spot_img
Saturday, December 7, 2024
spot_img

ಅಂಕೋಲ ಶಿರೂರು ಗುಡ್ಡ ಕುಸಿತ | ಅವಶೇಷಗಳಡಿಯಲ್ಲಿ ಸಿಲುಕಿರುವವರಿಗಾಗಿ ಮುಂದುವರಿದ ಶೋಧ ಕಾರ್ಯ !

ಜನಪ್ರತಿನಿಧಿ (ಶಿರೂರು) : ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಬೆಳಗಾವಿಯಿಂದ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್‌ನ 44 ಸದಸ್ಯರ ತಂಡವನ್ನು ನಿಯೋಜಿಸಲಾಗಿದೆ.

ಅವಶೇಷಗಳ ನಡುವೆ ನಾಪತ್ತೆಯಾದ ವ್ಯಕ್ತಿಗಳನ್ನು ವಿಶೇಷವಾಗಿ ಕಾಸರಗೋಡು ಮೂಲದ ಅರ್ಜುನ್‌ಗಾಗಿ ಶೋಧ ನಡೆಯಲಿದೆ . ಟ್ರಕ್ ಚಾಲಕ ಅರ್ಜುನ್ ಜೋಯಿಡಾ ತಾಲೂಕಿನ ಜಗಲಪೇಟೆಯಿಂದ ಮರವನ್ನು ಸಾಗಿಸುತ್ತಿದ್ದಾಗ ಆರು ದಿನಗಳ ಹಿಂದೆ ಈ ಪ್ರದೇಶದಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಸ್ಥಳದಲ್ಲಿ ನಿಧಾನಗತಿಯ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಕೇರಳ ಮಾಧ್ಯಮಗಳಿಂದ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸೇನಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಸೇನಾ ಘಟಕ ಇಲ್ಲಿಗೆ ಆಗಮಿಸಿದೆ. ನಮ್ಮಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಸೇನಾ ಸಿಬ್ಬಂದಿ ಈಗ ಕೆಲಸ ಮಾಡುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಕೇರಳ ಸರ್ಕಾರದಿಂದ ಮನವಿ ಮಾಡಲಾಗಿದ್ದು, ಜಿಲ್ಲಾಡಳಿತ ಸೇನೆಯ ನೆರವು ಪಡೆಯಲು ನಿರ್ಧರಿಸಿದೆ ಎಂದು ಟ್ರಕ್ ಗುಡ್ಡ ಕುಸಿತಗೊಂಡ ಅವಶೇಷಗಳ ಅಡಿಯಲ್ಲಿ ಹೂತುಹೋಗಿರಬಹುದು ಎಂದು ನಾವು ಭಾವಿಸುತ್ತೇವೆ. ಸೇನೆಯ ಘಟಕವು ನಾಲ್ಕು ದಿನಗಳ ಕಾಲ ಇಲ್ಲಿ ಇರುತ್ತದೆ ಎಂದು ಅವರು ಹೇಳಿದರು.

ಶೋಧ ಕಾರ್ಯವನ್ನು ತ್ವರಿತಗೊಳಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಕರೆ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕೇರಳ ಸಾರಿಗೆ ಸಚಿವರು ಕರೆ ಮಾಡಿದ್ದಾರೆ” ಎಂದು ಹೇಳಿದರು. ಟ್ರಕ್ ಸಿಕ್ಕಿಹಾಕಿಕೊಂಡಿರುವ ಶಂಕಿತ ಗಂಗವಳ್ಳಿ ನದಿಯಲ್ಲಿ ಸೇನಾ ಘಟಕ ಶೋಧ ನಡೆಸಲಿದೆ. ಅವರಿಗೆ NDRF, ASDRF ಮತ್ತು ಜಿಲ್ಲಾ ಪೊಲೀಸರು ನೆರವು ನೀಡಲಿದ್ದಾರೆ ಎಂದು ವಿವರಿಸಿದರು.

ಅವಶೇಷಗಳಡಿಯಲ್ಲಿ ಹೂತು ಹೋಗಿರುವ ಲಾರಿ ಚಾಲಕ ಅರ್ಜುನ್ ಸಂಬಂಧಿಕರು ಈ ಹಿಂದೆ ದೂರು ದಾಖಲಿಸಿದ್ದರು. ಹೊಟೇಲ್ ಬಳಿ ವಿರಾಮಕ್ಕೆ ನಿಂತಿದ್ದು, ಗುಡ್ಡ ಕುಸಿತ ಸಂಭವಿಸಿದಾಗ ವಾಹನದೊಳಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆತ ಬದುಕಿರಬಹುದೆಂದು ಸಂಬಂಧಿಕರು ಶಂಕಿಸಿದ್ದು, ಫೋನ್ ರಿಂಗಣಿಸುತ್ತಿದೆ ಎಂಬ ಮಾಹಿತಿ ಇದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!