Sunday, September 8, 2024

ಸುಸ್ಥಿರ ಸಮಾಜದಲ್ಲಿ ಕುಟುಂಬದ ಪಾತ್ರ ಪ್ರಮುಖ-ವೆಂಕಟರಾಮ ಭಟ್

ಕುಂದಾಪುರ: ಸುಸ್ಥಿರವಾದ ಸಮಾಜ ನಿರ್ಮಿಸಲು ಸುದೃಢವಾದ ಕುಟುಂಬ ಅಗತ್ಯ. ಕುಟುಂಬವು ವ್ಯಕ್ತಿಗಳ ಸಹಕಾರ ಮತ್ತು ಶಿಸ್ತು ಬದ್ಧ ಯೋಜನೆ ಮತ್ತು ಕಾರ್ಯನಿರ್ವಹಣೆಯಿಂದ ಸುದೃಡವಾಗುತ್ತದೆ. ಮಾದಕ ದ್ರವ್ಯಗಳ ಬಳಕೆ ಅಥವಾ ಭೌತಿಕ ಅಥವಾ ಮಾನಸಿಕ ದುಶ್ಚಟಗಳು ಕುಟುಂಬದ ಅಭಿವೃದ್ಧಿಗೆ ಮಾರಕವಾಗಿವೆ. ದುಶ್ಚಟಗಳು ವ್ಯಕ್ತಿಯ ಮತ್ತು ಕುಟುಂಬದ ಆರೋಗ್ಯ ಮತ್ತು ಹಣಕಾಸು ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಮನೆಯಲ್ಲಿ ತಾಯಿಯ ಮಹತ್ವ ಈ ನಿಟ್ಟಿನಲ್ಲಿ ಪ್ರಮುಖವಾಗಿದೆ ಮಕ್ಕಳು ಯಾವುದೇ ರೀತಿಯ ದುಶ್ಚಟ ಗಳಿಗೆ ಬಲಿಯಾಗದಂತೆ ತಡೆಯಲು ತಾಯಂದಿರು ಸದಾ ಎಚ್ಚರಿಕೆಯಿಂದ ಇರಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜದಲ್ಲಿ ಜ್ಞಾನ ವಿಕಾಸದ ಮೂಲಕ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರದ ಸಹಪ್ರಾಧ್ಯಾಪಕ ಡಾ. ವೆಂಕಟರಾಮ್ ಭಟ್ ನೆಂಪು ಹೇಳಿದರು.

ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇವಲ್ಕುಂದ ಒಕ್ಕೂಟದ ಆಶ್ರಯದಲ್ಲಿ ನಡೆದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕಾರ್ಯಕ್ರಮದ ಮೊದಲು ಜಗದ್ಗುರು ಶ್ರೀ ಶಂಕರಾಚಾರ್ಯ ಮತ್ತು ಶ್ರೀ ಮಂಜುನಾಥ ಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಆರತಿ ನಡೆಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ವಹಿಸಿದ್ದರು

ವಲಯ ಮೇಲ್ವಿಚಾರಕ ಚಂದ್ರ ಮಧುವನ, ಒಕ್ಕೂಟದ ಉಪಾಧ್ಯಕ್ಷರು, ಪದಾಧಿಕಾರಿಗಳು, ಸೇವಾ ಪ್ರತಿನಿಧಿ ಯಶೋದಾ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!