Monday, September 9, 2024

ಮೂರ್ತೆದಾರರ ಸೇವಾ ಸಹಕಾರಿ ಸಂಘ ಹೆಮ್ಮಾಡಿಯ ಮಹಾಸಭೆ

ಜನಪ್ರತಿನಿಧಿ (ಹೆಮ್ಮಾಡಿ): ಇಲ್ಲಿನ ಮೂರ್ತೆದಾರರ ಸೇವಾ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಮೂರ್ತೆದಾರರ ಸಭಾ ಭವನ ತಲ್ಲೂರು ಇಲ್ಲಿ ಸಂಘದ ಅಧ್ಯಕ್ಷ ಉದಯ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಕೃಷ್ಣ ಲೆಕ್ಕ ಪರಿಶೋಧನೆ ನಡೆಸಲಾದ ಆರ್ಥಿಕ ತಃಖ್ತೆಗಳು, ಅನುಪಾಲನಾ ವರದಿ, ಲಾಭಾಂಶ ವಿಂಗಡನೆ, ಬಜೆಟ್‌ ಮತ್ತು ಖರ್ಚು, 2023-24 ಸಾಲಿನ ಆಯ-ವ್ಯಯ ಪಟ್ಟಿ, ಹಾಗೂ 2024-25ನೇ ಸಾಲಿನ ಆಯವ್ಯಯ ಪತ್ರದ ಮಂಜೂರಾತಿ ಕುರಿತು ಚರ್ಚಿಸಿ 2023-24ನೇ ಸಾಲಿನಲ್ಲಿ ಸಂಘದ ವಿವಿಧ ನಿಧಿಗಳಿಂದ ಖರ್ಚು ಮಾಡಿದ ಮೊತ್ತಗಳಿಗೆ ಮಂಜೂರಾತಿ ಪಡೆದುಕೊಂಡರು.

ಸಂಘದ ಅಧ್ಯಕ್ಷ ಉದಯ ಪೂಜಾರಿ ಪ್ರಸ್ತಾವಿಸಿ ವರದಿ ಮಂಡಿಸಿ 10% ಡಿವಿಡೆಂಡ್ ಪಾವತಿಗೆ ಮಂಜೂರಾತಿ ಪಡೆದರು.

ಸಂಘವು 2023-24 ನೇ ಸಾಲಿನಲ್ಲಿ 96,53,091.33 ಲಕ್ಷ ನಿವ್ವಳ ಲಾಭಗಳಿಸಿದ್ದು, ಸುಮಾರು 60,03,77,272.37 ಠೇವಣಿ ಸಂಗ್ರಹಿಸಿ, ಠೇವಣಿ ಸಂಗ್ರಹಣೆಯಲ್ಲಿ ಶೇ. 18.87ರಷ್ಟು ಹೆಚ್ಚಳ ಸಾಧಿಸಿದೆ. 51,29,60,005.4 ಸಾಲ ಹೊರಬಾಕಿ ಇದ್ದು, ಶೇ.32.93 ರಷ್ಟು ವೃದ್ಧಿಯಾಗಿದೆ.

ಅಧ್ಯಕ್ಷ ಉದಯ ಪೂಜಾರಿ, ಸಂಘದ ಬೆಳವಣಿಗೆಗಾಗಿ ಸಹಕರಿಸಿ ಪೋತ್ಸಾಹಿಸಿದ ಎಲ್ಲಾ ನಿರ್ದೇಶಕರನ್ನು, ಸದಸ್ಯರನ್ನು, ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.

ಸಾರ್ವಜನಿಕ ಪರಿಹಾರ ನಿಧಿಯಡಿಯಲ್ಲಿ ಅನಾರೋಗ್ಯ ಪೀಡಿತ ಕುಟುಂಬಕ್ಕೆ ಪರಿಹಾರ ನೀಡಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭೆ ನಿತೇಶ್ ಪೂಜಾರಿ ಅವರನ್ನು ಪುರಸ್ಕರಿಸಲಾಯಿತು. ಸಾಂಕೇತಿಕವಾಗಿ ಸಂಘದ ಹೆಮ್ಮಾಡಿ, ನಾಡ, ತಲ್ಲೂರು, ಆಲೂರು ಶಾಖೆಗಳ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಸಂಘದ ಉಪಾಧ್ಯಕ್ಷ ನರಸಿಂಹ ಪೂಜಾರಿ, ನಿರ್ದೇಶಕರಾದ ಕೃಷ್ಣ ಪೂಜಾರಿ, ಶೇಖರ ಪೂಜಾರಿ, ಶಂಕರ ಪೂಜಾರಿ, ಶಂಕರ ಪೂಜಾರಿ, ಶ್ರೀನಿವಾಸ ಪೂಜಾರಿ, ನಾರಾಯಣ ಪೂಜಾರಿ, ರಘು ಪೂಜಾರಿ, ಜಯಪದ್ಮಾ, ಸರೋಜ ಜಿ. ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!