spot_img
Monday, January 19, 2026
spot_img

ಬಸ್ರೂರು ಸಂತ ಫಿಲೀಪ್ ನೇರಿ ಚರ್ಚ್‌ನಲ್ಲಿ ನೊವೇನಾ ಪ್ರಾರ್ಥನೆ

ಕುಂದಾಪುರ: ಮೊಂತಿ ಫೆಸ್ಟ್ ಅಥವಾ ತೆನೆ ಹಬ್ಬದ ಅಂಗವಾಗಿ ಬಸ್ರೂರು ಸಂತ ಫಿಲೀಪ್ ನೇರಿ ಚರ್ಚ್‌ನಲ್ಲಿ 9 ದಿನದ ನೊವೇನಾ ಪ್ರಾರ್ಥನೆಗೆ ಆ.30ರಂದು ಚಾಲನೆ ನೀಡಲಾಯಿತು.

ಸಂತ ಫಿಲೀಪ್ ನೇರಿ ಚರ್ಚ್‌ನಲ್ಲಿ 9 ದಿನದ ನೊವೇನಾ ಪ್ರಾರ್ಥನೆಗೆ ಚಾಲನೆ ನೀಡಿದ ಚರ್ಚ್‌ನ ಧರ್ಮಗುರುಗಳು ವಂದನೀಯ ರಾಯ್ ಲೋಬೋ ದಿವ್ಯ ಬಲಿಪೂಜೆ ನೆರವೇರಿಸಿ, ಮೇರಿ ಮಾತೆಗೆ ನೊವೇನಾ ಪ್ರಾರ್ಥನೆ ಸಲ್ಲಿಸಿದರು. ದಿಯೋಕೊನ್ ವಿಲ್ಸನ್ ಸಲ್ಡಾನ ಪ್ರವಚನ ನೀಡಿದರು.

ಒಂಭತ್ತು ದಿನಗಳ ಕಾಲ ನಡೆಯುವ ನೊವೇನಾ ಪ್ರಾರ್ಥನೆಯಲ್ಲಿ ವಿಶೇಷವಾಗಿ ಚಿಕ್ಕ ಚಿಕ್ಕ ಮಕ್ಕಳು ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ ಸಮರ್ಪಿಸುವುದು ವಿಶೇಷ. ನೂರಾರು ಭಕ್ತಾಧಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!