spot_img
Wednesday, January 22, 2025
spot_img

ದೇಶದ ಮೊಟ್ಟ ಮೊದಲ ಜಲ ಮಾರ್ಗದ ಮೆಟ್ರೋ ಸೇವೆಗೆ ಪ್ರಧಾನಿ ಮೋದಿ ನಾಳೆ ಚಾಲನೆ !

ಜನಪ್ರತಿನಿಧಿ (ನವ ದೆಹಲಿ) : ಪ್ರಧಾನಿ ನರೇಂದ್ರ ಮೋದಿ ನಾಳೆ(ಬುಧವಾರ) ದೇಶದ ಮೊಟ್ಟ ಮೊದಲ ಜಲ ಮಾರ್ಗದ ಮೆಟ್ರೋ ಸೇವೆಗೆ ಚಾಲನೆ ನೀಡಲಿದ್ದಾರೆ. ಹೂಗ್ಲಿ ನದಿಯ ಅಡಿಯಲ್ಲಿ ನಿರ್ಮಿಸಲಾದ ಸುರಂಗವು ಪೂರ್ವ- ಪಶ್ಚಿಮ ಕಾರಿಡಾರ್ ನ ಹೌರಾ ಮೈದಾನ್ – ಎನ್ ಪ್ಲೇನೇಡ್ ಸಂಪರ್ಕಿಸಲಿದೆ. ಈ ಸಾಧನೆಯು ಎಂಜಿನಿಯರಿಂಗ್ ಜಾಣ್ಮೆಗೆ ಸಾಕ್ಷಿಯಾಗಿದೆ.

ಹೌರಾ ಮೈದಾನ್-ಎನ್ಪ್ಲಾನೇಡ್ ಮೆಟ್ರೋ ಮಾರ್ಗ ಭಾರತದ ಯಾವುದೇ ಪ್ರಬಲ ನದಿಯ ಅಡಿಯಲ್ಲಿ ಮೊದಲ ಸಾರಿಗೆ ಸುರಂಗವನ್ನು ಹೊಂದಿದೆ. ಆದರೆ, ಹೌರಾ ಮೆಟ್ರೋ ನಿಲ್ದಾಣ ದೇಶದಲ್ಲಿಯೇ ಅತ್ಯಂತ ಆಳವಾದದ್ದು ಎನ್ನಲಾಗಿದೆ. ಹೂಗ್ಲಿ ನದಿಯು ಕೋಲ್ಕತ್ತಾ ಮತ್ತು ಹೌರಾ ಅವಳಿ ನಗರಗಳನ್ನು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ದಂಡೆಗಳಲ್ಲಿ ಪ್ರತ್ಯೇಕಿಸುತ್ತದೆ.

ಏಪ್ರಿಲ್‌ 9, 2003ರಲ್ಲಿ ಹೂಗ್ಲಿ ನದಿಯ ನೀರೊಳಗಿನ ಸುರಂಗದ ಅಡಿಯಲ್ಲಿ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರ ನಡೆಸಿತು.

ಈ ಬಗ್ಗೆ ಮಾಹಿತಿ ನೀಡಿದ ಮೆಟ್ರೋ ರೈಲ್ವೇ ಸಿಪಿಆರ್ ಒ ಕೌಶಿಕ್ ಮಿತ್ರಾ, ದೇಶದ ಮೊಟ್ಟ ಮೊದಲ ಜಲ ಮಾರ್ಗದ ಮೆಟ್ರೋ ಸೇವೆಗೆ ನಾಳೆ ಉದ್ಘಾಟನೆ ನಡೆದರೂ ಪ್ರಯಾಣಿಕರ ಸೇವೆಗಳು ಕೆಲವು ದಿನಗಳ ಬಳಿಕ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!