spot_img
Wednesday, April 1, 2026
spot_img

ವಿದೇಶದಲ್ಲಿ ಉದ್ಯೋಗಾವಕಾಶ: ಆ.31ರಂದು ಬೈಂದೂರಿನಲ್ಲಿ ಬೃಹತ್ ಅಂತಾರಾಷ್ಟ್ರೀಯ ಉದ್ಯೋಗ ಮೇಳ

ಬೈಂದೂರು : ವಿದೇಶದಲ್ಲಿ ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶ. ಉಚಿತ ತರಬೇತಿ, ಉಚಿತ ವಸತಿ ವ್ಯವಸ್ಥೆ, ಊಟ, ಉಪಹಾರದ ಜತೆಗೆ ವೀಸಾ ಹಾಗೂ ವಿಮಾನ ಟಿಕೆಟ್ ಕೂಡ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತವಾಗಲಿದ್ದು, ವಿದೇಶಿ ಭಾಷೆ ಕಲಿತು, ವಿದೇಶದಲ್ಲಿ ಉದ್ಯೋಗ ಮಾಡಬಹುದು. ಇಂತಹದ್ದೊಂದು ಅವಕಾಶ ಬೈಂದೂರಿಗೆ ಇದೇ ಮೊದಲ ಬಾರಿಗೆ ಬಂದಿದೆ.

ಸಮೃದ್ಧ ಬೈಂದೂರು ವತಿಯಿಂದ ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ(ಅಂತಾರಾಷ್ಟ್ರೀಯ) ಹಾಗೂ ಅಜಿನುರಹಾ ಸಂಸ್ಥೆಯ ಸಹಭಾಗಿತ್ವದಲ್ಲಿ ಆಗಸ್ಟ್ 31ರಂದು ಬೈಂದೂರಿನ ಜೆ.ಎನ್.ಆರ್. ಅಡಿಟೋರಿಯಂನಲ್ಲಿ ನಡೆಯಲಿದೆ.

ಇದೊಂದು ಅಂತಾರಾಷ್ಟ್ರೀಯ ಉದ್ಯೋಗ ಮೇಳವಾಗಿದ್ದು ಜಪಾನ್, ಮಲೇಷಿಯಾ, ಜರ್ಮನ್, ಕ್ರೋವೆಷಿಯಾ, ಗಲ್ಫ್ ರಾಷ್ಟ್ರಗಳ ವಿವಿಧ ಕಂಪೆನಿಗಳು ಭಾಗವಹಿಸಲಿವೆ. ವಿದ್ಯಾರ್ಥಿಗಳು, ಪದವೀಧರರು, ಪಿಯುಸಿ ಓದಿರುವರು ಹೀಗೆ ಎಲ್ಲ ವರ್ಗದವರಿಗೂ ವಿದೇಶದಲ್ಲಿ ಉದ್ಯೋಗಾವಕಾಶ ಪಡೆಯಬಹುದಾದ ವ್ಯವಸ್ಥೆ ಇದರಲಿಲ್ಲದೆ. ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಕೋರ್ಸ್, ತಾಂತ್ರಿಕೇತರ ಕೋರ್ಸ್ ಹೀಗೆ ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ಉದ್ಯೋಗಳು ಲಭ್ಯವಿದೆ. ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯ ಮೂಲಕವೇ ಇದು ನಡೆಯುವುದರಿಂದ ಸಂಪೂರ್ಣ ನಿರ್ವಹಣೆಯನ್ನು ಎನ್‌ಎಸ್‌ಡಿಸಿ‌ಐ ಮಾಡಲಿದೆ.

ಉದ್ಯೋಗ ಮೇಳಕ್ಕೆ ನೋಂದಾಯಿಸಿಕೊಳ್ಳಲು ಆಗಸ್ಟ್ 28 ಕೊನೆಯ ದಿನ. ಲಿಂಕ್ https://forms.office.com/r/T73nGPz24h  ಮೂಲಕ ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ 7901302000, 9778417835 ಅಥವಾ 7204166276 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಮೃದ್ಧ ಬೈಂದೂರು ಟ್ರಸ್ಟ್‌ನ ಪ್ರಕಟನೆ ತಿಳಿಸಿದೆ.

ಏನೇನು ಉದ್ಯೋಗಾವಕಾಶ:
ನರ್ಸಿಂಗ್ ಕೇರ್, ಬಿಲ್ಡಿಂಗ್ ಕ್ಲೀನಿಂಗ್ ಮ್ಯಾನೇಜ್ಮೆಂಟ್, ಕೈಗಾರಿಕ ಉತ್ಪನ್ನ ಸಿದ್ಧಡಿಸುವುದು, ನಿರ್ಮಾಣ ವಲಯ, ಏವಿಯೇಷನ್, ಕೃಷಿ, ಮೀನುಗಾರಿಕೆ ಮತ್ತು ಸಂಬಂಧಿತ ಉದ್ಯೋಗ, ಆಹಾರ ಪೂರೈಕೆ, ರೈಲ್ವೇ ಟ್ರಾನ್ಸ್‌ಪೋರ್ಟ್, ಫಾರೆಸ್ಟ್ರೀ ಹೀಗೆ ಹಲವು ಉದ್ಯೋಗಾವಕಾಶವಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!