spot_img
Saturday, December 7, 2024
spot_img

ಕುಂದಾಪುರ ಲಯನ್ಸ್ ಕ್ಲಬ್ ವತಿಯಿಂದ ಸುಂದರೀಕರಣಗೊಳಿಸಿದ ಮೇಲ್ಸೆತುವೆಯ ತಳಭಾಗ ಉದ್ಘಾಟನೆ

ಕುಂದಾಪುರ, ಮಾ.11: ಕುಂದಾಪುರ ಮೇಲ್ಸೆತುವೆಯ ತಳಭಾಗ ಸೂಕ್ತ ನಿರ್ವಹಣೆ ಇಲ್ಲದೆ ಇರುವ ಸಂದರ್ಭ ಲಯನ್ಸ್ ಕ್ಲಬ್ ಕುಂದಾಪುರದವರು ವಿಶೇಷ ಆಸಕ್ತಿಯಿಂದ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದು ಸೌಂದರ್ಯಕರಣಗೊಳಿಸಿದ್ದಾರೆ. ಕುಂದಾಪುರದ ಹೃದಯಭಾಗದ ಸ್ಥಳ ಈಗ ಅತ್ಯಂತ ಸುಂದರವಾಗಿದ್ದು, ನೈರ್ಮಲ್ಯಕರಣ ಕಾಪಾಡುವ ಕೆಲಸ ಎಲ್ಲರ ಜವಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಪ್ರಾಧೀಕಾರದ ಮೂಲಕ ಪಾರ್ಕಿಂಗ್ ವ್ಯವಸ್ಥೆಗೆ ಅನುಮತಿ ದೊರಕಿಸಿಕೊಡುವ ಪ್ರಯತ್ನ ನಡೆಸಲಾಗುವುದು ಎಂದು ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಕುಂದಾಪುರ ಸುವರ್ಣ ಮಹೋತ್ಸವದ ಅಂಗವಾಗಿ ಕುಂದಾಪುರ ಶಾಸ್ತ್ರೀ ಸರ್ಕಲ್‌ನ ಮೇಲ್ಸೆತುವೆಯ ತಳಭಾಗವನ್ನು ಸುಮಾರು 24 ಲಕ್ಷ ವೆಚ್ಚದಲ್ಲಿ ಸೌಂದರ್ಯಕರಣ ಮಾಡಲಾಗಿದ್ದು ಅದರ ಪುರಸಭೆಗೆ ಹಸ್ತಾಂತರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕುಂದಾಪುರದ ನಗರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ಪ್ರಜ್ಞಾವಂತ ಎಲ್ಲರ ಜವಬ್ದಾರಿಯಾಗಿದೆ. ಆಚೆ ಭಾಗವನ್ನು ಕೂಡಾ ಇದೇ ರೀತಿ ಸುಂದರೀಕರಣ ಮಾಡುವಲ್ಲಿ ದಾನಿಗಳು ಮುಂದೆ ಬರುವವರಿದ್ದಾರೆ. ಲಯನ್ಸ್ ಕ್ಲಬ್ ಕುಂದಾಪುರ ಇವರ ಸೇವಾ ಕಾರ್ಯ ಶ್ಲಾಘನಾರ್ಹವಾದುದು ಎಂದರು.
ಲಯನ್ಸ ಡಿಸ್ಟಿಕ್ ೩೧೭ಸಿ ಗವರ್ನರ್ ಡಾ.ನೇರಿ ಕರ್ನೇಲಿಯೋ ಮಾತನಾಡಿ, ಲಯನ್ಸ್ ಕ್ಲಬ್ ನ ಗುರಿ ಸಮಾಜದ ಸ್ವಾಸ್ಥ್ಯ ಕಾಪಾಡುವುದು, ಸ್ವಷ್ಚತೆಯ ಅರಿವು ಮೂಡಿಸುವುದು, ನಗರ ಸೌಂದರ್ಯ ಕಾಪಾಡುವ ಕೆಲಸ ಮಾಡುತ್ತಿದೆ. ಪರಿಸರ ಸಂರಕ್ಷಣೆ ನಮ್ಮ ಮುಖ್ಯ ಉದ್ದೇಶ, ಸಾರ್ವಜನಿಕ ಸ್ಥಳಗಳು, ಉದ್ಯಾವನಗಳುಮ ಪಾರ್ಕುಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಲಯನ್ಸ್ ಕ್ಲಬ್ ಶ್ರಮಿಸುತ್ತಿದೆ. ಆ ಹಿನ್ನೆಲೆಯಲ್ಲಿ ಕುಂದಾಪುರ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವವ ಸಂದರ್ಭದಲ್ಲಿ ಎಲ್ಲರೂ ಮೆಚ್ಚುವಂತಹ ಕಾರ್ಯ ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ಸುವರ್ಣ ಮಹೋತ್ಸವ ಯೋಜನೆಗೆ ಸಹಕಾರ ನೀಡಿದ ಕುಂದಾಪುರ ಲಯನ್ಸ್ ಕ್ಲಬ್‌ನ ಸ್ಥಾಪಕ ಬಸ್ರೂರು ವೀರರಾಜೇಂದ್ರ ಹೆಗ್ಡೆ ಕುಟುಂಬದವರಿಗೆ ಅಭಿನಂದನಾ ಪತ್ರ ನೀಡಿ ಅಭಿನಂದಿಸಲಾಯಿತು.

ಲಯನ್ಸ್ ಕ್ಲಬ್ ಕುಂದಾಪುರ ಇದರ ಅಧ್ಯಕ್ಷರಾದ ಡಾ.ದಿನೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾದ ಇಂ.ರಮಾನಂದ ಕೆ. ಪ್ರಾಸ್ತಾವಿಕ ಮಾತನಾಡಿ ೧೯೭೨ರಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಆರಂಭಗೊಂಡಿತು. ೧೯೭೩ರಲ್ಲಿ ಅಂತರಾಷ್ಟ್ರೀಯ ಮಾನ್ಯತೆ ದೊರಕಿತು.ಇದೀಗ ೫೧ನೇ ವರ್ಷದಲ್ಲಿ ನಮ್ಮ ಕ್ಲಬ್ ಮುನ್ನೆಡೆಯುತ್ತಿದೆ. ಸುವರ್ಣ ಮಹೋತ್ಸವದ ವರ್ಷದಲ್ಲಿ ೨೪ ವೆಚ್ಚದಲ್ಲಿ ಕುಂದಾಪುರ ಮೇಲ್ಸೆತುವೆ ತಳಭಾಗದ ಸೌಂದರ್ಯಕರಣ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ನಮ್ಮ ಉದ್ದೇಶ ಆಗಿತ್ತು. ಎನ್.ಹೆಚ್.ಐ ಯಿಂದ ಅದಕ್ಕೆ ಅನುಮತಿ ದೊರಕಲಿಲ್ಲ. ಮುಂದೆ ದೊರೆಯುತ್ತದೆ ಎನ್ನುವ ನಿರೀಕ್ಷೆ ಇದೆ. ಈ ಯೋಜನೆ ನಡೆಸಲು ಸರ್ಕಾರ, ಇಲಾಖಾ ಮಟ್ಟದಲ್ಲಿ ಸಹಕಾರ ನೀಡಿದ ಶಾಸಕರು, ಸಹಾಯಕ ಆಯುಕ್ತರು, ಪುರಸಭಾ ಮುಖ್ಯಸ್ಥರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಪುರಸಭಾ ಮುಖ್ಯಾಧಿಕಾರಿ ಮಂಜುನಾಥ ಆರ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಲಯನ್ಸ್ ಪಿಡಿಜಿಗಳಾದ ಪ್ರಕಾಶ್ ಸೋನ್ಸ್, ಬಸ್ರೂರು ರಾಜೀವ ಶೆಟ್ಟಿ, ಮಂಜಪ್ಪ ಸೊರಬ ಶುಭ ಶಂಸನೆಗೈದರು. ಈ ಸಂದರ್ಭದಲ್ಲಿ ಜಯಕರ ಶೆಟ್ಟಿ, ದೇವದಾಸ ಕಾಮತ್, ಸಿಲ್ವೇಸ್ಟರ್ ಅಲ್ಮೇಡಾ, ಲಯನ್ಸ್ ಕ್ಲಬ್ ಕಾರ್ಯದರ್ಶಿ ದಿನಕರ ಆರ್ ಶೆಟ್ಟಿ, ಕೋಶಾಧಿಕಾರಿ ಬಿ.ಶಂಕರ್ ಶೆಟ್ಟಿ, ಸುವರ್ಣ ಮಹೋತ್ಸವ ಕೋಶಾಧಿಕಾರಿ ಸುಧಾಕರ ಶೆಟ್ಟಿ ಹುಂತ್ರಿಕೆ ಮೊದಲಾದವರು ಉಪಸ್ಥಿತರಿದ್ದರು.

ಧಾರಿಣಿ ಕುಂದಾಪುರ ಪ್ರಾರ್ಥಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ರಮೇಶ ಶೆಟ್ಟಿ ಸ್ವಾಗತಿಸಿದರು. ಸುವರ್ಣ ಮಹೋತ್ಸವ ಸಮಿತಿ ಕಾರ್ಯದರ್ಶಿ ಪ್ರಕಾಶ್ ಬೆಟ್ಟಿನ್ ವಂದಿಸಿದರು. ಸದಾನಂದ ನಾವಡ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!