spot_img
Tuesday, March 31, 2026
spot_img

ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಸಾಧನೆ

ಕುಂದಾಪುರ: ದಾವಣಗೆರೆಯಲ್ಲಿ ನಡೆದಿರುವ ಜು.14ರಂದು ನಡೆದ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ಶಿಪ್ 2024ರ 11ರ ವಯೋಮಾನದ ವಿಭಾಗದಲ್ಲಿ ಕುಮಿಟಿ ಹಾಗು ಕಟಾ ಎರಡರಲ್ಲೂ ಕುಂದಾಪುರದ ಖಾರ್ವಿಕೇರಿ ನಿವಾಸಿ ಗುರುಕುಲ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ಏಳನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಾನಿಧ್ಯ ಸಂತೋಷ್ ನಾಯ್ಕ್ ಚಿನ್ನದ ಪದಕ ಪಡೆದಿದ್ದಾರೆ.

8ರ ವಯೋಮಾನದ ವಿಭಾಗದಲ್ಲಿ ಕಟಾದಲ್ಲಿ ಕುಂದಾಪುರದ ಖಾರ್ವಿಕೇರಿ ನಿವಾಸಿ, ಗುರುಕುಲ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ಮೂರನೇ ತರಗತಿಯ ವಿದ್ಯಾರ್ಥಿ ಸಂಕಲ್ಪ ಸಂತೋಷ್ ನಾಯ್ಕ್ ಚಿನ್ನದ ಪದಕ ಪಡೆದಿದ್ದಾರೆ.

ಇವರು ಕುಂದಾಪುರದ ಕೆಡಿ‌ಎಫ್ ಕರಾಟೆ ಶಾಲೆಯ ಕಿರಣ್ ಕುಂದಾಪುರ ಇವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಪ್ರಸ್ತುತ ಖಾರ್ವಿಕೇರಿ ನಿವಾಸಿ, ಟಾಟಾ ಟೆಲಿಸಸ್ ಮ್ಯಾನೇಜರ್ ಆಗಿರುವ ಸಂತೋಷ್ ನಾಯ್ಕ್ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದ ಗ್ರಂಥ ಪಾಲಕಿ ಆಗಿರುವ ಶ್ರೀಮತಿ ಶ್ಯಾಮಲ ಸಂತೋಷ ನಾಯ್ಕ್ ಇವರ ಮಕ್ಕಳು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!