spot_img
Wednesday, April 1, 2026
spot_img

ಕುಂದಾಪುರದಲ್ಲಿ ‘ಸಕಲ ಆತ್ಮಗಳ ಸ್ಮರಣೆಯ ದಿನ’ ಆಚರಣೆ

ಕುಂದಾಪುರ: ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿಯಾದ ಹೋಲಿ ರೋಜರಿ ಚರ್ಚ್ ವ್ಯಾಪ್ತಿಯಲ್ಲಿ ಅಗಲಿದ “ಸಕಲ ಆತ್ಮಗಳ ಸ್ಮರಣೆಯ ದಿನ” ವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.

ಚರ್ಚಿನ ಧರ್ಮಗುರು ಅ| ವಂ|ಪಾವ್ಲ್ ರೇಗೊ ಬಲಿದಾನ ಅರ್ಪಿಸಿ ‘ನಮ್ಮನ್ನು ಅಗಲಿದ ನಮ್ಮ ಹಿರಿಯವರಿಗೆ, ಕಿರಿಯರಿಗೆ ಸದ್ಗತಿ ದೊರೆಯಲು ನಮ್ಮ ಪ್ರಾರ್ಥನೆಯ ಅಗತ್ಯವಿದೆ, ಒಳ್ಳೆಯ ಕಾರ್ಯಗಳನ್ನು ಮಾಡಿ ನಾವು ದೇವರಲ್ಲಿ ತಲುಪಲು ಪ್ರಯತ್ನಿಸಬೇಕು’ ಎಂದು ಸಂದೇಶ ನೀಡಿದರು.

ಬಲಿದಾನದ ಬಳಿಕ ಸಮಾಧಿಗೆ ತೆರಳಿ, ಅಗಲಿದ ಎಲ್ಲಾ ಆತ್ಮಗಳಿಗೆ ವಿಶೇಷ ಪ್ರಾರ್ಥನೆ ನೆಡೆಸಿಕೊಟ್ಟು ಪವಿತ್ರ ಜಲದಿಂದ ಸಮಾಧಿಗಳನ್ನು ಆಶಿರ್ವದಿಸಲಾಯಿತು. ಕಥೊಲಿಕ್ ಪವಿತ್ರ ಸಭೆಯು, ಪಾಪ ವಿಮೋಚನೆಯಿಂದ ಬಿಡುಗಡೆಯಾಗದೆ ಇರುವ ಆತ್ಮಗಳಿಗೆ, ಬಿಡುಗಡೆಯಾಗಿ ಸ್ವರ್ಗ ಸೇರಲು ನಮ್ಮ ಪ್ರಾರ್ಥನೆಯ ಅಗತ್ಯ ಇದೆಯೆಂದು ತಿಳಿಸುತ್ತದೆ. ಅದಕ್ಕಾಗಿ ಪವಿತ್ರಸಭೆಯ ನಿರ್ಣಯದಂತೆ, ಈ ದಿನವನ್ನು ಪ್ರಪಂಚದ ಎಲ್ಲೆಡೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತಾಧಿಗಳು ಅಗಲಿದ ತಮ್ಮವರ ಸಮಾಧಿಗಳ ಮೇಲೆ ಮೇಣದ ಬತ್ತಿಗಳನ್ನು ಉರಿಸಿ, ಪುಷ್ಪಗಳಿಂದ ಶೃಂಗಾರ ಮಾಡಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!