Sunday, September 8, 2024

ರಾಹುಲ್‌ ಕಿಡಿ : ಸದನ ಕೋಲಾಹಲ | ರಾಹುಲ್‌ ಹೇಳಿದ್ದೇನು ? ಮೋದಿ ಪ್ರತಿಕ್ರಿಯೆ ಏನು ?

ಜನಪ್ರತಿನಿಧಿ (ನವ ದೆಹಲಿ) : ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇದೇ ಮೊದಲ ಬಾರಿ ಆಡಳಿತ ಪಕ್ಷದ ವಿರುದ್ಧ ಅಂಬರಿಸಿದ್ದಾರೆ.  ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸಾಚಾರ ಹಾಗೂ ದ್ವೇಷದಲ್ಲಿ ಹಗಲಿರುಳು ನಿರತರಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ ರಾಹುಲ್‌ ಹೇಳಿಕೆಗೆ ಸಂಸತ್‌ ಭವನದಲ್ಲಿ ಆಡಳಿತ ಪಕ್ಷದದಿಂದ ಭಾರಿ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಯಿತು.

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ತೀಕ್ಷ್ಣವಾಗಿ ಹರಿಹಾಯ್ದ ರಾಹುಲ್‌ ಹೇಳಿಕೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ ಆಕ್ಷೇಪ ವ್ಯಕ್ತ ಪಡಿಸಿದರು.

ರಾಹುಲ್‌ ಮಾತನಾಡುತ್ತಿದ್ದ ಸಂದರ್ಭದಲ್ಲೆಲ್ಲಾ ಆಡಳಿತ ಪಕ್ಷದ ಸಂಸದರು ಪದೇ ಪದೇ ಅಡ್ಡಪಡಿಸಿದರು. ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಮೋದಿ ರಾಹುಲ್‌ ಹೇಳಿಕೆಯನ್ನು ತಿರುಚಲು ಪ್ರಯತ್ನಿಸಿದರು. ರಾಹುಲ್‌ ಪ್ರತಿಯಾಗಿ ಮೋದಿ ವಿರುದ್ಧ ದಾಳಿ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಉಭಯ ಪಕ್ಷಗಳು ಪರಸ್ಪರ ಟೀಕಾ ಪ್ರಹಾರ ಕಂಡು ಬಂತು.

ಸದನದಲ್ಲಿ ರಾಹುಲ್‌ ಗಾಂಧಿ ಹೇಳಿದ್ದೇನು ?
ತಮ್ಮನ್ನು ತಾವು ಹಿಂದೂಗಳೆಂದು ಕೆದುಕೊಳ್ಳುವವರು ಹಿಂಸಾಚಾರ ಹಾಗೂ ದ್ವೇಷದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಹೇಳಿಕೆ ನೀಡಿದರು. ಕೇಂದ್ರದಲ್ಲಿದ್ದ ಕೆಲವು ಸಚಿವರು ರಾಹುಲ್‌ ಹೇಳಿಕೆಗೆ ತೀರ್ವ ಆಕ್ಷೇಪ ವ್ಯಕ್ತಪಡಿಸಿದರು. ಸಚಿವರ ಆಕ್ಷೇಪವನ್ನು ಸಮರ್ಥಿಸಿಕೊಂಡ ರಾಗಾ, ಹಿಂದೂ ಯಾವತ್ತೂ ದ್ವೇಷ ಮತ್ತು ಹಿಂಸೆಯನ್ನು ಹರಡುವುದಿಲ್ಲ, ನಾನು ಹಿಂದೂ ಸಮುದಾಯದ ಬಗ್ಗೆ ಹೇಳಿದ್ದಲ್ಲ. ಮೋದಿ ಎಂದರೇ ಇಡಿ ಹಿಂದೂ ಸಮಾಜವಲ್ಲ, ಬಿಜೆಪಿ ಎಂದರೇ ಇಡಿ ಹಿಂದೂ ಸಮಾಜವಲ್ಲ, ಆರ್‌ಎಸ್‌ಎಸ್‌ ಎಂದರೇ ಹಿಂದೂ ಸಮಾಜವಲ್ಲ. ಬಿಜೆಪಿ ಹಿಂದೂ ಮತ್ತು ದ್ವೇಷವನ್ನು, ಹಿಂಸಾಚಾರವನ್ನು ಹರಡುತ್ತದೆ ಎಂದು ತಿರುಗೇಟು ನೀಡಿದರು.

 ರಾಹುಲ್‌ ಹೇಳಿಕೆಗೆ ಮೋದಿ ಪ್ರತಿಕ್ರಿಯಿಸಿದ್ದೇನು ?
ರಾಹುಲ್‌ ವಿರೋಧ ಪಕ್ಷದ ನಾಯಕನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಇದೇ ಮೊದಲ ಬಾರಿಗೆ ಸದನದಲ್ಲಿ ಮುಖಾಮುಖಿಯಲ್ಲಿ ನರೇಂದ್ರ ಮೋದಿ ʼಇಡೀ ಹಿಂದೂ ಸಮಾಜವನ್ನು ಹಿಂಸಾ ಪ್ರವೃತ್ತಿಯಲ್ಲಿ ನಿರತವಾಗಿದೆ ಎಂದು ಹೇಳುವುದು ಗಂಬೀರ ಆರೋಪ ಎಂದು ಕಿಡಿ ಕಾರಿದರು. ಮೋದಿ ಆಕ್ಷೇಪಕ್ಕೆ ಇಡೀ ಮಂತ್ರಿಮಂಡಲ ನೆರವಿಗೆ ನಿಂತಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!