spot_img
Wednesday, April 1, 2026
spot_img

ಕುಂದಾಪುರ : ಸರ್ವಿಸ್‌ ರಸ್ತೆಯಲ್ಲಿ ಅಪಾಯಕಾರಿ ಗುಂಡಿ !

ಜನಪ್ರತಿನಿಧಿ (ಕುಂದಾಪುರ) : ರಾಷ್ಟ್ರೀಯ ಹೆದ್ದಾರಿ 66ರ ಸರ್ವೀಸ್‌ ರಸ್ತೆಯಲ್ಲಿ ದೊಡ್ಡ ಗುಂಡಿ ಕಂಡು ಬಂದಿದೆ. ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನ ಮಾರ್ಗದ ತಿರುವಿಗೂ ತುಸು ಮುನ್ನ ಸಿಗುವ ಸರ್ವೀಸ್‌ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ದ್ವಿಚಕ್ರ ಸವಾರರ ಸಹಿತ ಇತರೇ ವಾಹನ ಚಾಲಕರು ಅಪಾಯವನ್ನು ಎದುರಿಸುವಂತಾಗಿದೆ. ತುಸು ಆಳವಾದ ಗುಂಡಿ ಇದಾಗಿದ್ದು, ಸರ್ವಿಸ್‌ ರಸ್ತೆಯಲ್ಲೇ ಇದ್ದು ವಾಹನ ಸವಾರರು ಸರಿಯಾಗಿ ಲೆಕ್ಕಿಸದೆ ಅಪಾಯಕ್ಕೀಡಾಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಮಳೆ ಬಂದ ಸಂದರ್ಭ ಈ ಗುಂಡಿಯಲ್ಲಿ ನೀರು ನಿಂತು ರಸ್ತೆ ಯಾವುದು ಹೊಂಡ ಯಾವುದು ಎಂದು ತಿಳಿಯದ ಪರಿಸ್ಥಿತಿ ಇದ್ದು, ಕತ್ತಲಾಗುತ್ತಿದ್ದಂತೆಯೇ ಈ ಭಾಗದಲ್ಲಿ ಸಂಚಾರವು ದುಸ್ತರವಾಗುತ್ತಿದೆ. ಕಳೆದ ಸುಮಾರು ಒಂದು ವರ್ಷದಿಂದಲೂ ಈ ಗುಂಡಿಯು ಬಾಯ್ದೆರೆದಿದ್ದು, ಗುಂಡಿ ಇರುವುದು ತಿಳಿಯದೆ ದ್ವಿಚಕ್ರ ಸವಾರರು ಈ ಗುಂಡಿಗೆ ಬಿದ್ದ ಉದಾಹರಣೆಯೂ ಇದೆ.

ಸದ್ಯ, ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಬ್ಯಾರಿಕೇಡನ್ನು ಸರ್ವಿಸ್‌ ರಸ್ತೆಯ ನಡುವೆ ಇರಿಸಲಾಗಿದ್ದು, ಸ್ವಲ್ಪಮಟ್ಟಿನ ನಿರಾಳತೆ ಕಂಡುಬಂದಿದೆ. ಇಷ್ಟೆಲ್ಲಾ ಅಪಾಯಕಾರಿ ಸನ್ನಿವೇಶ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆಯಲ್ಲೇ ನಿರ್ಮಾಣವಾಗಿದ್ದರೂ ಸಂಬಂಧ ಪಟ್ಟ ಇಲಾಖೆಯು ನಿರ್ವಹಣೆಯನ್ನು ಮಾಡದಿರುವುದು ಇಲಾಖೆಯ ದಿವ್ಯ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸಿದೆ. ಇಲಾಖೆಯ ನಿರ್ಲಕ್ಷ್ಯದಿಂದ ಇನ್ನಷ್ಟು ಅಪಾಯವನ್ನು ನಿತ್ಯ ಸವಾರರು ಎದುರಿಸುವಂತಾಗಿದೆ.

ಇಲ್ಲಿನ ಗುಂಡಿ ಸಹಿತ ಹೆದ್ದಾರಿ ಹಾಗೂ ಸರ್ವಿಸ್‌ ರಸ್ತೆಗಳನ್ನು ಒಳಗೊಂಡು ಇತರೆಡೆಗಳಲ್ಲಿಯೂ ಕಂಡು ಬರುವ ಗುಂಡಿಗಳನ್ನು ಸಂಬಂಧಪಟ್ಟ ಇಲಾಖೆ ಇನ್ನಾದರೂ ಎಚ್ಚೆತ್ತು ಸರಿಪಡಿಸಿ ವಾಹನ ಸವಾರರ ಸುಗಮ ರಸ್ತೆ ಸಂಚಾರಕ್ಕೆ  ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬಂದಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!