Tuesday, September 17, 2024

ಸ್ವಾತಂತ್ರ್ಯ ಎಂದರೆ ಧ್ವನಿ ಎತ್ತುವುದು !

ಸ್ವಾತಂತ್ರ್ಯ ಎಂದರೆ ತನ್ನ ಇಚ್ಛೆಯಂತೆ ಬದುಕುವುದಾ ಅಥವಾ ತನ್ನಂತೆಯೇ ಮತ್ತೊಬ್ಬರ  ಬೆಳವಣಿಗೆ ಇಚ್ಛೆಯನ್ನು ಅರಿತು ಬದುಕುವುದಾ ಸಾಮಾನ್ಯವಾಗಿ ಪ್ರತಿಯೊಬ್ಬರು ಸ್ವಾತಂತ್ರ್ಯವನ್ನು ಬಯಸುತ್ತಾರೆ. ಭೂಮಿ ಮೇಲೆ ಜೀವಿಸುವ ಪ್ರತಿಯೊಂದು ಜೀವಿ ಕೂಡ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತದೆ. ಗಿಳಿ ಮರಿಯೊಂದನ್ನು ಪಂಜರದಲ್ಲಿ ಬಂಧಿಸಿಟ್ಟರೆ ಅದು ಮಾಲೀಕನಿಗೆ ಸಂತೋಷ ಕೊಡಬಹುದು ಆದರೆ ಗಿಳಿ ಮರಿಗೆ ಅದು ಒಂದು ರೀತಿಯ ಕಬ್ಬಣದ ಜೈಲಿನಲ್ಲಿ ತನ್ನನ್ನು ಬಂಧಿಸಿದಂತೆ ಭಾಸವಾಗುತ್ತದೆ. ಆ ಗಿಳಿ ಮರಿಯೂ ಬಿಡುಗಡೆಯ ಸ್ವಾತಂತ್ರ್ಯಕ್ಕಾಗಿ ತವಕಿಸುತ್ತಿರುತ್ತದೆ. ಹಾಗೆ ಯಾವುದೇ ಜೀವಿವೂ ಬಂಧನವನ್ನು ಇಷ್ಟ ಪಡುದಿಲ್ಲಾ. ಸ್ವಾತಂತ್ರವನ್ನು ಬಯಸುತ್ತದೆ.

ಸ್ವಾತಂತ್ರ್ಯವು ಯಾವುದೋ ಘಟನೆಗಳಿಂದ ಓಡಿಹೋಗುದಲ್ಲ, ಬದಲಾಗಿ ಕೆಲವು ಪರಿಸ್ಥಿತಿ ಕೆಟ್ಟದೆನಿಸಿದರು ಅದರ ವಿರುದ್ಧ ಧ್ವನಿ ಎತ್ತುವುದು. ನಾವು ಯಾವುದೋ ಒಂದನ್ನು ಸ್ಟೀಕರಿಸುತ್ತೇವೊ ಇಲ್ಲವೋ , ಅದನ್ನು ಒಪ್ಪುತ್ತೇವೋ ಇಲ್ಲವೋ ಆದರೆ ನಮ್ಮ ಹೊರತಾಗಿ ಸಮಾಜದ ಇನ್ಯಾರಿಗೋ ಅದು ಒಪ್ಪುತ್ತದೆ ಎಂದಾದರೆ ಅದನ್ನು ಹತ್ತಿಕ್ಕುವ ಅಥವಾ ನಿರ್ಭಂಧಿಸುವ ಯಾವ ಅಧಿಕಾರವು ನಮಗಿಲ್ಲಾ.

ಸಾವಿರಾರೂ ವರುಷಗಳ ಸಮೃದ್ಧ ಇತಿಹಾಸವಿರುವ ಪುಣ್ಯಭೂಮಿ ಭಾರತ . ಭಾರತ ಬಡ ದೇಶ ಎನ್ನಬೇಡಿ . ಅದು ಬಡವಾಗಿದ್ದರೆ  ಜಗತ್ತಿನ ಸಂಪಧ್ಭರಿತ ದೇಶವೆಂದು ಬ್ರಿಟೀಷರು ಹಾಗೂ ಇತರರೂ ಬರುತ್ತಲೇ ಇರಲಿಲ್ಲಾ.  ಹಿಂದೆ ಸುಮಾರು 565 ರಾಜ ಸಂಸ್ಥಾನಗಳನ್ನು ಒಳಗೊಂಡು ರಾಜರಿಂದ ಆಳಲ್ಪಡುತ್ತಿದ್ದ ಶ್ರೀಮಂತ ದೇಶ ಅದುವೇ ನಮ್ಮ ಭಾರತ . ಭಾರತ ಮಾತೆ ಕೋಟಿ ದೇವತೆಗಳ ತಾಯಿ , ಹಿಮಾಲಯವೇ ಅವಳ ಕೀರಿಟ , ಕಾಶ್ಮೀರವೇ ಅವಳ ಭುಜಭಲ , ಗಂಗೆ, ಯಮುನೆಯರೆ ಅವಳ ಹೃದಯ .  ಒಮ್ಮೆ ಚೀನಾದ ಯಾತ್ರಿಕನೊಬ್ಬ ಭಾರತವನ್ನು ಹೊಗಳಿದ್ದು ಹೀಗೆ ”  ಕಣ್ಣುಗಳು ನೋಡಿಲ್ಲಾ , ಕಿವಿಗಳು ಕೇಳಿಲ್ಲಾ,  ವಿಜಯನಗರದಷ್ಟು  ಸಂಪತ್ತಿರುವ ನಗರ ಜಗತ್ತಿನಲ್ಲೇ  ಇಲ್ಲಾ”. ಎಂದು ಅಂದು ಮುತ್ತು, ರತ್ನ, ಚಿನ್ನ ಗಳನ್ನು ಸಂತೆಯಲ್ಲಿ ಸೇರುಗಳಲ್ಲಿ ಮಾರುದನ್ನು ನೋಡಿ ಅವರು ಭಾರತವನ್ನು ಬಣ್ಣಿಸಿದ್ದರು.

ಭಾರತದಲ್ಲಿ ಆ ಕಾಲದಲ್ಲೇ ಮಹಾರಾಜ ನವಾಬರ ಹಾಗೂ ಇತರರ ಒಳಜಗಳಗಳೂ ನಡೆಯುತ್ತಲೆ ಇದ್ದವು. ಇದೇ ಸಂದರ್ಭದಲ್ಲಿ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಇಲ್ಲಿನ ಪರಿಸ್ಥಿತಿ ಕಂಡು ಭಾರತೀಯ ರಾಜರುಗಳನ್ನು ಸುಲಭವಾಗಿ ಗೆದ್ದರು.  ನಂತರ ತಮ್ಮದೇ ಆದ ಕಾನೂನುಗಳನ್ನು ಪ್ರಾರಂಭಿಸಿದರು.

1857 ರಲ್ಲಿ ಬ್ರಿಟಿಷರ ವಿರುದ್ಧ ಮಹಾ ಸಿಪಾಯಿ ದಂಗೆ ಪ್ರಾರಂಭವಾಯಿತು ಇದು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿಯಾಯಿತು. ಬ್ರೀಟಿಷರ ದಬ್ಬಾಳಿಕೆ ಎಷ್ಟರ ಮಟ್ಟಿಗೆ ಇತ್ತೆಂದರೆ ವಂದೇ ಮಾತರಂ ಗೀತೆಯನ್ನು ಹಾಡಿದರು ಸಹ ಅವರ ಗುಂಡಿನ ಎಟಿಗೆ ಬಲಿಯಾಗಬೇಕಿತ್ತು . ಆದರೆ ಭಾರತೀಯರಿಗೆ ಅದು ಕೇವಲ ಗೀತೆಯಾಗಿರಲಿಲ್ಲಾ ಅದು ಸ್ವಾತಂತ್ರ್ಯದ ಸಮರ್ಪಣ ಮಂತ್ರವಾಗಿತ್ತು.ಬ್ರಿಟಿಷರ ಗುಂಡಿನ ಎಟಿಗೆ  ಅಂದು ಬಲಿಯಾದವರು ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರು , ಅಮಾಯಕ ಜನರು . ಅಂದು ಬ್ರಿಟಿಷ್ ಸರ್ಕಾರ ನೀಡಿದ ಸಾವಿನ ಸಂಖ್ಯೆ ವಿರಳವಾಗಿರಬಹುದು ಆದರೆ ಜಲಿಯನ್ ವಾಲಾಬಾಗ್ ನಲ್ಲಿ ರಕ್ತಗತವಾಗಿದ್ದ ಮಣ್ಣು ಹೇಳಿದ್ದವು ಸಾವಿನ ಸಂಖ್ಯೆ ಎಷ್ಟೆಂದು.

1858 ರ ಸುಮಾರಿಗೆ ಭಾರತ ಸರ್ಕಾರದ ಕಾಯಿದೆ ಬ್ರಿಟಿಷ್ ಕ್ರೌನ್ ಭಾರತದ ನೇರ ನಿಯಂತ್ರಣ ವಹಿಸಿಕೊಳ್ಳಳು ಕಾರಣವಾಯಿತು. 1930 ರ ದಶಕದಲ್ಲಿ ಈ ನೀತಿ, ಭೂ ಸುಧಾರಣಾ ಕಾಯ್ದೆಗಳನ್ನು ಕ್ರಮೇಣ ಬ್ರೀಟಿಷರು ಶಾಸನಬದ್ಧಗೊಳಿಸಿದರು.

ಇದ್ದರ ಮಧ್ಯೆ ಉಪ್ಪಿನ ಸತ್ಯಾಗ್ರಹ, ದಂಡಿ ಸತ್ಯಾಗ್ರಹ, ಚಳುವಳಿಗಳು, ಕ್ರಾಂತಿಕಾರಿಗಳು ಹೋರಾಟಗಳು ನಡೆದವು. 1946 ರಲ್ಲಿ ಬ್ರಿಟನ್ ಲೇಬರ್ ಸರ್ಕಾರ ಮುಂದುವರಿಸಲು ಸಾಧ್ಯವಾಗದೇ , ಲೇಬರ್ ಪಕ್ಷ ಆಡಳಿತಕ್ಕೆ  ಬಂದ ಮೇಲೆ ಜಿನ್ನಾರವರ ಹಟದಿಂದ ಭಾರತಕ್ಕೆ ಸ್ವಾತಂತ್ಯದ ಭರವಸೆ ಮೂಡಿತು.  1947 ರ ಮಧ್ಯರಾತ್ರಿಯಲ್ಲಿ ಜಗತ್ತು ಮಲಗಿರುವಾಗ ಭಾರತವು ಸ್ವಾತಂತ್ರ್ಯದಿಂದ ಎಚ್ಚರಗೊಂಡಿತ್ತು. ಅಂದು ಮಹಾತ್ಮರ ತ್ಯಾಗ ,ಬಲಿದಾನಗಳು ಮಾರ್ದನಿಸಿದ್ದವು. ಅಂದು ಪ್ರಧಾನಿಯಾಗಿ ಜವಹರ್ ಲಾಲ್ ನೆಹರೂ ಅಧಿಕಾರ ಸ್ವೀಕರಿಸಿದರು .ಅ೦ತು ಭಾರತಾಂಬೆ ಬ್ರೀಟಿಷರ ದಾಸ್ಯದ ಸಂಕೋಲೆಗಳಿಂದ ಬಿಡುಗಡೆ ಹೊಂದಿದ ದಿನ . ಮಧ್ಯರಾತ್ರಿ ಸ್ವಾತಂತ್ರ್ಯದ ಘಂಟೆ ಭಾರಿಸುತ್ತಲೇ ಭಾರತ ಹೊಸ ಮನ್ವಂತರಕ್ಕೆ ಸಾಕ್ಷಿಯಾಯಿತು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೇಳುವಂತೆ , ಸಾಮಾಜಿಕ ಆರ್ಥಿಕ ‘ ಶೈಕ್ಷಣಿಕ , ಸಮಾನತೆ , ನಿಜವಾದ ಸ್ವಾತಂತ್ಯ ಅದು ಪ್ರತಿಯೊಬ್ಬ  ಪ್ರಜೆಗೂ ಲಭಿಸದ ಹೊರತು ನಿಜವಾದ ಸ್ವಾತಂತ್ರ್ಯ ದೊರಕಿದಂತಲ್ಲಾ.  ಇಂದು ನಾವು ಸ್ವಾತಂತ್ರ್ಯ ಸಿಕ್ಕಿ 78 ವರ್ಷ ಕಳೆದರೂ ದೇಶದಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ . ನಾವಿಂದು ಕುಳಿತಲ್ಲೇ ಜಗತ್ತನ್ನು ನೋಡುವಷ್ಟು ಮುಂದುವರೆದಿದ್ದೇವೆ . ಆದರೆ ಕೆಲವು ಭಾಗಗಳಿಗೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲಾ, ವಿದ್ಯುತ್ ಸಂಪರ್ಕ ಇಲ್ಲಾ. ನಾವು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆದಿದ್ದೆ ಆದರೆ ಮೂಲಭೂತ ಅವಶ್ಯಕತೆಗಳಲ್ಲಿ ಹಿಂದುಳಿದಿದ್ದೇವೆ. ಅದೇನೆ  ಇರಲಿ ನಮ್ಮ ಹಿರಿಯರು ಕೊಟ್ಟ ಈ ಸ್ವಾತಂತ್ರ್ಯವನ್ನು ನಾವು ಗೌರವಿಸಬೇಕು.  ಸಮಾಜದಲ್ಲಿ ಒಬ್ಬರು ಇನ್ನೂಬ್ಬರನ್ನು ಅರಿತು ಬಾಳಿದಾಗ ಆ ಗಾಂಧಿ ಕಂಡ ರಾಮರಾಜ್ಯ ನಮ್ಮದಾಗುವುದು.

ಸುಜಯ ಶೆಟ್ಟಿ ಹಳ್ನಾಡು
ಡಾ. ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!