spot_img
Wednesday, January 22, 2025
spot_img

ಮೋದಿ ಭಾರತ ಮಾತೆಯ ಗೌರವಕ್ಕೆ ದ್ರೋಹ ಬಗೆದಿದ್ದಾರೆ ಎಂದು ನಾವು ಘೋಷಿಸೋಣವೇ? : ರಾಜ್ಯಸಭೆಯ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ

ಜನಪ್ರತಿನಿಧಿ (ನವದೆಹಲಿ) : ಪ್ರಧಾನಿ ಮೋದಿ ಭಾರತ ಮಾತೆಯ ಗೌರವಕ್ಕೆ ದ್ರೋಹ ಬಗೆದಿದ್ದಾರೆ ಎಂದು ಘೋಷಿಸೋಣವೇ? ಎಂಬುದಾಗಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.

ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್‌ ಖಾತೆ ʼಎಕ್ಸ್‌ʼ ನಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು (ಪಿಎಲ್‌ಎ) 60 ಕಿ.ಮೀ.ನಷ್ಟು ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಿ, ಬೀಡುಬಿಟ್ಟಿದೆ ಎಂಬ ವಿದೇಶಿ ಮಾಧ್ಯಮವೊಂದರ ಲೇಖನವೊಂದನ್ನು ಉಲ್ಲೇಖಿಸಿದ ಸುಬ್ರಮಣಿಯನ್‌ ಸ್ವಾಮಿ, ಮೋದಿ ಭಾರತ ಮಾತೆಯ ಗೌರವಕ್ಕೆ ದ್ರೋಹ ಬಗೆದಿದ್ದಾರೆ ಎಂದು ನಾವು ಘೋಷಿಸೋಣವೇ? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ, ಚೀನಾ ಜೊತೆಗಿನ ರಾಯಭಾರಿ ಮಟ್ಟದ ಸಂಬಂಧವನ್ನು ಕಡಿದುಕೊಳ್ಳಲು ನಾನು ಒತ್ತಾಯಿಸುತ್ತೇನೆ ಎಂದೂ ಹೇಳಿದ್ದಾರೆ.

ರಾಜ್ಯಸಭೆಯ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಪ್ರಧಾನಿ ಮೋದಿ ಅವರನ್ನು ಹಾಗೂ ಅವರ ನೇತೃತ್ವದ ಸರ್ಕಾರದ ವಿರುದ್ಧ ಟೀಕಿಸಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ಕೂಡ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು, ವಿದೇಶಿ ನೀತಿಯನ್ನು ಕಟುವಾಗಿ ಪ್ರಶ್ನಿಸಿದ್ದರು ಎನ್ನುವುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

‘ಮಾಲ್ಡಿವ್ವ ಸಿಂಡೋಮ್’ ಬಾಂಗ್ಲಾದೇಶದಲ್ಲಿ ಮೌನವಾಗಿ ಹರಡುವುದು ಮುಂದುವರಿದಿದೆ ಮತ್ತು ಮೋದಿಯವರ ಪರಂಪರೆಯು ಭಾರತದ ವಿಘಟನೆಗಾಗಿ ಕೆಲಸ ಮಾಡುವ ನೆರೆಹೊರೆಯವರನ್ನು ಸೃಷ್ಟಿ ಮಾಡುತ್ತದೆ’ ಎಂಬ ಶಿರ್ಷಿಕೆ ಹೊಂದಿರುವ ವಿದೇಶಿ ಮಾಧ್ಯಮ BLITZ ನಲ್ಲಿ ಪ್ರಕಟಗೊಂಡಿರುವ ಲೇಖನವನ್ನು ಸ್ವಾಮಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

‘ಮುಂಬರುವ 25 ವರ್ಷಗಳ ‘ಅದ್ಭುತ’ ಮೋದಿ ಪರಂಪರೆ: ಭಾರತವನ್ನು ಸುತ್ತುವರೆದಿರುವ ನೆರೆಹೊರೆಯವರು ನಮ್ಮ ವಿಘಟನೆಗಾಗಿ ಕೆಲಸ ಮಾಡುತ್ತಾರೆ’ ಎಂದು ಅವರು ಬರೆದುಕೊಂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!