Sunday, September 8, 2024

ಸುಣ್ಣಾರಿ ಎಕ್ಸಲೆಂಟ್ ಕಾಲೇಜನಲ್ಲಿ ಕಾನೂನು ಅರಿವು-ನಶಾ ಮುಕ್ತ ಭಾರತ: ಮಾಹಿತಿ

ಕುಂದಾಪುರ: ಸುಣ್ಣಾರಿಯ ಎಕ್ಸಲೆಂಟ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ ಜೊತೆಗೆ ಪಠ್ಯೇತರ ಚಟುವಟಿಕೆ ಮಾತ್ರ ಅಲ್ಲ ವಿದ್ಯಾರ್ಥಿಗಳಿಗೆ ಇವತ್ತಿನ ಸಾಮಾಜಿಕವಾದ ಸವಾಲಿನ ಬಗ್ಗೆ ಅರಿವು ಮೂಡಿಸುವಂಥ ಅನೇಕ ಶಿಬಿರಗಳನ್ನು ನಡೆಸುತ್ತಿದ್ದು ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮತ್ತು ನಶಮುಕ್ತ ಭಾರತ ಈ ವಿಷಯದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಕೋಟ ಪೊಲೀಸ್ ಠಾಣೆಯ ಪಿ.ಎಸ್.ಐ ಗುರುನಾಥ್ ಬಿ ಹಾದಿಮನಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾದಕ ದ್ರವ್ಯದ ವ್ಯಸನದಿಂದ ಯಾವ ರೀತಿ ನಮ್ಮ ದೇಹದ ಮೇಲೆ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಯಾವೆಲ್ಲ ದುಷ್ಪರಿಣಾಮಗಳು ವ್ಯಕ್ತಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಆಗುತ್ತದೆ ಇದರ ಬಗ್ಗೆ ಸುಧೀರ್ಘ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಇವತ್ತಿನ ಯುವಜನತೆ ಮಾದಕ ದ್ರವ್ಯದ ವ್ಯಸನಗಳಿಗೆ ಅಧಿಕವಾಗಿ ಬಲಿಯಾಗುತ್ತಿದ್ದಾರೆ ನಾವು ಇವತ್ತು ವಿದ್ಯಾರ್ಥಿಗಳನ್ನು ಒಬ್ಬ ವೈದ್ಯ, ಇಂಜಿನಿಯರ್, ಕಂಪನಿ ಸೆಕ್ರೆಟರಿ, ಸಿ‌ಎ ಇಂಥ ನೂರಾರು ಹುದ್ದೆಗಳಿಗೆ ತಯಾರು ಮಾಡುವ ಮೊದಲು ನಾವು ಸಮಾಜಕ್ಕೆ ಉತ್ತಮ ಪ್ರಜೆಯನ್ನು ರೂಪಿಸುವಂತ ಜವಾಬ್ದಾರಿ ನಮ್ಮಂತ ಶಿಕ್ಷಣ ಸಂಸ್ಥೆಗೆ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂ. ಎಂ ಹೆಗ್ಡೆ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಎಕ್ಸಲೆಂಟ್ ಪಿಯು ಕಾಲೇಜ್ನ ಅಧ್ಯಕ್ಷರಾಗಿರುವ ಎಂ. ಮಹೇಶ್ ಹೆಗ್ಡೆಯವರು ಸಭೆಯ ಅಧ್ಯಕ್ಷೀಯ ಮಾತನಾಡಿ ನಮ್ಮ ಸಂಸ್ಥೆ ಪಾಠದ ಜೊತೆಗೆ ಸಮಾಜದಲ್ಲಿ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಒಬ್ಬ ಸಜ್ಜನ ವ್ಯಕ್ತಿಯನ್ನು ಹೇಗೆ ರೂಪಿಸಬೇಕು ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸರೋಜಿನಿ ಪಿ ಆಚಾರ್ಯ ಸ್ವಾಗತಿಸಿದರು. ಇಂಗ್ಲಿಷ್ ಉಪನ್ಯಾಸಕರಾದ ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ಶಿಕ್ಷಕಿ ಪೃಥ್ವಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!