spot_img
Wednesday, March 4, 2026
spot_img

ನಿರೀಕ್ಷಾ ದಿನಕರ ಶೆಟ್ಟಿ ಮುಂಬಾರು ಅವರಿಗೆ ‘ಸುವರ್ಣ ಶ್ರೀ ಕನ್ನಡ’ ಪ್ರಶಸ್ತಿ

ಬೆಂಗಳೂರು: ನಾಟ್ಯ ಮಯೂರಿ ನೃತ್ಯ ಶಾಲೆ, ವಿರಾಜಪೇಟೆ ಕೊಡಗು ಜಿಲ್ಲೆ, ಇದರ ಸಂಸ್ಥಾಪಕಿ, ಶ್ರೀಮತಿ ಪ್ರೇಮಾಂಜಲಿ ಆಚಾರ್ಯ ಆಯೋಜಿಸಿದ, ನೃತ್ಯೋತ್ಸವ ಕಾರ್ಯಕ್ರಮ ಫೆ. 4 ಭಾನುವಾರ ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನಲ್ಲಿ ನಡೆಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ನಾಡಿನ ವಿವಿಧ ಸಾಧನೆ ಮಾಡಿದ ಸಾಧಕರಿಗೆ, ಸುವರ್ಣ ಸಂಭ್ರಮ ಕನ್ನಡಿಗ ಪ್ರಶಸ್ತಿ, ಹಾಗೂ ಸುವರ್ಣ ಶ್ರೀ ಕನ್ನಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಮುಂಬಾರು ದಿನಕರ ಶೆಟ್ಟಿ, ಮತ್ತು ಅಕ್ಷತಾ ದಂಪತಿಗಳ ಪುತ್ರಿ, ಯೋಗ ಪಟು ನಿರೀಕ್ಷಾ ದಿನಕರ ಶೆಟ್ಟಿ ಅವರಿಗೆ ಸುವರ್ಣ ಶ್ರೀ ಕನ್ನಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡದ ಹಿರಿಯ ಗಾಯಕ ಶಶಿಧರ ಕೋಟೆ, ಕನ್ನಡ ಚಿತ್ರರಂಗದ ಹಿರಿಯ ನಟ ಸುಧೀರ್ ಅವರ ಪತ್ನಿ ಮಾಲತಿ ಸುಧೀರ್, ಮೈಸೂರ್ ಸಿಲ್ಕ್ ಮಾಲೀಕರಾದ ಮಮತಾ ಅಶೋಕ್, ಹಾಗೂ ಕಿರುತೆರೆಯ ಹಲವು ಕಲಾವಿದರು, ನಟ ನಿರ್ಮಾಪಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯೋಗಪಟು ನಿರೀಕ್ಷಾ ದಿನಕರ ಶೆಟ್ಟಿಯವರಿಂದ ಯೋಗ ಪ್ರದರ್ಶನ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!