spot_img
Thursday, December 5, 2024
spot_img

ಈ ಇಬ್ಬರು ಶೆಹಜಾದರು ʼಪದೇ ಪದೇ ಫ್ಲಾಪ್ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿರುವುದು ನನಗೆ ಆಶ್ಚರ್ಯ ತಂದಿದೆ’ : ರಾಗಾ, ಅಖಿಲೇಶ್‌ ಯಾದವ್‌ ಬಗ್ಗೆ ಮೋದಿ ಲೇವಡಿ

ಜನಪ್ರತಿನಿಧಿ (ಉತ್ತರ ಪ್ರದೇಶ) : ಪಾಕಿಸ್ತಾನಕ್ಕೆ ಹೆದರಲು ಕೇಂದ್ರದಲ್ಲಿರುವುದು ದುರ್ಬಲ ಕಾಂಗ್ರೆಸ್‌ ಸರ್ಕಾರವಲ್ಲ, ಬದಲಿಗೆ ಬಲಿಷ್ಠ ಮೋದಿ ಸರ್ಕಾರ’. ‘ಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇದೆ ಎಂಬ ಕಾರಣಕ್ಕಾಗಿ ಹೆದರಬೇಕು ಎಂದು ಅವರು ಹೇಳುತ್ತಿದ್ದಾರೆ. ಆದರೆ ಅವರಿಗೆ 56 ಇಂಚಿನ (ಎದೆ) ಮಾಹಿತಿ ಇಲ್ಲವೇ? ಎಂದು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಇಂದು(ಬುಧವಾರ) ವಾಗ್ದಾಳಿ ಮಾಡಿದ್ದಾರೆ.

ಬಸ್ತಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ದ್ವಿವೇದಿ ಪರವಾಗಿ ಮತಯಾಚಿಸಿ ಚುನಾವಣಾ ಪ್ರಚಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಪಾಕಿಸ್ತಾನದ ಮೇಲೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳಿಗೆ ಸಹಾನುಭೂತಿ ಇದೆ’ ಎಂದು ಹೇಳಿದ್ದಾರೆ.

ಪಾಕಿಸ್ತಾನ ಮುಗಿದ ಅಧ್ಯಾಯ ಆದರೆ ಅದರ ಬಗ್ಗೆ ಸಹಾನುಭೂತಿ ಹೊಂದಿರುವ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ದೇಶವನ್ನು ಹೆದರಿಸುವಲ್ಲಿ ನಿರತವಾಗಿವೆ’. ‘ಒಂದು ಕಾಲದಲ್ಲಿ ನಮಗೆ ಸವಾಲೊಡ್ಡುತ್ತಿದ್ದ ಭಯೋತ್ಪಾದಕ ಪೋಷಕ ರಾಷ್ಟ್ರದ(ಪಾಕಿಸ್ತಾನ) ಜನರು ಇಂದು ಆಹಾರ ಧಾನ್ಯಕ್ಕಾಗಿ ಕಷ್ಟಪಡುವ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.

‘2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಒಟ್ಟಿಗೆ ಪ್ರಚಾರ ಮಾಡಿ ವಿಫಲರಾಗಿದ್ದರು. ಈ ಇಬ್ಬರು ಶೆಹಜಾದರು ಪದೇ ಪದೇ ಫ್ಲಾಪ್ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿರುವುದು ನನಗೆ ಆಶ್ಚರ್ಯ ತಂದಿದೆ’ ಎಂದು ರಾಹುಲ್‌ ಗಾಂಧಿ ಹಾಗೂ ಅಖಿಲೇಶ್‌ ಐದವ್‌ ಬಗ್ಗೆ ಮೋದಿ ಲೇವಡಿ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ‘ಇಂಡಿಯಾ’ 79 ಕ್ಷೇತ್ರಗಳನ್ನು ಗೆಲ್ಲಲಿದೆ ಎಂಬ ಅಖಿಲೇಶ್ ಯಾದವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, ‘ಜೂನ್ 4ರಂದು ಉತ್ತರ ಪ್ರದೇಶದ ಜನರು ಎಸ್‌ಪಿ ಮತ್ತು ಕಾಂಗ್ರೆಸ್ ಅನ್ನು ನಿದ್ದೆಯಿಂದ ಎಬ್ಬಿಸಲಿದ್ದಾರೆ. ಆಗ ಅವರು ಇವಿಎಂ ತಮ್ಮ ಸೋಲಿಗೆ ಕಾರಣ ಎನ್ನುತ್ತಾರೆ’ ಎಂದು ಟೀಕಿಸಿದ್ದಾರೆ.

ವಿರೋಧ ಪಕ್ಷ ನಾಯಕರು ಸನಾತನ ಧರ್ಮವನ್ನು ನಾಶಪಡಿಸುವ ಬಗ್ಗೆ  ಮಾತನಾಡುತ್ತಾರೆ. ಕಾಂಗ್ರೆಸ್‌ನ ಶೆಹಜಾದಾ(ರಾಹುಲ್ ಗಾಂಧಿ) ರಾಮಮಂದಿರ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಬದಲಾಯಿಸಲು  ಬಯಸುತ್ತಾರೆ.

ಇನ್ನು, ‘ದಲಿತ ಮತ್ತು ಹಿಂದುಳಿದವರ ಮೀಸಲಾತಿಯನ್ನು ಕಿತ್ತು ವೋಟ್ ಜಿಹಾದ್ ಮಾಡುವವರಿಗೆ ಕೊಡಲು ಈ ಜನರು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸಲು ಬಯಸಿದೆ. ದಲಿತ ವಿರೋಧಿ ಮತ್ತು ಹಿಂದುಳಿದ ವಿರೋಧಿ ಷಡ್ಯಂತ್ರದಲ್ಲಿ ಸಮಾಜವಾದಿ ಪಕ್ಷವು ಕಾಂಗ್ರೆಸ್ ಜೊತೆ ನಿಂತಿದೆ’ ಎಂದು ಟೀಕೆ ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!