Sunday, September 8, 2024

ನೀರು ಉಳಿಸಿ ಬೆಂಗಳೂರು ಬೆಳೆಸಿ : ನೀರಿನ ಸಮಸ್ಯೆ ಪರಿಹಾರಕ್ಕೆ ನಾಲ್ಕು ಆ್ಯಪ್‌ಗಳು ಬಿಡುಗಡೆಗೊಳಿಸಿದ ಡಿಸಿಎಂ ಡಿಕೆಶಿ

ಜನಪ್ರತಿನಿಧಿ (ಬೆಂಗಳೂರು) : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ʼನೀರು ಉಳಿಸಿ ಬೆಂಗಳೂರು ಬೆಳೆಸಿʼ ಅಭಿಯಾನಕ್ಕೆ ಚಾಲನೆ ನೀಡಿ ಅಂತರ್ಜಲ, ಜಲಸಂರಕ್ಷಕ, ಜಲಮಿತ್ರ, ಜಲಸ್ನೇಹಿ ವೆಬ್‌ ಆ್ಯಪ್‌ಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಬಿಡುಗಡೆಗೊಳಿಸಿದ್ದಾರೆ.

ನೀರಿನ ಸಮಸ್ಯೆ ಪರಿಹಾರಕ್ಕೆ ನಾಲ್ಕು ಆ್ಯಪ್‌ಗಳು ಬಿಡುಗಡೆ :

ಅಂತರ್ಜಲ :  ಬೆಂಗಳೂರು ನಗರದ ನಾಗರಿಕರು ಮನೆಯಲ್ಲಿಯೇ ಕುಳಿತು ಈ ಆ್ಯಪ್‌ ಮೂಲಕ ಕೊಳವೆಬಾವಿ ಕೊರೆಯಲು ಅನುಮತಿ ಪಡೆಯಲು ಅರ್ಜಿ ಸಲ್ಲಿಸಬಹುದು, ನಿರಾಕ್ಷೇಪಣಾ ಪತ್ರವನ್ನೂ ಈ ಮೂಲಕ ಪಡೆಯಬಹುದಾಗಿದೆ.

ಜಲಸ್ನೇಹಿ : ಸಾರ್ವಜನಿಕರು ಕುಡಿಯುವುದಕ್ಕೆ ಹೊರತಾಗಿ ಇನ್ನಿತರ ಕಾರ್ಯಗಳಿಗೆ ಬಳಕೆ ಮಾಡಲು ಸಂಸ್ಕರಿಸಿದ ನೀರನ್ನು ಈ ಆ್ಯಪ್‌ ಮೂಲಕ ಕಾಯ್ದಿರಿಸಿ, ಸರಬರಾಜು ಮಾಡಬಹುದು.

ಜಲಮಿತ್ರ : ನೀರಿನ ಸೋರಿಕೆ, ಒಳಚರಂಡಿ ನೀರು ಉಕ್ಕಿ ಹರಿಯುವುದು, ಜಲಮಂಡಳಿಯ ಅಗತ್ಯ ದಾಖಲೆಗಳ ಸರ್ವೆ ನೀಡಲು ಇಚ್ಛಿಸುವ ನಾಗರಿಕರು,ಎನ್‌ಜಿಒಗಳು, ನಿವೃತ್ತ ತಾಂತ್ರಿಕ ಸಿಬ್ಬಂದಿ ಈ ಆ್ಯಪ್‌ ಮೂಲಕ ನೋಂದಾಯಿಸಿಕೊಳ್ಳಬಹುದು.

ಜಲ ಸಂರಕ್ಷಕ : ಕುಡಿಯುವ ನೀರಿನ ಬಳಕೆಯನ್ನು ಉಲ್ಲಂಘಿಸಿದವರಿಗೆ ಜಲಮಂಡಳಿ ಸಿಬ್ಬಂದಿ ಈ ಆ್ಯಪ್‌ ಮೂಲಕ ಸ್ಥಳದಲ್ಲಿಯೇ ದಂಡ ವಿಧಿಸಬಹುದಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!