spot_img
Thursday, April 2, 2026
spot_img

ಕಲಾವಿದರಿಗಾಗಿ ಯಕ್ಷಗಾನ ಕಲಾರಂಗ ಕಾಳಜಿ ಮಾದರಿ: ವಿದ್ಯಾ ಪೋಷಕ್ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಸಕ ಕಿರಣ್ ಕೊಡ್ಗಿ

ಕುಂದಾಪುರ: ಯಕ್ಷಗಾನ ಕಲಾ ರಂಗ ಉಡುಪಿ, ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್ ಯಕ್ಷ ನಿಧಿ ವಿದ್ಯಾ ಪೋಷಕ ಯಕ್ಷ ಶಿಕ್ಷಣ ಇವರು ನೇತೃತ್ವದಲ್ಲಿ ದಾನಿಗಳ ನೆರವಿನಿಂದ ಸಂಸ್ಥೆ ನಿರ್ಮಿಸಿದ ೫೬ನೆಯ ಮನೆ ಹಸ್ತಾಂತರ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ದೀಪ ಪ್ರಜ್ವಲನೆಗೊಳಿಸಿ ಭಾಗವಹಿಸಿ ಯಕ್ಷಗಾನ ಕಲಾ ರಂಗ ಕಲಾವಿದರು ಮತ್ತು ಯಕ್ಷಗಾನ ಕಲೆಗೆ ಸ್ಪಂದಿಸುತ್ತಾ ಬಂದಿರುವ ಸಂಸ್ಥೆ ಸಾಂಪ್ರದಾಯಕ ಯಕ್ಷಗಾನ ಉಳಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಹುಟ್ಟಿಕೊಂಡಿತು. ಅದರ ಜೊತೆಗೆ ದುಡಿಯುವಂತಹ ಕಲಾವಿದರಿಗಾಗಿ ಇಲ್ಲಿಯ ಕಾರ್ಯಕರ್ತರ ಪಡೆ ಸದಾ ಉತ್ಸಾಹಿಯಾಗಿದೆ ಕಲಾ ಸಂಘಟನೆ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾಗಿ ರೂಪಗೊಂಡಿದೆ ಎಂದರು.

ವೇದಮೂರ್ತಿ ಕೆ.ವಿ. ಕೃಷ್ಣ ಭಟ್ ಕಡಂದಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿದ್ವಾನ್ ಪಂಜ ಭಾಸ್ಕರ್ ಭಟ್, ಹಾಗೂ ಶ್ರೀಮತಿ ಚಂದ್ರಿಕಾ ಭಾಸ್ಕರ್ ಭಟ್ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಎಂ ಗಂಗಾಧರ, ಕಾರ್ಯದರ್ಶಿ ಮುರುಳಿ ಕಡೆಕಾರ್, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಉಪಸ್ಥಿತರಿದ್ದರು.

ಕುಂದಾಪುರ ತಾಲೂಕಿನ ಕೋಟೇಶ್ವರದ ಮೇಲ್ಕಟ್ಕೇರಿಯಲ್ಲಿ ವಿದ್ವಾನ್ ಪಂಜ ಭಾಸ್ಕರ್ ಭಟ್ ಇವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ನೂತನ ಮನೆ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾ ಪೋಷಕ ಸತ್ಯಾವತಿ ಇವರಿಗೆ ಮನೆಯನ್ನು ಹಸ್ತಾಂತರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!