Sunday, September 8, 2024

ಶಿರಸಿ – ಕುಮಟಾ ಸಂಪರ್ಕ ರಸ್ತೆ : ಮಳೆಯಿಲ್ಲದಿದ್ದರೇ ಸಂಜೆ ಸಂಚಾರಕ್ಕೆ ಮುಕ್ತ

ಜನಪ್ರತಿನಿಧಿ (ಶಿರಸಿ) : ಗುಡ್ಡ ಕುಸಿದು ಶಿರಸಿ- ಕುಮಟಾ ಸಂಪರ್ಕ ಕಡಿತಗೊಳಿಸಿದ್ದ ರಾಷ್ಟ್ರೀಯ ಹೆದ್ದಾರಿ 766 ಇ ಸಂಚಾರಕ್ಕೆ ಇಂದು(ಬುಧವಾರ, ಜುಲೈ 17) ಸಂಜೆ ವೇಳೆಗೆ ತೆರವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕಳೆದ 24 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ನಡುವೆ ಜೆಸಿಬಿ, ಹಿಟಾಚಿ ಬಳಸಿ ತೆರವು‌ ಮಾಡಲಾಗುತ್ತಿದೆ. ಆದರೆ ಮೊಗೆದಷ್ಟೂ ಮಣ್ಣು, ಧರೆಯ ಮೇಲಿನ ಗಿಡ‌ಮರಗಳು ಜಾರಿ ಬರುತ್ತಿವೆಯಾದ್ದರಿಂದ ನಿರೀಕ್ಷೆಯಂತೆ ತೆರವಿಗೆ ಸಾಧ್ಯವಾಗಿರಲಿಲ್ಲ.

ಸೋಮವಾರ ರಾತ್ರಿ 1:45 ರ ನಂತರ ಮಂಗಳವಾರ ಮಣ್ಣು, ಮರ ಗಿಡಗಳ ತೆರವು‌ ನಡೆದಿತ್ತು. ಬುಧವಾರ ಬೆಳಗ್ಗಿನಿಂದಲೇ ಮತ್ತೆ ಕೆಲಸ ಆರಂಭವಾಗಿದ್ದು, ಸಂಜೆ ಆರೇಳು ಗಂಟೆಯ ವೇಳೆಗೆ ಮರು ಸಂಚಾರಕ್ಕೆ ಅನು ಮಾಡಿಕೊಡಬಹುದು ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ತಹಶೀಲ್ದಾರ್ ಶ್ರೀಧರ ಮುಂದಲಮನಿ, ಬುಧವಾರ ಮಳೆ ಬಾರದೇ ಹೋದರೆ ಮಣ್ಣು ಜರಿಯುವದು ನಿಲ್ಲಬಹುದು. ಮಳೆ ಆಧರಿಸಿ ಸಂಚಾರ ಮುಕ್ತಗೊಳಿಸುವುದರ ಸಾಧ್ಯತೆ ತಿಳಿಯಲಿದೆ ಎಂದು ತಿಳಸಿದ್ದಾರೆ.

ಇನ್ನು, ಈ‌ ನಡುವೆ ಕೊರೆದ ಧರೆಯ‌ ನಡುವೆ ಒರತೆ ನೀರೂ ಬರುತ್ತಿದ್ದು, ಇದೂ ಗುಡ್ಡವನ್ನು ಜಾರಿಸಲು ಕಾರಣ ಆಗುತ್ತಿದೆ ಎನ್ನಲಾಗಿದೆ. ವೈಜ್ಞಾನಿಕವಾಗಿ ಸಾಗರ ಮಾಲಾ ಯೋಜನೆಯಲ್ಲಿ ಹೆದ್ದಾರಿ ಅಗಲೀಕರಣ, ಧರೆ ಕತ್ತರಿಸುವಲ್ಲಿ ವಿಫಲ ಆಗಿದ್ದೇ ಇದಕ್ಕೆ ಸಮಸ್ಯೆ ಎನ್ನಲಾಗಿದೆ.

ಸದ್ಯ,  ಶಿರಸಿ ನಿಲೇಕಣಿ ಬಳಿ ಹಾಗೂ ದಿವಗಿ ಬಳಿ ಬದಲಿ‌ ಮಾರ್ಗ ಸೂಚಿಸಲಾಗಿದೆ. ಶಿರಸಿಯಿಂದ ಕರಾವಳಿಗೆ ಯಲ್ಲಾಪುರ ಅಂಕೋಲಾ, ಶಿರಸಿ ಯಾಣ ಮಾರ್ಗ ಅಥವಾ ಸಿದ್ದಾಪುರ ಬಡಾಳ ಘಟ್ಟವನ್ನು ಬಳಸುವಂತೆ ಸೂಚಿಸಲಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!