spot_img
Saturday, December 7, 2024
spot_img

ಈ ಬಾರಿಯ ಚುನಾವಣೆ, ನರೇಂದ್ರ ಮೋದಿಯವರು ಕೊಲ್ಲೂರಿಗೆ ಆಗಮಿಸುವ ಪವಿತ್ರ ಚುನಾವಣೆ-ಶಾಸಕ ಗಂಟಿಹೊಳೆ

 

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರವು ಕಾರ್ಯಕರ್ತರೇ ಪ್ರಧಾನವಾಗಿರುವಂತಹ ಕ್ಷೇತ್ರ. ಈ ಬಾರಿಯ ಲೋಕಸಭಾ ಚುನಾವಣೆಯನ್ನು ನಾವು ವಿಶಿಷ್ಟ ರೀತಿಯಲ್ಲಿ ಎದುರಿಸುತ್ತಿದ್ದೇವೆ. ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ ೨೪೬ ಬೂತ್ ಗಳಿದ್ದು, ಈ ಎಲ್ಲಾ ಬೂತ್‌ಗಳನ್ನು ತಲುಪುವ ನಿಟ್ಟಿನಲ್ಲಿ ಬೂತ್ ಕಡೆಗೆ ಸಮೃದ್ಧ ನಡಿಗೆ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ನಾವು ಹಮ್ಮಿಕೊಂಡಿದ್ದೇವೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಬೂತ್ ಕಡೆಗೆ ಸಮೃದ್ಧ ನಡಿಗೆ ಕಾರ್ಯಕ್ರಮದ ಮೂಲಕ ಕಾರ್ಯಕರ್ತರೊಂದಿಗೆ ಜೊತೆಗೂಡಿ ಪ್ರತಿ ಬೂತಿನಲ್ಲೂ ತಳಮಟ್ಟದಲ್ಲಿ ಸಂಘಟನೆಗಾಗಿ, ಪಕ್ಷಕ್ಕಾಗಿ ಕೆಲಸ ಮಾಡಿದ ತಳಮಟ್ಟದ ಕಾರ್ಯಕರ್ತರು, ಹಿರಿಯರು ಮತ್ತು ಮತದಾರರನ್ನು ಭೇಟಿಯಾಗಿ ನಮ್ಮ ಅಭ್ಯರ್ಥಿ ರಾಘವೇಂದ್ರ ಅವರಿಗೆ ಒಂದು ಲಕ್ಷ ಮತಗಳ ಮುನ್ನಡೆ ಒದಗಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದ್ದೇವೆ ಎಂದರು.

ಒಂದು ಲಕ್ಷ ಲೀಡ್ ಕೊಡಿಸುವ ಜೊತೆಗೆ ನರೇಂದ್ರ ಮೋದಿ ಅವರನ್ನು ಕೊಲ್ಲೂರು ಶ್ರೀ ಮೂಕಾಂಬಿಕೆ ಸನ್ನಿಧಿಗೆ ಕರೆಸುವ ಸಂಕಲ್ಪವನ್ನು ನಮ್ಮ ಸಂಸದರಾದ ರಾಘವೇಂದ್ರ ಅವರಿಗೆ ತಿಳಿಸಿದ್ದೇವೆ, ಇದು ನಮ್ಮ ಕ್ಷೇತ್ರದ ಮತದಾರರ ಮತ್ತು ಕಾರ್ಯಕರ್ತರ ಸಂಕಲ್ಪವಾಗಿದೆ. ಇದಕ್ಕೆ ನಮ್ಮ ಸಂಸದರು ಕೂಡ ಒಪ್ಪಿಗೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಧಾರ್ಮಿಕ ಕ್ಷೇತ್ರಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಕೊಲ್ಲೂರು ಕೂಡ ಅಂತಹ ಅಭಿವೃದ್ಧಿ ಕಾರ್ಯಗಳಿಗೆ ಒಳಪಟ್ಟರೆ ತುಂಬಾ ಸಂತೋಷ ಎನ್ನುವುದು ನಮ್ಮ ಅಭಿಪ್ರಾಯ. ಈ ಚುನಾವಣೆ ನರೇಂದ್ರ ಮೋದಿಯವರು ಕೊಲ್ಲೂರಿಗೆ ಆಗಮಿಸುವ ಪವಿತ್ರ ಚುನಾವಣೆ ಎಂಬ ಸಂಕಲ್ಪದೊಂದಿಗೆ ನಾವು ಈ ಚುನಾವಣೆಯನ್ನು ಎದುರಿಸುತ್ತಿದ್ದೇವೆ ಎಂದಿರುವ ಶಾಸಕರು, ಕ್ಷೇತ್ರದ ಪ್ರತಿಯೊಬ್ಬ ಮತದಾರನ ಮನೆಯಲ್ಲೂ ಮನದಲ್ಲೂ ಮೋದಿ ಅವರ ಬಗ್ಗೆ, ಕೊಲ್ಲೂರಿನ ಬಗ್ಗೆ ವಿಶೇಷ ಭಾವನೆ ಇದೆ. ಹೀಗಾಗಿ ಒಂದು ಲಕ್ಷದ ಗುರಿಯನ್ನು ಸಾಧಿಸಲು ಬೂತ್ ಕಡೆಗೆ ಸಮೃದ್ಧ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಯಾವ ಬೂತ್‌ಗೂ ಹೋದರೂ ಕಾರ್ಯಕರ್ತರು ತುಂಬಾ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಮೋದಿಯವರ ಬಗೆಗಿನ ಅಭಿಮಾನ ಮತ್ತು ಕಾರ್ಯಕರ್ತರ ಶ್ರಮದಿಂದ ನಮ್ಮ ಸಂಕಲ್ಪವನ್ನು ಸಾಧಿಸುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!