spot_img
Wednesday, January 22, 2025
spot_img

ಕಾಡುಗಳಲ್ಲಿ ನಕ್ಸಲಿಸಂ ಮರೆಯಾಗುತ್ತಿದೆ, ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ : ಮೋದಿ

ಜನಪ್ರತಿನಿಧಿ (ಗುಜರಾತ್‌) : ಕೆಲವು ಬಾಹ್ಯ ಹಾಗೂ ಆಂತರಿಕ ಶಕ್ತಿಗಳು ದೇಶವನ್ನು ಅಸ್ಥಿತಗೊಳಿಸುವ ಪ್ರಯತ್ನ ಮಾಡುತ್ತಿವೆ. ವಿಶ್ವದಲ್ಲಿ ದೇಶದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡವಂತೆ ಮಾಡಲು ಅರಾಜಕತೆ ಸೃಷ್ಠೀಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ಆರೋಪಿಸಿದ್ದಾರೆ.

ಗುಜರಾತ್ನ ನರ್ಮದಾ ಜಿಲ್ಲೆಯಲ್ಲಿರುವ ಏಕತಾ ನಗರದಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಜನ್ಮದಿನದ ಅಂಗವಾಗಿ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಅವರು ಸೇರಿದ್ದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು.

ಅಭಿವೃದ್ಧಿ ಹೊಂದಿದ ಭಾರತಕ್ಕೆ ವಿರುದ್ಧವಾಗಿ ಅವರುಯ, ದೇಶವನ್ನು ಜಾರಿ ಆಧಾರದಲ್ಲಿ ಒಡೆಯುತ್ತಿದ್ದಾರೆ ಎಂದು ಹೇಳಿದ ಮೋದಿ, ದೇಶವನ್ನು ಒಡೆಯಲು ಯತ್ನಿಸುತ್ತಿರುವ ನಗರ ನಕ್ಸಲರ ಈ ಸಂಬಂಧವನ್ನು ಗುರುತಿಸಬೇಕು ಎಂದು ಹೇಳಿದ್ದಾರೆ.

ಕಾಡುಗಳಲ್ಲಿ ನಕ್ಸಲಿಸಂ ಮರೆಯಾಗುತ್ತಿದೆ, ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ. ಒಗ್ಗಟ್ಟಾಗಿರುವುದರಿಂದ ನಾವೆಲ್ಲಾ ಸುರಕ್ಷಿತರಾಗಿರುತ್ತೇವೆ ಎಂದು ಹೇಳುವವರನ್ನು ನಗರ ನಕ್ಸಲರು ಗುರಿಯಾಗಿಸುತ್ತಾರೆ. ಅವರ ಮುಖವಾಡವನ್ನು ಕಳಚಬೇಕು ಎಂದು ಹೇಳಿದ್ದಾರೆ.

ಭಾರತದ ಏಕೀಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ ಜನರಿದ್ದರೂ, ಸರ್ದಾರ್‌ ಪಟೇಲ್‌ ಅದನ್ನು ಸಾಧ್ಯವಾಗಿಸಿದ್ದರು ಎಂದ ಮೋದಿ, ಮುಂದಿನ ಎರಡು ವರ್ಷಗಳ ಕಾಲ ದೇಶವು ಪಟೇಲ್‌ ಅವರ ೧೫೦ನೇ ಜಯಂತಿಯನ್ನು ಆಚರಿಸಲಿದೆ ಎಂದು ಹೇಳಿದರು.

ನಮ್ಮ ದೇಶವನ್ನು ಬಲಪಡಿಸುವ ಒಂದು ರಾಷ್ಟ್ರ, ಒಂದು ಜಾತ್ಯತೀತ ನಾಗರಿಕ ಸಂಹಿತೆ ಅನುಷ್ಠಾನದತ್ತ ದೇಶ ಸಾಗುತ್ತಿದೆ. ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ ʼಒಂದು ರಾಷ್ಟ್ರ, ಒಂದು ಚುನಾವಣೆ ಉಪಕ್ರಮವನ್ನು ಜಾರಿಗೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!