spot_img
Wednesday, April 1, 2026
spot_img

ವಿಶ್ವ ಆಯುರ್ವೇದ ದಿನಾಚರಣೆ : ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ವತಿಯಿಂದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ

ಜನಪ್ರತಿನಿಧಿ (ಕುಂದಾಪುರ) : ವಿಶ್ವ ಆಯುರ್ವೇದ ದಿನಾಚರಣೆ ಅಂಗವಾಗಿ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ವತಿಯಿಂದ ಮಂಗಳವಾರ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ವಠಾರದಲ್ಲಿ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಆಡಳಿತ ನಿರ್ದೇಶಕ ಡಾ.ರಾಜೇಶ ಬಾಯರಿ ಮಾತನಾಡಿ,ಜೀವನ ಶೈಲಿ ಹಾಗೂ ಆಹಾರ ಸೇವನೆಯಲ್ಲಿ ಆದಂತಹ ಬದಲಾವಣೆ ಯಿಂದಾಗಿ ಮಾನವರು ಕಾಯಿಲೆಗೆ ತುತ್ತಾಗುತ್ತಿರುವುದನ್ನು ನಾವು ನೋಡ ಬಹುದ್ದಾಗಿದ್ದು.ಸಾತ್ವಿಕ ಆಹಾರ ಸೇವನೆ,ಆಯುರ್ವೇದ ಮಾದರಿಯ ಔಷಧಗಳ ಬಳಕೆ ಹಾಗೂ ಯೋಗ ಜ್ಞಾನದಿಂದ ರೋಗಮುಕ್ತ ಜೀವನ ನಡೆಸಲು ಸಹಕಾರಿ ಆಗುತ್ತದೆ ಎಂದು ಚಿತ್ರಕೂಟ ಹೇಳಿದರು.

ಆಯುರ್ವೇದದ ಮಹತ್ವವನ್ನು ತಳಮಟ್ಟದಲ್ಲಿ ಮುಂದಿನ ಜನಾಂಗಗಕ್ಕೆ ಹೇಗೆ ತಲುಪಿಸಬಹುದ ಎನ್ನುವ ವಿಚಾರದ ಬಗ್ಗೆ ವಿಮರ್ಶೆ ಮಾಡಿದಾಗ ಮಕ್ಕಳಲ್ಲಿ ಆಯುರ್ವೇದದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ಜ್ಞಾನವನ್ನು ಕೊಡುವ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ ಎಂದರು.

ಚಿತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿರಾಜ ಶೆಟ್ಟಿ ಮಾತನಾಡಿ,ತಮ್ಮಲ್ಲಿರುವ ಜ್ಞಾನ ಮತ್ತು ಅನುಭವದ ಮುಖೇನ ಆಯುರ್ವೇದ ಔಷಧವನ್ನು ಜನರಿಗೆ ನೀಡಿ ಆರೋಗ್ಯ ಭಾಗ್ಯವನ್ನು ಕರುಣಿಸುವುದರ ಜತೆಗೆ.ಊರಿನ ಒಂದಿಷ್ಟು ವಿದ್ಯಾವಂತ ಯುವ ಜನತೆಗೆ ಉದ್ಯೋಗವನ್ನು ನೀಡುತ್ತಿರುವ ಡಾ.ರಾಜೇಶ ಬಾಯರಿ ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.

ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮಾರ್ಗದರ್ಶಕರಾದ ಮಹಾಬಲ ಬಾಯರಿ ಉದ್ಘಾಟಿಸಿ ಶುಭಹಾರೈಸಿದರು.

ವಂಡ್ಸೆ ಪಂಚಾಯಿತಿ ಮಾಜಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ,ಡಾ.ಪ್ರಸನ್ನ ಕಾಕುಂಜೆ,ಕಲಾವತಿ ಬಾಯರಿ,ಆಯುರ್ವೇದ ವೈದ್ಯರಾದ ಡಾ.ಅನುಲೇಖ ಬಾಯರಿ,ವಿದ್ಯಾರ್ಥಿಗಳು,ಮಕ್ಕಳ ಪೋಷಕರು,ಚಿಕಿತ್ಸಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.ಭಾಷಣ ಸ್ಪರ್ಧೆ ತೀರ್ಪುಗಾರರಾಗಿ ಡಾ.ಪ್ರಸನ್ನ ಕಾಕುಂಜೆ,ಸುಪ್ರಿತಾ ಪುರಾಣಿಕ,ಗೋವರ್ಧನ ಜೋಗಿ ಹಾಗೂ ಪ್ರಬಂಧ ಸ್ಪರ್ಧೆ ತೀರ್ಪುಗಾರರಾಗಿ ಶ್ರೀಮತಿ ಜಿ ಹೆಗ್ಡೆ,ನಿವೃತ್ತ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೆಟ್ಟಿ ಹೊಸುರು ಭಾಗವಹಿಸಿದ್ದರು.ಡಾ.ರಾಜೇಶ ಬಾಯರಿ ಸ್ವಾಗತಿಸಿದರು.ಸಿಬ್ಬಂದಿಗಳಾದ ಭಾವನಾ,ಚೈತ್ರಾ,ಸೌಜನ್ಯ ಪ್ರಾರ್ಥಿಸಿದರು.ಸಂಗೀತಾ ಮತ್ತು ಸಂತೋಷ ಪೂಜಾರಿ ನಿರೂಪಿಸಿದರು.ಡಾ.ಅನುಲೇಖ ಬಾಯರಿ ವಂದಿಸಿದರು.ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ 17 ಶಾಲೆಗಳ ಒಟ್ಟು 50ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!