Sunday, September 8, 2024

ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಬೈಂದೂರು ಭಾಗದಲ್ಲಿ ನೆರೆ: ತಗ್ಗು ಪ್ರದೇಶ ಜಲವ್ರತ

ಬೈಂದೂರು: ಬುಧವಾರ ಸಂಜೆಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ನದಿಗಳು ತುಂಬಿ ಹರಿಯುತ್ತಿವೆ. ಬೈಂದೂರು ತಾಲೂಕು, ಕುಂದಾಪುರ ತಾಲೂಕಿನಾದ್ಯಂತ ಎಲ್ಲ ನದಿಗಳು ಕೂಡಾ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳಯ ಸಂಪೂರ್ಣವಾಗಿ ನೀರಿನಿಂದ ತುಂಬಿದ್ದು ಬಹುತೇಕ ಕಡೆ ನೆರೆ ಕಾಣಿಸಿಕೊಂಡಿದೆ.

ಪ್ರಮುಖವಾಗಿ ಬೈಂದೂರು ತಾಲೂಕಿನ ನಾವುಂದ, ಸಾಲ್ಬುಡ, ಬಡಾಕೆರೆ, ಪಡುಕೋಣೆ ಮುಂತಾದ ಭಾಗಗಳಲ್ಲಿ ನೆರೆ ಕಾಣಿಸಿಕೊಂಡಿದ್ದು ಮನೆಗಳಿಗೆ ನೀರು ನುಗ್ಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರೋಪಾಯ ಕಾರ್ಯಗಳು ಭರದಿಂದ ನಡೆಯುತ್ತಿದೆ. ದೋಣೀಯ ಮೂಲಕ ನೆರೆ ಪೀಡಿgತ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆತರಲಾಗುತ್ತಿದೆ. ನಾವುಂದ ಗ್ರಾಮ ಸಾಲ್ಬುಡ ಪರಿಸರದಲ್ಲಿ ಪ್ರತಿವರ್ಷವೂ ನೆರೆ ಕಾಣಿಸಿಕೊಳ್ಳುತ್ತದೆ. ಇಲ್ಲಿ ಸೇತುವೆಯಾಗಬೇಕು ಎನ್ನುವ ಬೇಡಿಕೆ ಇದ್ದರೂ ಕೂಡಾ ಸೇತುವೆ ನಿರ್ಮಾಣ ಆಗಿಲ್ಲ. ಹಾಗಾಗಿ ರಾತ್ರಿ ವೇಳೆ ನೆರೆನೀರು ಗ್ರಾಮಕ್ಕೆ ನುಗ್ಗಿದರೆ ಜನರನ್ನು ಸುರಕ್ಷಿತವಾಗಿ ಕರೆತರುವುದೇ ಪ್ರಾಯಾಸದ ಕೆಲಸ. ಈ ಬಾರಿಯೂ ಕೂಡಾ ಈ ಭಾಗದಲ್ಲಿ ನೆರೆ ಕಾಣಿಸಿಕೊಂಡಿದ್ದು ಜನಜೀವನ ಆತಂಕದಲ್ಲಿದೆ.

ಸೌಪರ್ಣಿಕ ನದಿಪಾತ್ರದ ಉದ್ದಕ್ಕೂ ಕೂಡಾ ತಗ್ಗು ಪ್ರದೇಶಗಳು ಮುಳುಗುತ್ತಿವೆ. ಪಡುಕೋಣೆ, ಬಡಾಕೆರೆಯ ತಗ್ಗು ಪ್ರದೇಶಗಳು, ಗದ್ದೆ, ತೋಟ ಎಲ್ಲವೂ ನೀರಿನಿಂದ ಒಂದಾಗಿ ಬಿಟ್ಟಿದೆ.

ಮಾರಣಕಟ್ಟೆಯಲ್ಲೂ ತುಂಬಿ ಹರಿದ ನದಿ
ಬುಧವಾರ ಸುರಿದ ಭಾರೀ ಮಳೆಗೆ ಮಾರಣಕಟ್ಟೆಯಲ್ಲಿ ನದಿ ತುಂಬಿ ಹರಿಯುತ್ತಿದೆ. ಗುರುವಾರ ಬೆಳಿಗ್ಗೆ ಮಾರಣಕಟ್ಟೆ ದೇವಸ್ಥಾನ ಎದುರು ಭಾಗದ ತನಕ ಹೊಳೆಯ ನೀರು ಬಂದಿದೆ. ಮಧ್ಯಾಹ್ನವಾಗುತ್ತಿದ್ದಂತೆ ನೀರು ಇಳಿದಿದೆ.

ಕುಬ್ಜಾ ನದಿ ಕೂಡಾ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನದಿ ಪಾತ್ರದ ಉದ್ದಕ್ಕೂ ಆತಂಕ ಸೃಷ್ಟಿಯಾಗಿದೆ. ಆಜ್ರಿ, ಸೌಕೂರು, ಮುಂಬಾರು ಮೊದಲಾದ ಭಾಗಗಳಲ್ಲಿ ನೀರು ಕೃಷಿಭೂಮಿಗಳಿಗೆ ನುಗ್ಗಿದೆ. ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾಡಿ ಭಾಗದಲ್ಲಿ ಕೂಡಾ ಹಳ್ಳಗಳು ತುಂಬಿ ಹರಿಯುತ್ತಿವೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!