spot_img
Friday, March 20, 2026
spot_img

ನಾಡಿನೆಲ್ಲೆಡೆ ಮಹಾಶಿವರಾತ್ರಿ ಮಹೋತ್ಸವ: ಶಿವಾಲಯಗಳಲ್ಲಿ ಭಕ್ತಸಾಗರ


ಕುಂದಾಪುರ: ಇಂದು ಮಹಾ ಶಿವರಾತ್ರಿಯನ್ನು ವಿಶೇಷ ಭಕ್ತಿ, ಆರಾಧನೆ, ಅನುಷ್ಟಾನಗಳೊಂದಿಗೆ ಆಚರಿಸಲಾಯಿತು. ಕುಂದಾಪುರ ತಾಲೂಕಿನ ಪ್ರಸಿದ್ಧ ಶಿವಾಲಯಗಳಲ್ಲಿ ಭಕ್ತರ ಸಂಧೋಹವೇ ಸೇರಿದ್ದು ಕಂಡು ಬಂತು.

ಕುಂದಾಪುರದ ಕುಂದೇಶ್ವರ ದೇವಸ್ಥಾನ ಬೆಳಿಗ್ಗೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುಂದೇಶ್ವರನಿಗೆ ವಿವಿಧ ಸೇವೆಗಳನ್ನು ಸಲ್ಲಿಸಿ ಪುನೀತರಾದರು. ರುದ್ರಾಭಿಷೇಕ, ಬಿಲ್ವಾರ್ಚನೆ ಮೊದಲಾದ ಸೇವೆಗಳನ್ನು ಸಲ್ಲಿಸುತ್ತಿರುವುದು ಕಂಡು ಬಂತು.

ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನಕ್ಕೂ ಕೂಡ ಭಕ್ತರ ದಂಡು ಹರಿದು ಬಂದಿದೆ. ಕೋಟ ಹಿರೇಮಹಾಲಿಂಗೇಶ್ವರ, ಕುಂದಾಪುರದ ಮೈಲಾರೇಶ್ವರ ದೇವಸ್ಥಾನ, ತಲ್ಲೂರು ಮಹಾಲಿಂಗೇಶ್ವರ ದೇವಸ್ಥಾನ, ಗುಹಾಂತರ ದೇವಾಲಯವಾಗಿರುವ ಕೊಡಪಾಡಿಯ ಗುಹೇಶ್ವರ ದೇವಸ್ಥಾನ, ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಸ್ಥಾನ, ಬೈಂದೂರಿನ ಸೇನೇಶ್ವರ ದೇವಸ್ಥಾನ, ಬೈಂದೂರು ಸಮೀಪದ ಗಂಗನಾಡುವಿನ ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮರವಂತೆಯ ಗಂಗಾಧರೇಶ್ವರ, ಬಸ್ರೂರು ತುಳುವೇಶ್ವರ, ಗುಜ್ಜಾಡಿಯ ಸಂಗಮೇಶ್ವರ, ಹಟ್ಟಿಯಂಗಡಿ ಲೋಕನಾಥೇಶ್ವರ, ಅರೆಹೊಳೆ ಮಹಾಲಿಂಗೇಶ್ವರ, ಕದಳಿ ಮಹಾಲಿಂಗೇಶ್ವರ, ನೈಕಂಬ್ಳಿ ಮಹಾಲಿಂಗೇಶ್ವರ, ಹಕ್ಲಾಡಿಯ ಮಹಾಲಿಂಗೇಶ್ವರ, ಬಾರಕೂರು ಪಂಚಲಿಂಗೇಶ್ವರ, ಬ್ರಹ್ಮಾವರ ಮಹಾಲಿಂಗೇಶ್ವರ, ಸೂರಾಲು ಮಹಾಲಿಂಗೇಶ್ವರ, ಅರೆಶಿರೂರು ಕೋಟಿಲಿಂಗೇಶ್ವರ, ವಕ್ವಾಡಿ ಮಹಾಲಿಂಗೇಶ್ವರ ಹೀಗೆ ಶಿವ ಸಾನಿಧ್ಯಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಸೇವೆಗಳು ನಡೆದವು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!