Sunday, September 8, 2024

ಬಿಹಾರದಲ್ಲಿ ಎನ್‌ಡಿಎ ಮೈತ್ರಿ ಸೀಟು ಹಂಚಿಕೆ ಅಂತಿಮ : ಬಿಜೆಪಿ 17, ಜೆಡಿಯು 16ಕ್ಷೇತ್ರಗಳಲ್ಲಿ ಸ್ಪರ್ಧೆ !

ಜನಪ್ರತಿನಿಧಿ (ಬಿಹಾರ) : ʼಇಂಡಿಯಾʼ ಮೈತ್ರಿಕೂಟದಲ್ಲಿ ಪ್ರಮುಖ ಹುದ್ದೆಗೆ ಕಣ್ಣಿಟ್ಟಿದ್ದ ನಿತೀಶ್‌ ಕುಮಾರ್‌ ಘರ್‌ವಾಪ್ಸಿ ತೀವ್ರ ಕುತೂಹಲ ಹಾಗೂ ಆಶ್ಚರ್ಯಕ್ಕೆ ಕಾರಣವಾಗಿತ್ತು. ಬಿಹಾರದಲ್ಲಿ ಬಿಜೆಪಿಯೊಂದಿಗೆ ಮಾತುಯಕತೆ ನಡೆಸಿಕೊಂಡೇ ನಿತೀಶ್‌ ಕುಮಾರ್‌ ಮರಳಿ ಎನ್‌ಡಿಎ ಮೈತ್ರಿಗೆ ಮರಳಿದ್ದರು. ಈಗ ರಾಜ್ಯದಲ್ಲಿ ಸೀಟು ಹಂಚಿಕೆ ಅಂತಿಮಗೊಂಡಿದೆ.  ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 16 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಇಂದು(ಸೋಮವಾರ) ಪ್ರಕಟಿಸಲಾಗಿದೆ.

ಪಶ್ಚಿಮ ಚಂಪಾರಣ್, ಪೂರ್ವಿ ಚಂಪಾರಣ್, ಔರಂಗಾಬಾದ್, ಮಧುಬನಿ, ದರ್ಬಂಗಾ, ಮುಜಾಫರ್‌ಪುರ, ಮಹಾರಾಜ್‌ಗಂಜ್, ಸರನ್, ಬೇಗುಸರಾಯ್, ನಾವಡಾ, ಪಾಟ್ನಾ ಸಾಹಿಬ್, ಪಟ್ಲಿಪುತ್ರ, ಆರಾ, ಬಕ್ಸರ್ ಮತ್ತು ಸಸಾರಾಮ್ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಮುಖ ಕ್ಷೇತ್ರಗಳು ಎಂದು ವರದಿಯಾಗಿದೆ.

ಜೆಡಿಯು ವಾಲ್ಮೀಕಿನಗರ, ಸಿತಾಮಧಿ, ಝಂಜರ್‌ಪುರ್, ಸುಪೌಲ್, ಕಿಶನ್‌ಗಂಜ್, ಕತಿಹಾರ್, ಪೂರ್ಣಿಯಾ, ಮಾಧೇಪುರ, ಗೋಪಾಲ್‌ಗಂಜ್, ಸಿವಾನ್, ಭಾಗಲ್ಪುರ್, ಬಂಕಾ, ಮುಂಗೇರ್, ನಲಂದಾ, ಜೆಹಾನಾಬಾದ್ ಮತ್ತು ಶೆಯೋಹಾರ್ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

ಇದಲ್ಲದೆ, ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಬಣವು ವೈಶಾಲಿ, ಹಾಜಿಪುರ, ಸಮಸ್ತಿಪುರ, ಖಗರಿಯಾ ಮತ್ತು ಜಮುಯಿ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

ಬಿಹಾರದ ಎನ್‌ಡಿಎ ಮೈತ್ರಿಕೂಟದ ಇತರ ಪಕ್ಷಗಳಾದ ಹಿಂದೂಸ್ತಾನಿ ಆವಾಮ್ ಮೋರ್ಚಾ (ಎಚ್‌ಎಎಂ) ಮತ್ತು ರಾಷ್ಟ್ರೀಯ ಲೋಕ ಸಮತಾ ಪಾರ್ಟಿ (ಆರ್‌ಎಲ್‌ಎಸ್‌ಪಿ) ತಲಾ ಒಂದು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೈತ್ರಿ ನಾಯಕರು ತಿಳಿಸಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!