spot_img
Wednesday, January 22, 2025
spot_img

ಜೂ.17: ಕುಂದಾಪುರ ರೈಲು ನಿಲ್ದಾಣದಲ್ಲಿ ದಾನಿಗಳ ಮೂಲಕ ನೀಡಲ್ಪಟ್ಟ ಪ್ರಯಾಣಿಕರ ಶೆಲ್ಟರ್ ಉದ್ಘಾಟನೆ

ಕುಂದಾಪುರ: ನೂತನ ಸಂಸದರರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಜೂನ್ 17 ಬೆಳಿಗ್ಗೆ 10 ಗಂಟೆಗೆ‌ ಕುಂದಾಪುರ ರೈಲು ನಿಲ್ದಾಣದಲ್ಲಿ ದಾನಿಗಳ ಮೂಲಕ ನೀಡಲ್ಪಟ್ಟ ಪ್ರಯಾಣಿಕರ ಶೆಲ್ಟರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಕುಂದಾಪುರ ನಿಲ್ದಾಣಕ್ಕೆ ಆಗಮಿಸಲಿದ್ದು, ಕೊಡುಗೆ ನೀಡಿದ ರಾಘವೇಂದ್ರ ಜ್ಯುವೆಲ್ಲರಸ್ ಮಾಲೀಕರಾದ ಶ್ರೀಮತಿ ಶ್ರೀ ವೆಂಕಟೇಶ್ ಶೇಟ್ ಇವರನ್ನು ಸನ್ಮಾನಿಸಲಿದ್ದಾರೆ.

ಸುಮಾರು ೨ ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಈ ಶೆಲ್ಟರ್ ಪ್ರಯಾಣಿಕರಿಗೆ ಸರ್ವ ಋತುಗಳಲ್ಲೂ ನೆರವಾಗಲಿದೆ.
ಈ ಸಂದರ್ಭದಲ್ಲಿ ಕುಂದಾಪುರ ಶಾಸಕರಾದ ಕಿರಣ್ ಕೊಡ್ಗಿಯವರೂ ಜತೆಗಿರಲಿದ್ದಾರೆ. ಉದ್ಘಾಟನೆಯ ಬಳಿಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರ ಜತೆಗೆ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಸದಸ್ಯರ ಸಹಿತ ಕೊಂಕಣ ರೈಲ್ವೇ ಕುಂದು ಕೊರತೆಗಳ ಕುರಿತು ಪರಿಶೀಲನೆ ನಡೆಸಲಿದ್ದು, ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಈ ಸಮಯದಲ್ಲಿ ತಿಳಿಸಬಹುದಾಗಿದೆ.

ಈ ಸಂದರ್ಭದಲ್ಲಿ ಕೊಂಕಣ ರೈಲ್ವೆ ಅಧಿಕಾರಿಗಳು ಉಪಸ್ಥಿತಿತರಿರಲಿದ್ದು, ಕೊಂಕಣ ರೈಲ್ವೆ ನಿಗಮದ ಮುಂದಿನ ದಿನಗಳ ಸಾಧ್ಯತೆ ಬಾದ್ಯತೆಗಳ ಕುರಿತು ಮಾಹಿತಿ ನೀಡಲಿದ್ದಾರೆ.

 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!