spot_img
Thursday, April 2, 2026
spot_img

ಉಪನ್ಯಾಸಕಿ ಅನಿತಾ ಪುರಾಣಿಕ್‌ಗೆ ಪಿ‌ಎಚ್‌ಡಿ ಪದವಿ

ಬೈಂದೂರು: (ಜನಪ್ರತಿನಿಧಿ ವಾರ್ತೆ) ಬೈಂದೂರು ಬಾಡ ಮೂಲದ ಅನಿತಾ ಪುರಾಣಿಕ್ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪಿ‌ಎಚ್‌ಡಿ ಪದವಿ ನೀಡಿದೆ. ಅವರು ಸಂಶೋಧನೆ ನಡೆಸಿ ಮಂಡಿಸಿದ ಫಾರ್‍ಮಕೋಗ್ನಸಿ ಎಂಡ್ ಎನ್ಹಾನ್ಸ್‌ಮೆಂಟ್ ಆಫ್ ಫೈಟೋಡ್ರಗ್ ಎಫಿಕಸಿ ಬೈ ಮೆಟಲಿಕ್ ನ್ಯಾನೋ ಫಾರ್ಟಿಕಲ್ಸ್ ಸಿಂಥಸೈಸ್ಡ್ ಯೂಸಿಂಗ್ ಸೆಲೆಕ್ಟಡ್ ಮೆಡಿಸಿನಲ್ ಪ್ಲಾಂಟ್ಸ್ ಪ್ರೌಢಪ್ರಬಂಧವು ಈ ಪದವಿಗೆ ಅರ್ಹತೆ ಪಡೆದಿದೆ. ಧಾರವಾಡದ ಜೆ.ಎಸ್.ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾ ವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಉಪನ್ಯಾಸಕಿಯಾಗಿರುವ ಇವರು ಕ.ವಿ.ವಿ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಪ್ರಸ್ತುತ ಹಾಸನ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಡಾ. ಟಿ. ಸಿ. ತಾರಾನಾಥ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.

ಅನಿತಾ ಪುರಾಣಿಕ್ ಬೈಂದೂರು ರತ್ತುಬಾಯಿ ಜನತಾ ಪ್ರೌಢಶಾಲೆಯ ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ ದಿ. ಬಿ. ಸದಾಶಿವ ಭಟ್-ಬಿ. ಜಯದೇವಿ ದಂಪತಿಯ ಪುತ್ರಿ ಹಾಗೂ ಕುಂದಾಪುರ ಕಾಳಾವರದ ಡಾ. ನಾಗರಾಜ ಶ್ರೀನಿವಾಸ ಪುರಾಣಿಕ್ ಅವರ ಪತ್ನಿ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!