spot_img
Friday, April 3, 2026
spot_img

ಕುಂದಾಪುರ ತಾಲೂಕು ಸವಿತಾ ಸಮಾಜದ ವಾರ್ಷಿಕ ಮಹಾಸಭೆ

ಜನಪ್ರತಿನಿಧಿ (ಕುಂದಾಪುರ) : ಸಾಮಾಜಿಕ ಕಳಕಳಿಯೊಂದಿಗೆ ಆರ್ಥಿಕ ಸುಧಾರಣೆಯತ್ತ ಗಮನ ವಹಿಸಿದರೆ ಸಂಘಟನೆಗಳು ಬಲಗೊಳ್ಳಲು ಸಾಧ್ಯ. ಈಗಾಗಲೇ ಉತ್ತಮ ಸಂಘಟನೆಯೆಂದು ಗುರುತಿಸಿಕೊಂಡಿರುವ ಕುಂದಾಪುರ ತಾಲೂಕಿ ಸವಿತ ಸಮಾಜ ಆರ್ಥಿಕವಾಗಿ ಬಲ ಗೊಳ್ಳುವಲ್ಲಿಯೂ ಪ್ರಯತ್ನಿಸಬೇಕು ಎಂದು ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಪ್ರಧಾನಿ ಕಾರ್ಯದರ್ಶಿ ಹರೀಶ್‌ ಭಂಡಾರಿ ಹೆಮ್ಮಾಡಿ ಹೇಳಿದರು.

ಅವರು ಇಲ್ಲಿನ ಆರ್.‌ ಎನ್‌ ಶೆಟ್ಟಿ ಸಭಾ ಭವನದಲ್ಲಿ ನಡೆದ ಕುಂದಾಪುರ ತಾಲೂಕು ಸವಿತಾ ಸಮಾಜ (ರಿ.) ಕುಂದಾಪುರ ಇದರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಸುಭಾಸ್ ಭಂಡಾರಿ ಗುಜ್ಜಾಡಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸವಿತಾ ಸಮಾಜ ಉಡುಪಿ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಭಂಡಾರಿ ನಿಂಜೂರು, ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಂಬಲಪಾಡಿ ಉಡುಪಿ ಇದರ ಅಧ್ಯಕ್ಷ ನವೀನಚಂದ್ರ ಭಂಡಾರಿ ಮಣಿಪಾಲ, ಕುಂದಾಪುರ ತಾಲೂಕು ಸವಿತಾ ಸಮಾಜದ ಉಪಾಧ್ಯಕ್ಷ ಮಧುಕರ ಭಂಡಾರಿ ಕೋಟೇಶ್ವರ, ಪ್ರಧಾನ ಕಾರ್ಯದರ್ಶಿ ಸುಜಯ ಸುವರ್ಣ ವಕ್ವಾಡಿ, ಕುಂದಾಪುರ ತಾಲೂಕು ಭಂಡಾರಿ ಸಂಘದ ಅಧ್ಯಕ್ಷ ಸುಭಾಸ ಭಂಡಾರಿ ಹಂಗಳೂರು, ಪರಿಯಾಳ ಸಮಾಜ ಸುಧಾರಕ ಸಂಘ ಕುಂದಾಪುರ ಇದರ ಅಧ್ಯಕ್ಷ ಮಂಜುನಾಥ ಸಾಲಿಯಾನ್ ತ್ರಾಸಿ, ಸವಿತಾ ಸಮಾಜ ಗಂಗೊಳ್ಳಿ ವಲಯ ಅಧ್ಯಕ್ಷ ಶೇಖರ ಸುವರ್ಣ ಬಂಟ್ವಾಡಿ, ಬೈಂದೂರು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಪ್ರಶಾಂತ ಭಂಡಾರಿ ಬೈಂದೂರು, ವಂಡ್ಸೆ ವಲಯ ಸವಿತಾ ಸಮಾಜದ ಅಧ್ಯಕ್ಷ ಗಣೇಶ ಭಂಡಾರಿ ವಂಡ್ಸೆ, ಹಾಲಾಡಿ ಸವಿತಾ ಸಮಾಜದ ಅಧ್ಯಕ್ಷ ಸುಧಾಕರ ಭಂಡಾರಿ ಹಾಲಾಡಿ, ಬಸ್ರೂರು ಸವಿತಾ ಸಮಾಜದ ಘಟಕದ ಅಧ್ಯಕ್ಷ ಮಹೇಶ ಭಂಡಾರಿ ಬಸ್ರೂರು, ಹಾಲಾಡಿ ಘಟಕದ ಅಧ್ಯಕ್ಷ ಪ್ರಸಾದ ಭಂಡಾರಿ ಶಂಕರನಾರಾಯಣ, ಸಿದ್ಧಾಪುರ ಘಟಕ ಸವಿತಾ ಸಮಾಜದ ಅಧ್ಯಕ್ಷ ಪ್ರಕಾಶ ಭಂಡಾರಿ ಸಿದ್ಧಾಪುರ, ತಲ್ಲೂರು ಸವಿತಾ ಸಮಾಜ ಘಟಕದ ಅಧ್ಯಕ್ಷ ಗಣೇಶ ಭಂಡಾರಿ ತಲ್ಲೂರು, ಸವಿತಾ ಸಮಾಜ ಕೋಟೇಶ್ವರ ಘಟಕದ ಅಧ್ಯಕ್ಷ ನಾರಾಯಣ ಬಂಗೇರ ಬೀಜಾಡಿ ಮತ್ತೀತರರು ಭಾಗವಹಿಸಿದರು.

ಇನ್ನು, ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಪ್ರಧಾನ ಕಾರ್ಯದರ್ಶಿ ಸುಜಯ ಸುವರ್ಣ ವಕ್ವಾಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!