spot_img
Tuesday, May 19, 2026
spot_img

ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಅಲಿ ಶವ ಕೂಳೂರು ನದಿಯಲ್ಲಿ ಪತ್ತೆ

ಜನಪ್ರತಿನಿಧಿ (ಮಂಗಳೂರು) : ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಹಾಗೂ ಉದ್ಯಮಿ ಮುಮ್ತಾಜ್ ಅಲಿ ಮೃತದೇಹ ಫಲ್ಗುಣಿ ನದಿಯ ಕೂಳೂರು ಸೇತುವೆ ಬಳಿ ಇಂದು(ಸೋಮವಾರ) ಪತ್ತೆಯಾಗಿದೆ.

ಮುಸ್ಲಿಂ ಮುಖಂಡ ಮುಮ್ತಾಜ್ ಅಲಿ ನಿನ್ನೆ(ಭಾನುವಾರ) ಮುಂಜಾನೆ ಮನೆಯಿಂದ ಹೊರ ಹೋಗಿದ್ದರು. ಆದರೆ ಅವರು ಮರಳಿ ಬಂದಿರಲಿಲ್ಲ. ಅವರ ಫೋನ್ ಸಂಪರ್ಕವೂ ಸಾಧ್ಯವಾಗಿರಲಿಲ್ಲ. ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಕೂಳೂರು ಸೇತುವೆ ಸಮೀಪ ಅವರು ಕಾರು ನಿನ್ನೆ(ಭಾನುವಾರ) ಬೆಳಿಗ್ಗೆ ಪತ್ತೆಯಾಗಿತ್ತು.

ಮಸೀದಿ ಮುಖಂಡರಾಗಿದ್ದ ಬಿಎಂ ಮುಮ್ತಾಜ್ ಅಲಿ, ಶೈಕ್ಷಣಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದರು. ಅವರ ಮತ್ತೊಬ್ಬ ಸಹೋದರಾಗಿರುವ ಜೆಡಿಎಸ್ ಉಪಾಧ್ಯಕ್ಷ ಬಿಎಂ ಫಾರೂಕ್ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.

ಮಂಗಳೂರಿನ ಕದ್ರಿಯಲ್ಲಿನ ಅಳ್ವಾರಿಸ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಮುಮ್ತಾಜ್ ಅಲಿ, ಭಾನುವಾರ ನಸುಕಿನ 3 ಗಂಟೆಗೆ ಫ್ಲ್ಯಾಟ್‌ನಿಂದ ತಮ್ಮ ಬಿಎಂಡಬ್ಲ್ಯೂ ಕಾರಿನಲ್ಲಿ ಹೋಗಿದ್ದರು. ಕಪ್ಪು ಬಣ್ಣದ ಕಾರು, ಫಲ್ಗುಣಿ ನದಿಯ ಕೂಳೂರು ಸೇತುವೆ ಬಳಿ ಅಪಘಾತ ನಡೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹೀಗಾಗಿ ಅವರ ನಾಪತ್ತೆ ಹಿಂದೆ ಸಾಕಷ್ಟು ಅನುಮಾನ ಹುಟ್ಟಿತ್ತು.

ದೇವರ ಬಳಿ ಹೋಗುತ್ತೇನೆ : ಮುಮ್ತಾಜ್ ಅಲಿ ವಾಟ್ಸಪ್‌ ಮೆಸೇಜ್
ಮುಮ್ತಾಜ್ ಅಲಿ ಅವರು ‘ನಾನು ದೇವರ ಬಳಿಗೆ ಹೋಗುತ್ತೇನೆ’ ಎಂದು ತಮ್ಮ ಕುಟುಂಬದ ವಾಟ್ಸಾಪ್ ಗ್ರೂಪ್‌ನಲ್ಲಿ ಬ್ಯಾರಿ ಭಾಷೆಯಲ್ಲಿ ಮುಂಜಾನೆ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಬೆಳಿಗ್ಗೆ ಅವರು ಕಾಣಿಸದೆ ಹೋದಾಗ, ವಾಯ್ಸ್ ಮೆಸೇಜ್ ಕಂಡವರಲ್ಲಿ ಆತಂಕ ಉಂಟಾಗಿತ್ತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಳೂರು ಹಳೆ ಸೇತುವೆ ಬಳಿ ಕಾರು ಪತ್ತೆಯಾಗಿದ್ದರಿಂದ ನದಿಯಲ್ಲಿ ಶೋಧ ನಡೆಸಲಾಗಿತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!