spot_img
Friday, March 21, 2025
spot_img

ಜೂ.16ಕ್ಕೆ ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್ ಬೆಚ್ಚಳ್ಳಿ ಉದ್ಘಾಟನೆ

ಸಿದ್ಧಾಪುರ: ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್ ರಿ., ಬೆಚ್ಚಳ್ಳಿ ಜೂನ್ 16 ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಸಿದ್ಧಾಪುರದ ಶ್ರೀ ರಂಗನಾಥ ಸಭಾಭವನದಲ್ಲಿ ಉದ್ಘಾಟನೆಗೊಳ್ಳಲಿದೆ.

ಸಿದ್ಧಾಪುರ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಡಿ.ಗೋಪಾಲಕೃಷ್ಣ ಕಾಮತ್ ಟ್ರಸ್ಟನ್ನು ಉದ್ಘಾಟಿಸಲಿದ್ದಾರೆ. ಟ್ರಸ್ಟ್ ಗೌರಾವಧ್ಯಕ್ಷ ಭೋಜು ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.

ಶ್ರೀ ಬನಶಂಕರಿ ದೇವಸ್ಥಾನ ಉಳ್ಳೂರು 74 ಇಲ್ಲಿನ ಆಡಳಿತ ಮೊಕ್ತೇಸರ ಸಂಪಿಗೇಡಿ ಸಂಜೀವ ಶೆಟ್ಟಿ ಟ್ರಸ್ಟ್ ದಾಖಲಾತಿಗಳ ಹಸ್ತಾಂತರ ಮಾಡಲಿದ್ದಾರೆ. ಶಂಕರನಾರಾಯಣ ಆರಕ್ಷಕ ಠಾಣೆಯ ಉಪನಿರೀಕ್ಷಕ ನಾಸೀರ್ ಹುಸೇನ್ ಕೈಪಿಡಿ ಬಿಡುಗಡೆ ಮಾಡಲಿದ್ದಾರೆ.ಸಾಹಿತಿ ಮುಸ್ತಾಕ್ ಹೆನ್ನಾಬೈಲ್ ಬಾಂಡ್ ವಿತರಣೆ ಮಾಡಲಿದ್ದಾರೆ. ನಿವೃತ್ತ ಪ್ರಾಧ್ಯಾಪಕರಾದ ಡಾ.ಶ್ರೀಕಾಂತ್ ರಾವ್, ಉದ್ಯಮಿ ಶ್ರೀಕಾಂತ್ ನಾಯಕ್ ಗೌರವ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದಲ್ಲಿ 2023-24ನೇ ಸಾಲಿನಲ್ಲಿ ಶೇ 100 ಫಲಿತಾಂಶ ಪಡೆದ ಆಯ್ದ ಪ್ರೌಢಶಾಲೆಗಳನ್ನು ಗೌರವಿಸಲಾಗುವುದು. 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!