾರ್ಯಕ್ರಮದಲ್ಲಿ “ಯಕ್ಷಸಿಂಚನ” ಪ್ರಶಸ್ತಿ ಪುರಸ್ಕಾರವನ್ನು ಶಂಕರ ಆನಗಳ್ಳಿ, ಜಗದೀಶ ಆಚಾರ್,  ಕುಶಲ ಕುಂದರ್, ಶ್ರೀಮತಿ ರಾಣಿ ಹೆಗ್ಡೆ ಹಾಗೂ ಸುರೇಶ್ ಮದ್ದುಗುಡ್ಡೆ ಇವರಿಗೆ ನೀಡಿ ಗೌರವಿಸಲಾಯಿತು.

ಸಭಾಧ್ಯಕ್ಷತೆ ಕುಂದಾಪುರದ ಉದ್ಯಮಿ ಕೆ.ಆರ್. ನಾಯಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ, ಮೊಗವೀರ ಯಕ್ಷಕಲಾ ವೇದಿಕೆ ಸಂಚಾಲಕ ಕಂಡ್ಲೂರು ಚಂದ್ರ ಮೊಗವೀರ, ದತ್ತಾನಂದ ಗಂಗೋಳ್ಳಿ, ಶರತ್ ಶೆಟ್ಟಿ ಹೇರಿಕುದ್ರು ರಾಜೀವ ಶೆಟ್ಟಿ ಹೇರಿಕುದ್ರು, ರವಿರಾಜ್ ಶೆಟ್ಟಿ ಹೇರಿಕುದ್ರು ಹಾಗೂ ಗ್ರಾಮ ಪಂಚಾಯತ್ ಸದಸ್ಯೆ ನಿರ್ಮಲ ಉಪಸ್ಥಿತರಿದ್ದರು.

ಅಶೋಕ ಕೆರೆಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ದಿವಾಕರ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಮಹಾಬಲ ಹೇರಿಕುದ್ರು ವಂದಿಸಿದರು.

ತದನಂತರ ಮಹಾಬಲ ಹೇರಿಕುದ್ರು ವಿರಚಿತ “ಹಂಗಳೂರು ಬ್ರಹ್ಮಲಿಂಗೇಶ್ವರ ಮಹಿಮೆ” ಮಹಾಗಣಪತಿ ಯಕ್ಷಗಾನ ಮಂಡಳಿ ಹೇರಿಕುದ್ರು ಇವರಿಂದ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!