Thursday, October 31, 2024

ಪಾರ್ಥನೆಗೆ ನೀರಿನಾಳಕ್ಕಿಳಿಯುವ ಪ್ರಧಾನಿ, ನಿರುದ್ಯೋಗದಂತಹ ಸಮಸ್ಯೆಗಳ ಬಗ್ಗೆ ದಿವ್ಯ ಮೌನ ವಹಿಸುವುದ್ಯಾಕೆ : ರಾಹುಲ್‌ ಗಾಂಧಿ ಆಕ್ರೋಶ

ಜನಪ್ರತಿನಿಧಿ (ನಾಸಿಕ್‌) :  ದ್ವಾರಕದಲ್ಲಿ ಸಮುದ್ರದಲ್ಲಿ ಮುಳುಗಡೆಯಾಗಿರುವ ಭಗವಾನ್ ಕೃಷ್ಣನ ಕಾಲದಲ್ಲಿದ್ದ ನಗರವಿದ್ಧ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ನೀರಿನ ಆಳದಲ್ಲಿ ಇಳಿದಿದ್ದರು. ಆದರೆ ಹಣದುಬ್ಬರ ಹಾಗೂ ನಿರುದ್ಯೋಗದಂತಹ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ, ದಿವ್ಯ ಮೌನ ವಹಿಸುತ್ತಾರೆ ಯಾಕೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಮಹಾರಾಷ್ಟ್ರದ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ನಾಸಿಕ್‌ನ ಕೃಷಿ ಉತಪನ್ ಬಜಾರ್ ಸಮಿತಿಯಲ್ಲಿ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ದೇಶದ ಟಿವಿ ಮಾಧ್ಯಮಗಳ ಬಗ್ಗೆಯೂ ಟೀಕೆ ಮಾಡಿದ ರಾಹುಲ್‌ ಗಾಂಧಿ, “ರೈತರ ಸಮಸ್ಯೆಗಳು, ಹಣದುಬ್ಬರ, ನಿರುದ್ಯೋಗ ಮತ್ತು ಅಗ್ನಿವೀರರ ಸಮಸ್ಯೆಗಳು ಇಂದು ದೇಶದಲ್ಲಿ ಪ್ರಮುಖವಾಗಿವೆ, ಆದರೆ ಟಿವಿ ಚಾನೆಲ್‌ಗಳಲ್ಲಿ, ಈ ವಿಷಯಗಳ ಕುರಿತು ನೀವು ಎಂದಿಗೂ ಚರ್ಚೆಯನ್ನು ನೋಡುವುದಿಲ್ಲ. “ಬದಲಿಗೆ, ಟಿವಿ ಚಾನೆಲ್‌ಗಳು ಮೋದಿ ಜಿಯನ್ನು 24 ಗಂಟೆಗಳ ಕಾಲ ತೋರಿಸುತ್ತವೆ; ಕೆಲವೊಮ್ಮೆ ಅವರು ಪೂಜೆ ಮಾಡಲು ಸಮುದ್ರದ ಕೆಳಗೆ ಹೋಗುತ್ತಾರೆ ಮತ್ತು ಟಿವಿ ಕ್ಯಾಮೆರಾ ಅವರೊಂದಿಗೆ ಹೋಗುತ್ತದೆ ಎಂದು ಗಾಂಧಿ ಆರೋಪಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!