spot_img
Wednesday, April 1, 2026
spot_img

ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳ ಸಮಾವೇಶ

ಸಾಸ್ತಾನ: ಐವತ್ತು ವರ್ಷದ ಇತಿಹಾಸವಿರುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿಯ ವಿದ್ಯಾರ್ಥಿಗಳ ಸಮಾವೇಶವು ಇತ್ತೀಚೆಗೆ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ನಡೆಯಿತು.

ಹಲಸಿನಕಟ್ಟೆ ಅನಂತಪದ್ಮನಾಭ ಐತಾಳರು ಸಮಾವೇಶವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಲಾಕೇಂದ್ರದ ಅಧ್ಯಕ್ಷರಾದ ಆನಂದ ಸಿ ಕುಂದರ್ ವಹಿಸಿದ್ದರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಸಮಾವೇಶದ ಉದ್ದೇಶವನ್ನು ತಿಳಿಸಿರು. ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ವಿದ್ಯಾರ್ಥಿಗಳ ವ್ಯಕ್ತಿ ಚಿತ್ರ ಪುಸ್ತಕ ನಮ್ಮವರು ಬಿಡುಗಡೆಗೊಳಿಸಿ ಮಾತನಾಡುತ್ತಾ ಯಕ್ಷಗಾನ ಕಲೆ ಮನೋರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅದು ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ನಿರ್ವಹಣೆ, ಬೆಳವಣಿಗೆಗೆ ಸಹಕಾರಿ ಎಂದು ಹೇಳಿದರು.

ಯಕ್ಷಗಾನ ಬದುಕಿಗೆ ಆಸರೆಯಾಗುವ ಜೊತೆಗೆ ಸಂಸ್ಕ್ರತಿಯನ್ನು ಎತ್ತಿಹಿಡಿದ ದೊಡ್ಡ ಕಲೆ. ಯಕ್ಷಗಾನ ಕಲಾಕೇಂದ್ರವನ್ನು ಹುಟ್ಟುಹಾಕಿದ, ಬೆಳವಣಿಗೆಗೆ ಕಾರಣವಾದವರನ್ನು ಅಭಿನಂದಿಸುತ್ತೇವೆ ಎಂದರು. ಸಾಹಿತಿ ಪ್ರೊ.ಉಪೇಂದ್ರ ಸೋಮಯಾಜಿ ಶಾಲೆ ಮತ್ತು ಶಿಷ್ಯರ ಸಂಬಂದದ ಬಗ್ಗೆ ವಿವರಿಸಿದರು. ಯಕ್ಷ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ಮಟಪಾಡಿ ಚಂದ್ರಶೇಖರ ಕಲ್ಕೂರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಬೈಲೂರು ಸುಬ್ರಹ್ಮಣ್ಯ ಐತಾಳ್ ವಂದಿಸಿದರು. ಲಂಬೋದರ ಹೆಗಡೆ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!