Sunday, September 8, 2024

ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕದ ಪರವಾಗಿ ವಾದ ಮಂಡಿಸಿದ್ದ ಪದ್ಮವಿಭೂಷಣ ನ್ಯಾ. ಫಾಲಿ ಸ್ಯಾಮ್ ನಾರಿಮನ್ ಅಸ್ತಂಗತ

ಜನಪ್ರತಿನಿಧಿ (ನವ ದೆಹಲಿ) : ಖ್ಯಾತ ಸಾಂವಿಧಾನಿಕ ನ್ಯಾಯಶಾಸ್ತ್ರಜ್ಞ ಹಾಗೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಸ್ಯಾಮ್ ನಾರಿಮನ್ ಅವರು ದೆಹಲಿಯಲ್ಲಿ ಅಸ್ತಂಗತರಾಗಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ತಮ್ಮ 95ನೇ ವಯಸ್ಸಿನಲ್ಲಿ ಫಾಲಿ ನಾರಿಮನ್ ನಿಧರಾಗಿದ್ದಾರೆ. ಅವರು 70 ವರ್ಷಗಳಿಗೂ ಅಧಿಕ ವರ್ಷಗಳ ಕಾಲ ಅವರು ವಕೀಲಿ ವೃತ್ತಿ ನಿರ್ವಹಿಸಿದ್ದರು. 13,565 ಕ್ಕೂ ಹೆಚ್ಚು ಪ್ರಕರಣಗಳನ್ನು ಅವರು ಸೇವಾ ಅವಧಿಯಲ್ಲಿ ನಿರ್ವಹಿಸಿದ್ದಾರೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

1929 ರ ಜನವರಿ 10 ರಂದು ರಂಗೂನ್‌ನಲ್ಲಿ ಪಾರ್ಸಿ ಪೋಷಕರಿಗೆ ಜನಿಸಿದ ನಾರಿಮನ್, ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ಇತಿಹಾಸದಲ್ಲಿ ಬಿ.ಎ. ಮತ್ತು 1950 ರಲ್ಲಿ ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ (LL.B.) ಪಡೆದಿದ್ದಾರೆ. ಕಲಿಕೆಯಲ್ಲಿ ಯಾವಾಗಲೂ ಮೊದಲ ಸ್ಥಾನದಲ್ಲಿದ್ದರು. ನಾರಿಮನ್ ಅವರು ನವೆಂಬರ್ 1950 ರಲ್ಲಿ ಬಾಂಬೆ ಹೈಕೋರ್ಟ್‌ನ ವಕೀಲರಾಗಿ ನೋಂದಾಯಿಸಿಕೊಂಡರು. 1961 ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು.

1971 ರಲ್ಲಿ ಅವರು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿ ನೇಮಕಗೊಂಡರು. ಮೇ 1972 ರಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು.

ಕಾವೇರಿ ವಿವಾದ ಹೋರಾಟ:
ಕಾವೇರಿ ನದಿ ನೀರು ಹಂಚಿಕೆ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ಹಾಗೂ ನಂತರದ ಬೆಳವಣಿಗೆಗಳ ಪರಿಣಾಮವಾಗಿ ರಾಜ್ಯದ ಮಾಧ್ಯಮಗಳು, ರಾಜಕಾರಣಿಗಳು ಮತ್ತು ಜನರಲ್ಲಿ ಚರ್ಚಿತವಾಗುತ್ತಿರುವ ಹಾಗೂ ಬಹು ಟೀಕೆಗೆ ಕಾರಣವಾದ ಹೆಸರು ನ್ಯಾ. ಫಾಲಿ ಎಸ್‌ ನಾರಿಮನ್‌.

 ಸುಮಾರು 25 ವರ್ಷಗಳ ಕಾಲ ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕ ರಾಜ್ಯವನ್ನು ಅವರು ಪ್ರತಿನಿಧಿಸಿದ್ದರು. ಕಾವೇರಿ ನೀರಿನ ಹರಿವು 380 ಟಿಎಂಸಿಯಿಂದ 192 ಟಿಎಂಸಿಗೆ ಇಳಿಸಿದ ಸಾಧನೆ ಅವರಿಗೆ ಸಲ್ಲುತ್ತದೆ. ರಾಜ್ಯದ ಬಹುತೇಕ ಜಲ ವಿವಾದಗಳ ಕುರಿತು ನಾರಿಮನ್ ವಾದ ಮಂಡಿಸಿದ್ದರು. ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀ.ಗೆ ಹೆಚ್ಚಿಸುವ ಪ್ರಕರಣದಲ್ಲಿ ಅವರು ಗೆದ್ದಿದ್ದರು. 

ಮೂರು ದಶಕಗಳಿಂದ ಕೃಷ್ಣಾ, ಕಾವೇರಿ, ಮಹದಾಯಿ ಸೇರಿದಂತೆ ಅಂತಾರಾಜ್ಯ ನದಿ ನೀರು ಹಂಚಿಕೆಯ ಎಲ್ಲ ವ್ಯಾಜ್ಯಗಳಲ್ಲಿ ರಾಜ್ಯದ ಪರ ವಾದಿಸಿದ ಅಂತಾರಾಷ್ಟ್ರೀಯ ಖ್ಯಾತಿಯ ಜಲತಜ್ಞರೆಂಬ ಖ್ಯಾತಿ ಫಾಲಿ ಎಸ್ ನಾರಿಮನ್ ಅವರಿಗೆ ಸಲ್ಲುತ್ತದೆ ಎನ್ನುವುದು ಇಲ್ಲಿ ಗಮನಾರ್ಹ ವಿಚಾರ. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಮಾರು 2 ದಶಕಗಳಿಂದಲೂ ನಾರಿಮನ್ ಅವರೇ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರು.

ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಕರ್ನಾಟಕ ಪಾಲಿಸದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿದ್ದ ನಾರಿಮನ್ ಅವರು ಕರ್ನಾಟಕದ ಪರ ತಾವು ವಾದ ಮಂಡಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇನ್ನು, ಜನವರಿ 1991 ರಲ್ಲಿ ಪದ್ಮಭೂಷಣ ಮತ್ತು 2007 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದರು. ಅವರು 2002 ರಲ್ಲಿ ನ್ಯಾಯಕ್ಕಾಗಿ ಗ್ರೂಬರ್ ಪ್ರಶಸ್ತಿಗೂ ಪಾತ್ರರಾಗಿದ್ದರು.  

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!