Tuesday, April 30, 2024

ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ಮೂಡುಬಿದಿರೆ ಡಿಸಿ‌ಎಂ ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ

ಕುಂದಾಪುರ: ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ ಮೂಡುಬಿದಿರೆ ಇಲ್ಲಿನ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ ಕೋರ್ಸ್ (ಡಿಸಿ‌ಎಂ) ವಿದ್ಯಾರ್ಥಿಗಳು ಅಧ್ಯಯನ ಪ್ರವಾಸದ ಅಂಗವಾಗಿ ಕುಂದಾಪುರ ತಾಲೂಕಿನ ಮೂರ್ತೆದಾರರ ಸೇವಾ ಸಹಕಾರಿ ಸಂಘ ಹೆಮ್ಮಾಡಿ ಇಲ್ಲಿಗೆ ಭೇಟಿ ನೀಡಿದರು.

ತಲ್ಲೂರು ಶಾಖಾ ಕಛೇರಿಗೆ ಭೇಟಿ ನೀಡಿದ ಅಧ್ಯಯನಾರ್ಥಿಗಳು ಮೂರ್ತೆದಾರಿಕೆ ಉತ್ತೇಜನಕಾರಿ ಆರಂಭಗೊಂಡ ಸಂಘ ಮುಂದಿನ ದಿನಗಳಲ್ಲಿ ಮೂರ್ತೆದಾರಿಕೆ ಕುಲಕಸುಬ ನಶಿಸಿದಾಗ ಹಣಕಾಸು ವ್ಯವಹಾರಕ್ಕೆ ಪರಿವರ್ತಿಸಿಕೊಂಡು, ಸ್ವಸಹಾಯ ಸಂಘಗಳ ಸ್ಥಾಪನೆ ಮಾಡಿಕೊಂಡು ತಾಲೂಕಿನ ಪ್ರಬಲ ಸಹಕಾರಿ ಸಂಘವಾಗಿ ಬೆಳೆದಿದೆ. ಹೆಮ್ಮಾಡಿಯಲ್ಲಿ ಪ್ರಧಾನ ಕಛೇರಿ, ತಲ್ಲೂರು, ನಾಡ, ಆಲೂರುಗಳಲ್ಲಿ ಶಾಖಾ ಕಛೇರಿಯನ್ನು ಹೊಂದಿದೆ. ತಲ್ಲೂರಿನಲ್ಲಿ ವಾಣಿಜ್ಯ ಸಂಕೀರ್ಣ, ಸಭಾಭವನವನ್ನು ಹೊಂದಿದೆ. ಅಭಿವೃದ್ಧಿ ಪಥದಲ್ಲಿ ಸಂಘ ಮುನ್ನೆಡೆಯುತ್ತಿದ್ದು ಮಾದರಿಯಾಗಿ ಬೆಳೆದಿರುವ ಸಂಘದ ಕಾರ್ಯಚಟುವಟಿಕೆಗಳನ್ನು ಅಧ್ಯನಾರ್ಥಿಗಳು ವೀಕ್ಷಿಸಿದರು.

ಸಂಘದ ಅಧ್ಯಕ್ಷರಾದ ಉದಯ ಪೂಜಾರಿ ಸಂಘದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಕೃಷ್ಣ ಪೂಜಾರಿ ಸಂಘದ ಆಡಳಿತಾತ್ಮಕ ವಿಚಾರಗಳನ್ನು ಅಧ್ಯಯನಾರ್ಥಿಗಳಿಗೆ ವಿವರಿಸಿದರು. ಸಂಘದ ಸ್ಥಾಪನೆ, ಬೆಳವಣಿಕೆ, ಮೂರ್ತೆದಾರರ ಹೋರಾಟ, ಪರಿಣಾಮ, ಮೂರ್ತೆ ಕಸುಬು ನಶಿಸಿದಾಗ ಪರ್ಯಾಯವಾಗಿ ಸಂಘ ಹಣಕಾಸು ಸಂಸ್ಥೆಯಾಗಿ ಬೆಳವಣಿಗೆ ಹೊಂದಿದ ಬಗೆ, ಆರ್ಥಿಕ ವಹಿವಾಟುಗಳ ಬಗ್ಗೆ ಮಾಹಿತಿ ನೀಡಿದರು.

ಕೆ.ಐ.ಸಿ.ಎಂ ಮೂಡುಬಿದಿರೆ ಇಲ್ಲಿನ ಪ್ರಾಂಶುಪಾಲರಾದ ಡಾ.ಎಂ. ವಿಶ್ವೇಶ್ವರಯ್ಯ, ಸಂಸ್ಥೆಯ ಹಿರಿಯ ಉಪನ್ಯಾಸಕಿ ಬಿಂದು ಬಿ. ನಾಯರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಪ್ರಾಂಶುಪಾಲರಾದ ಡಾ.ಎಂ. ವಿಶ್ವೇಶ್ವರಯ್ಯ, ಹಿರಿಯ ಉಪನ್ಯಾಸಕಿ ಬಿಂದು ಬಿ. ನಾಯರ್ ಅವರನ್ನು ಗೌರವಿಸಲಾಯಿತು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!