Wednesday, September 11, 2024

ಬ್ರಹ್ಮಾವರ : ಬಾಗಿಲು ತೆರೆಯುವ ಭಾಗ್ಯ ಕಳೆದುಕೊಂಡ 38 ಮಕ್ಕಳ ದೇವಾಲಯಗಳು | ಕನ್ನಡ ಶಾಲೆಗಳು ಮುಚ್ಚುತ್ತಿರುವುದಕ್ಕೆ ಸರ್ಕಾರವೇ ನೇರ ಹೊಣೆ : ಸ್ಥಳೀಯರ ಆಕ್ರೋಶ

ವರದಿ : ಶ್ರೀರಾಜ್‌ ವಕ್ವಾಡಿ

ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಪಾಲಿನ ದೇಗುಲ ಪಾಠಶಾಲೆಯ ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿದೆ. ರಾಜ್ಯದೆಲ್ಲೆಡೆ ಬೇಸಿಗೆ ರಜೆ ಮುಗಿದು ಶಾಲೆ ಆರಂಭವಾಗಿದ್ದರೇ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ 1993 ರಿಂದ ಈವರೆಗೆ  ಒಟ್ಟು  38 ‌ಶಾಲೆಗಳು(ಅನುದಾನಿತ ಶಾಲೆಗಳು ಮತ್ತು ಸರ್ಕಾರಿ ಶಾಲೆಗಳು)ಬಾಗಿಲು ತೆರೆಯುವ ಭಾಗ್ಯವೆ ಕಳೆದುಕೊಂಡಿವೆ.

ಸರ್ಕಾರ ಮೂಲಭೂತ ಸೌಕರ್ಯಗಳನ್ನು ಸರ್ಕಾರಿ ಶಾಲೆಗೆ ಕಲ್ಪಿಸದ ಹಿನ್ನೆಲೆ ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದು, ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಬಾಗಿಲು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಬ್ರಹ್ಮಾವರ ತಾಲೂಕಿನಾದ್ಯಂತ ಕಳೆದ ಕೆಲವುಯ ವರ್ಷಗಳಿಂದ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಕಾಣಿಸುತ್ತಿದೆ ಎಂಬ ಕಾರಣದಿಂದ ಶಾಲೆಗಳು ಮುಚ್ಚಲ್ಪಟ್ಟಿವೆ. ಖಾಸಗಿ ಶಾಲೆಗಳ ಹಾವಳಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಬಾಗಲು ಮುಚ್ಚಿವೆ. ಶಾಲೆಗಳಲ್ಲಿ ಅಧ್ಯಾಪಕರ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆಗಳಿಂದ ಶಾಲೆಗಳು ಮುಚ್ಚುವಂತಾಗಿದೆ. ಇದಕ್ಕೆ ಸರ್ಕಾರವೇ ಮೂಲ ಕಾರಣ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.

ಬೀಗ ಹಾಕಿಸುವ ಬದಲು ಸರ್ಕಾರಿ ಶಾಲೆಗಳಿಗೆ ಮರು ಜೀವ ನೀಡಿ ವಿದ್ಯಾದಾನ ಮುಂದುವರಿಸಬಹುದು. ಆದರೇ ಸರ್ಕಾರದ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿಗೆ ವರ್ಷದಿಂದ ವರ್ಷಕ್ಕೆ ಶಾಲೆಗಳು ಬಾಗಿಲು ಹಾಕುವ ಸಂಖ್ಯೆ ಹೆಚ್ಚುತ್ತಲೇ ಇದ್ದರೆ, ಸರ್ಕಾರಿ ಶಾಲೆಗಳು ಉಳಿಯುವುದು ಹೇಗೆ? ಶ್ರೀಮಂತರು ಖಾಸಗಿ ಶಾಲೆಗಳ ಮೊರೆ ಹೋದರೆ ಬಡ ಮಕ್ಕಳು ಏನೂ ಮಾಡಬೇಕು. ಇದರ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಿದೆ. ತಾಲೂಕೊಂದರಲ್ಲೇ ಈ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿದೆ ಎಂದಾದರೇ, ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಎಷ್ಟು ಸರ್ಕಾರಿ ಶಾಲೆಗಳು ಮುಚ್ಚಿಲ್ಲ ? ಎನ್ನುವ ಪ್ರಶ್ನೆ ಮುಂದಿದೆ.

ಬ್ರಹ್ಮಾವರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಮಾಹಿತಿಯ ಪ್ರಕಾರ ಈವರೆಗೆ ತಾಲೂಕಿನಲ್ಲಿ 38 ಶಾಲೆಗಳು ಮುಚ್ಚಲ್ಪಟ್ಟಿದ್ದು, ಅವುಗಳಲ್ಲಿ 07 ಸರ್ಕಾರಿ ಶಾಲೆಗಳನ್ನು ಒಳಗೊಂಡು, ಬರೋಬ್ಬರಿ 21 ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳು ಮಚ್ಚಲಾಗಿದೆ.

ಸದ್ಯ ತಾಲೂಕಿನಲ್ಲಿ 46 ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾರ್ಯ ನಿರ್ವಹಿಸುತ್ತಿದ್ದು, ಆರು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕೆಲವು ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ.

ಅನುದಾನಿತ ಪ್ರಾಥಮಿಕ ಶಾಲೆಗಳು ಗ್ರಾಂಟ್‌ ಇನ್‌ ಏಯ್ಡ್‌ ಸ್ಕೂಲ್‌ ಎಜುಕೇಶನ್‌ ಅಡಿಯಲ್ಲಿ ಬರುವುದರಿಂದ ಯಾವುದೇ ರೀತಿಯ ಬದಲಾವಣೆ ಅಥವಾ ನವೀಕರಣ ಮಾಡುವುದಕ್ಕೆ ಸಾಧ್ಯವಿಲ್ಲ. ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುವ ಅಧ್ಯಾಪಕರಿಗೆ ವರ್ಗಾವಣೆ, ಬಡ್ತಿ ಮಾಡುವ ಯಾವುದೇ ಅವಕಾಶ ನಮ್ಮ ಹಂತದಲ್ಲಿಲ್ಲ. ಪಾಲಿಸಿ ಮ್ಯಾಟರ್‌ ಆಗಿರುವುದರಿಂದ ಯಾವುದೇ ನೇಮಕಾತಿಯನ್ನೂ ಮಾಡಲಾಗಿಲ್ಲ. ಅಲ್ಲಿ ಕೆಲಸ ಮಾಡುತ್ತಿದ್ದ ಅಧ್ಯಾಪಕರು ಕ್ರಮೇಣ ನಿವೃತ್ತಿ ಹೊಂದುತ್ತಾ ಬಂದರು, ವಿದ್ಯಾರ್ಥಿಗಳ ಅನುಪಾತವೂ ಕಡಿಮೆ ಆದಾಗ ಅನುದಾನಿತ ಪ್ರಾಥಮಿಕ ಶಾಲೆಗಳು ಮುಚ್ಚುತ್ತಾ ಬಂದವು. ಸರ್ಕಾರ ಮಟ್ಟದಲ್ಲಿ ಒಂದೇ ಮ್ಯಾನೇಜ್‌ಮೆಂಟ್‌ನಿಂದ ನಿರ್ವಹಣೆಗೊಳ್ಳುವ ಇನ್ನೊಂದು ಶಾಲೆ ಇದ್ದರೇ, ವಿದ್ಯಾರ್ಥಿಗಳು ಕಡಿಮೆ ಇರುವ ಶಾಲೆಯಿಂದ ವರ್ಗಾವಣೆ ಮಾಡುವ ಅವಕಾಶ ನೀಡಲಾಯಿತು. ಈಗ ಚಾಲ್ತಿಯಲ್ಲಿರುವ ಅನುದಾನಿತ ಶಾಲೆಗಳಿಗೆ ಅಕ್ಷರ ದಾಸೋಹ, ಪಠ್ಯಪುಸ್ತಕಗಳು, ಸಮವಸ್ತ್ರಗಳನ್ನು ನೀಡುವುದರ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಅನುದಾನಿತ ಶಾಲೆಗಳು ಮುಚ್ಚುತ್ತಿರುವ ಕಾರಣದಿಂದ ಸಮೀಪದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿವೆ.
-ಶಬನಾ ಅಂಜುಮ್‌
ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ
 

ಈಗಾಗಲೇ ತಾಲೂಕಿನಲ್ಲಿ ಅನೇಕ ಕನ್ನಡ ಶಾಲೇಗಳು ಮುಚ್ಚಿವೆ. ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಸರ್ಕಾರ ನಡೆಸುತ್ತಲೇ ಇಲ್ಲ. ಕನ್ನಡ ಶಾಲೆಗಳ ಉಳಿವಿಗೆ ಸರ್ಕಾರ ಜವಾಬ್ದಾರಿ ವಹಿಸಿಕೊಳ್ಳಬೇಕು. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿರುವುದಕ್ಕೆ ನೇರ ಸರ್ಕಾರವೇ ಕಾರಣ.
-ಪಿ.ಎನ್‌ ಐತಾಳ್‌
ನಿವೃತ್ತ ಅಧ್ಯಾಪಕರು

ಬ್ರಹ್ಮಾವರ ತಾಲೂಕಿನಲ್ಲಿರುವ ಶಾಲೆಗಳು

                                      ಪ್ರಾಥಮಿಕ ಶಾಲೆ                  ಪ್ರೌಢಶಾಲೆ 

ಸರ್ಕಾರಿ ಶಾಲೆಗಳು                91                                      22

ಅನುದಾನಿತ ಶಾಲೆಗಳು         46                                      21

ಅನುದಾನಿತ ರಹಿತ ಶಾಲೆಗಳು  28                                    24

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!