spot_img
Tuesday, March 31, 2026
spot_img

ಸ. ಹಿ. ಪ್ರಾ.ಶಾಲೆ ಬೈಲೂರು ಸಂಸತ್ತ್ ಮಾದರಿ ಚುನಾವಣೆ: EVM App ಮೂಲಕ ಮತ ಚಲಾಯಿಸಿದ ವಿದ್ಯಾರ್ಥಿಗಳು

ಕುಂದಾಪುರ: ಸ. ಹಿ. ಪ್ರಾ.ಶಾಲೆ ಬೈಲೂರು ಇಲ್ಲಿ ಜೂನ್ 08 ರಂದು ಶಾಲಾ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕನ ಆಯ್ಕೆಗಾಗಿ ಸಂಸತ್ತ್ ಮಾದರಿ ಚುನಾವಣೆಯನ್ನು ನಡೆಸಲಾಯಿತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ಉದ್ದೇಶದಿಂದ ಚುನಾವಣೆ ಅಧಿಸೂಚನೆ, ನಾಮಪತ್ರ ಸಲ್ಲಿಕೆ, ಪರೀಶೀಲನೆ, ಹಿಂಪಡೆಯುವುದು, ಚಿಹ್ನೆ ನೀಡುವಿಕೆ, ಪ್ರಚಾರ ಹೀಗೆ ಎಲ್ಲಾ ಹಂತಗಳ ನಂತರ ಮಕ್ಕಳಿಗೆ EVM App ಮೂಲಕ ಮೊಬೈಲ್ ನಲ್ಲಿ ಮತಚಲಾಯಿಸಲು ಅವಕಾಶ ನೀಡಲಾಯಿತು. ಮಕ್ಕಳು ತುಂಬಾ ಸಂಭ್ರಮದಿಂದ ಮತ ಚಲಾಯಿಸಿದರು. NOTAಕ್ಕೂ ಅವಕಾಶ ನೀಡಲಾಗಿತ್ತು.

ನಾಯಕನ ಸ್ಥಾನಕ್ಕೆ ಮೂವರು ವಿದ್ಯಾರ್ಥಿಗಳು ಮತ್ತು ಉಪನಾಯಕನ ಸ್ಥಾನಕ್ಕೆ ಮೂವರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಶಾಲಾ ನಾಯಕಿಯಾಗಿ ಆದ್ಯಾ ಪಿ 7ನೇ ತರಗತಿ, ಉಪನಾಯಕನ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಸ್ ವಿ ಧನುಷ್ 6ನೇ ತರಗತಿ ಆಯ್ಕೆಯಾದರು.

ಚುನಾವಣೆ ಅಧಿಕಾರಿಯಾಗಿ ಸಹಶಿಕ್ಷಕ ಆನಂದ ಕುಲಾಲ ಕರ್ತವ್ಯ ನಿರ್ವಹಿಸಿದರೆ,ಸಹ ಶಿಕ್ಷಕಿ ಸಂಧ್ಯಾ ಕೆ, ಮತ್ತು ಗೌರವ ಶಿಕ್ಷಕಿಯರಾದ ಪ್ರಮೀಳಾ, ವಿಶಲಾಕ್ಷಿ, ವೈಶಾಲಿ ಶೆಟ್ಟಿ ಮತ್ತು ನಯನ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

ಜೂ.10ರಂದು ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಡಿ. ನೂತನ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.

 

 

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!