spot_img
Friday, March 6, 2026
spot_img

ಮನದ ದ್ವೇಷ ಅಳಿಸೋಣ, ಪ್ರೀತಿಯ ದೀಪ ಹಚ್ಚೋಣ.

ಮನುಷ್ಯನ ಜೀವನದಲ್ಲಿ ಹಬ್ಬಗಳು ಬಹುಮುಖ್ಯ ಭಾಗವಾಗಿದೆ. ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ದೀಪಾವಳಿಗೆ ಮೊದಲ ಸ್ಥಾನವಿದೆ. ನಮ್ಮ ಧಾರ್ಮಿಕ ಸಂಪ್ರದಾಯಗಳು, ಹಿರಿಯರ ನೀತಿ ನಿಯಮಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ . ಸಹೋದರತೆ, ಭಾಂಧವ್ಯ, ಸಂಬಂಧಗಳನ್ನು ಈ ಹಬ್ಬಗಳು ಇನ್ನಷ್ಟು ಗಟ್ಟಿಮಾಡುತ್ತದೆ.   ಶ್ರೀರಾಮನು ರಾವಣನನ್ನು ಸಂಹರಿಸಿ ಲಂಕೆಯನ್ನು ಗೆದ್ದು ಸೀತೆ ಮತ್ತು ಲಕ್ಷಣರೊಂದಿಗೆ ವನವಾಸ ಮುಗಿಸಿ ಅಯೊದ್ಯಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ. ಒಳೆಯದು ಯಾವಾಗಲೂ ಕೆಟ್ಟದ್ದನ್ನು ಗೆಲ್ಲುತ್ತದೆ. ನಾವು ಕತ್ತಲೆಯನ್ನು ಬೆಳಕಿನಿಂದ ತೊಡೆದುಹಾಕಬೇಕು ಎಂಬುವುದನ್ನು ಸಹ ಈ ಹಬ್ಬವು ನಮಗೆ ಕಲಿಸುತ್ತದೆ. ಇದು ಕತ್ತಲೆಯ ವಿರುದ್ಧ ಬೆಳಕಿನ ವಿಜಯದ ಸಂಕೇತವನ್ನು ಬಿಂಬಿಸುತ್ತದೆ.

ದೀಪಾವಳಿ ಹಬ್ಬವು ಸಾಮಾನ್ಯವಾಗಿ ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಆದರೆ ಇದರಲ್ಲಿ ಮೂರು ದಿನಗಳು ವಿಶೇಷ. ಹಿಂದಿನ ದಿನ ಲಕ್ಷ್ಮಿದೇವತೆ ಮತ್ತು ಗಣೇಶನ ಪೂಜಿಸುತ್ತಾರೆ. ಹಬ್ಬಕ್ಕೆ ತಯಾರಿ ಹಲವು ದಿನಗಳ ಮುಂಚೆ ಪ್ರಾರಂಭವಾಗುತ್ತದೆ.ದೀಪಾವಳಿ ರಾತ್ರಿ ಲಕ್ಷ್ಮಿ ದೇವಿಯು ಜನರ ಮನೆಗೆ ಭೇಟಿ ನೀಡಿ ಅವರನ್ನು ಆಶೀರ್ವದಿಸುತ್ತಾಳೆ ಎಂಬುದು ಹಳೆಯ ನಂಬಿಕೆ, ಆದ್ದರಿಂದ ಜನರು ಈ ಸಂದರ್ಭದಲ್ಲಿ ಮನೆಗೆ ದೀಪಗಳು ,ತಳಿರು ತೋರಣ ಇತ್ಯಾದಿಗಳಿಂದ ಅಲಂಕರಿಸುತ್ತಾಳೆ.ಈ ದಿನ ಹೊಸ ವಸ್ತುಗಳನ್ನು ವಿಶೇಷವಾಗಿ ಆಭರಣವನ್ನು ಖರೀದಿಸುವುದು ನಮ್ಮ ವಾಡಿಕೆ.

ದೀಪಾವಳಿಯ ಮೊದಲ ದಿನ ಎಣ್ಣೆ ಸ್ನಾನ ಮಾಡುವ ಪದ್ಧತಿ ಮೊದಲಿನಿಂದಲೂ ಇದೆ. ಇದಕ್ಕೆ ಕಾರಣ ಸಮುದ್ರ ಮಂಥನದ ವೇಳೆ ಧನ್ವಂತರಿ ಅವತಾರವೆತ್ತಿ ಶ್ರೀ ವಿಷ್ಣು ಅಮೃತ ಕಲಶದೊಡನೆ ಪ್ರತ್ಯಕ್ಷವಾಗುತ್ತಾನೆ. ಹೀಗಾಗಿ ಆ ದಿನ ತುಂಬಿದ ಸ್ನಾನದ ನೀರಿನಲ್ಲಿ ಗಂಗೆ, ಎಣ್ಣಿಯಲ್ಲಿ ಧನಲಕ್ಷೀ ಇರುತ್ತಾಳೆ ಮತ್ತು ಈ ದಿನ ಸ್ನಾನ ಮಾಡುದರಿಂದ ಆರೋಗ್ಯ , ಆಯಸ್ಸು ವೃದ್ಧಿಯಾಗಿ ಪಾಪ ಕರ್ಮಗಳು ನಿವಾರಣೆಯಾಗುತ್ತದೆ. ಹಾಗೂ ಚರ್ಮ ಸಂಬಂಧಿ ಕಾಯಿಲೆಗಳು ವಾಸಿಯಾಗುತ್ತದೆ ಎಂಬುದು ವೈಜ್ಞಾನಿಕ ಚಿಂತನೆ . ಅಮಾವಾಸ್ಯೆಯ ಹಿಂದಿನ ದಿನ ನರಕ ಚತುರ್ದಶಿ. ಶ್ರೀ ಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಸಂಹರಿಸಿ  ಸತ್ಯಭಾಮೆಗಾಗಿ ಪಾರಿಜಾತ ಪುಷ್ಪವನ್ನು ತಂದ ನೆನಪಿಗಾಗಿ ನರಕ ಚತುರ್ದಶಿ ಆಚರಿಸಲಾಗುತ್ತದೆ. ಶ್ರೀ ಕೃಷ್ಣನು ವಾಮನ ರೂಪದಲ್ಲಿ ಬಂದು ಬಲಿ ರಾಜನ ಮುಂದೆ ದಾನವನ್ನು ಕೇಳಿದಾಗ ಬಲಿ ಒಪ್ಪಿ ದಾನವನ್ನು ನೀಡುತ್ತಾನೆ ಬಲಿಯ ದಾನದಿಂದ ಸಂತೋಷಿತನಾದ ಕೃಷ್ಣ ಅವನಿಗೆ ಪಾತಾಳದಲ್ಲಿ ನಲೆಸಿರುವಂತೆ ಹೇಳುತ್ತಾನೆ. ಇದನ್ನು ಬಲಿ ಪಾಡ್ಯಮಿ ಎಂದು ಆಚರಿಸಲಾಗುತ್ತದೆ.ಈ ದಿನ ಬಲಿ ಭೂಮಿಗೆ ಬಂದು ಪ್ರಜೆಗಳನ್ನು ನೋಡಿ ಆಶೀರ್ವದಿಸುತ್ತಾನೆ ಎಂಬ ಪ್ರತಿತಿ ಇದೆ. ಇದರ ಜೊತೆಗೆ ಆಯುಧ ಪೂಜೆ, ವಾಹನ ಪೂಜೆ  ಅಂಗಡಿ ಪೂಜೆ ಹಾಗೂ ಗೋ ಪೂಜೆಗಳನ್ನು ಮಾಡಲಾಗುತ್ತದೆ.

ಬೇರೆ ಬೇರೆ  ಖ್ಯಾದ್ಯಗಳಿಗಿಂತ ಹೆಚ್ಚಾಗಿ ಪಟಾಕಿಗಳೆ  ದೀಪಾವಳಿಗೆ ಪ್ರಸಿದ್ಧಿ.ದೀಪಾವಳಿಯಲ್ಲಿ ಬಹಳ ಹಿಂದಿನಿಂದಲೂ ಪಟಾಕಿ ಸಿಡಿಸುವುದು ರೂಢಿಯಲ್ಲಿದೆ.ಆದರೆ ಇದು ಅಗತ್ಯವೇ?  ಖಂಡಿತ ಇಲ್ಲಾ. ಪಟಾಕಿಗಳಿಂದ ಮಾಲಿನ್ಯ ಉಂಟಾಗುತ್ತದೆ ಮತ್ತು ಪ್ರಾಣಿಗಳಿಗೂ ಹಾನಿಯಾಗುತ್ತದೆ. ಇದರ ಹೊರತಾಗಿಯೂ ದೀಪಾವಳಿಯನ್ನು ಬೇರೆ ರೀತಿಯಲ್ಲಿ ಆಚರಿಸಬಹುದು. ಹಬ್ಬಗಳು ನಮ್ಮಲ್ಲಿ ಮುಖ್ಯವಾಗಿ ಸಹೋದರತ್ವ ಭಾವನೆಯನ್ನು  ಭಾವೈಕ್ಯತೆ ಮೂಡಿಸಬೇಕೆ ಹೊರತು ಆಚರಣೆಯ ಹೆಸರಿನಲ್ಲಿ ನಮ್ಮ ಪರಿಸರವನ್ನು ಹಾಳು ಮಾಡಬಾರದು ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು.  ನಗರ ಪ್ರದೇಶಗಳಿಗಿಂತ ಹಳ್ಳಿ ಕಡೆಗಳಲ್ಲಿ ದೀಪಾವಳಿ ಬಹಳ ವಿಶೇಷ. ಹಿರಿಯರು ಹಿಂದಿನಿಂದ ಪಾಲಿಸಿಕೊಂಡು ಬಂದ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತದೆ.ಮುಖ್ಯವಾಗಿ ಹಳ್ಳಿಗಳಲ್ಲಿ ಗದ್ದೆಗೆ ರಾತ್ರಿಯ ವೇಳೆಯಲ್ಲಿ ಹೋಗಿ ಬೆಂಕಿಯ ಸೂಡಿ ಹಿಡಿದು,  ಹೂವು , ಹಿಟ್ಟು ಹಾಕಿ, ಬಲಿಂದ್ರ   ದೇವರನ್ನು ಕೂಗುವುದು ವಿಶೇಷ ಮತ್ತು ವಿಭಿನ್ನ. ದೀಪಾವಳಿಯ ಆಚರಣೆಯು ಯಾವಾಗಲೂ ಕುಟುಂಬಗಳ ಮಧ್ಯೆ ಪರಸ್ಪರ ಪ್ರೀತಿ, ಸ್ನೇಹ  ಬೆಸೆಯಬೇಕೆ ಹೊರತು ದ್ವೇಷ ಅಲ್ಲಾ. ಈ ಹಬ್ಬಗಳ ನೆಪದಲ್ಲಿಯಾದರೂ  ದೂರ ಆಗಿರುವ ಒಡೆದ , ಮುರಿದ ಮನಸ್ಸುಗಳು ಮತ್ತೆ ಒಂದಾದಾಗ ಮಾತ್ರ ದೀಪಾವಳಿ ಅರ್ಥಪೂರ್ಣ.

– ಸುಜಯ ಶೆಟ್ಟಿ , ಹಳ್ನಾಡು
ಡಾ. ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!