spot_img
Wednesday, March 4, 2026
spot_img

ಸಿರಿಬಾಗಿಲು ಪ್ರತಿಷ್ಠಾನಕ್ಕೆ ಪಂಜ ಶ್ರೀ ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ಗೌರವ

ಸುಳ್ಯ: ಗಡಿನಾಡು ಕಾಸರಗೋಡಿನ ಶ್ರೇಷ್ಠ ಸಂಸ್ಥೆ ಸಿರಿಬಾಗಿಲು ವೆಂಕಪ್ಷಯ್ಯ ಸಾಂಸ್ಕೃತಿಕ ಪ್ರತಿಷ್ಠಾನಕ್ಕೆ ಸುಳ್ಯ ತಾಲೂಕಿನ ಪಂಜದಲ್ಲಿ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಗೌರವಿಸಲಾಯಿತು.

ಗಡಿನಾಡು ಕಾಸರಗೋಡಿನಲ್ಲಿ ಸಾಂಸ್ಕೃತಿಕ ಭವನದ ಮೂಲಕ ,ಕನ್ನಡ- ಸಂಸ್ಕೃತಿ- ಸಾಹಿತ್ಯ- ಕಲೆಯ ಸಮಗ್ರ ಅಧ್ಯಯನಕ್ಕೆ ವಿವಿಧ ಅಧ್ಯಯನ ಯೋಗ್ಯ ಚಟುವಟಿಕೆ ನಡೆಸುತ್ತಿರುವ ಪ್ರತಿಷ್ಠಾನವು, ಭವನದಲ್ಲಿ ತೆಂಕುತಿಟ್ಟು ಯಕ್ಷಗಾನ ಮ್ಯೂಸಿಯಂ- ಪುಸ್ತಕ ಭಂಡಾರ- ಪುಸ್ತಕ ಪ್ರಕಾಶ -ಕೀರ್ತಿಶೇಷ ಕಲಾವಿದರ ಭಾವಚಿತ್ರ ಅನಾವರಣ ಉಂಟಾದ ಯೋಜನೆ ಹಮ್ಮಿಕೊಂಡು ಯಶಸ್ವಿಯಾಗಿದೆ. ಕಳೆದ ಡಿಸೆಂಬರು 26ರಂದು ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಯವರಿಂದ ಲೋಕಾರ್ಪಣೆಯಾಗಿದೆ.

ಶ್ರೀ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಡಾಕ್ಟರ್ ಅನಿಲ್ ಕುದುಮಾರುಬೆಟ್ಟು ಅವರು ಪ್ರತಿಷ್ಠಾನಕ್ಕೆ ಗೌರವಫಲಕನೀಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಮೇಳದ ಪ್ರಬಂಧಕರಾದ ಬಿ. ಯನ್. ಗಿರೀಶ ಹೆಗ್ಡೆ ಅಭಿನಂದನಾ ಭಾಷಣ ಮಾಡಿದರು, ಕಲಾಭಿಮಾನಿಗಳಾದ ಡಾ. ಸತ್ಯನಾರಾಯಣ ಕಾವು, ವಿಜಯ ಭಟ್ ಪಂಜ ಉಪಸ್ಥಿತರಿದ್ದರು.

ಜಯರಾಮ ಕಲ್ಲಂಜೆ ಕಾರ್ಯಕ್ರಮ ನಿರೂಪಿಸಿದರು. ಭಾಗವಹಿಸಿದ ಸಹಸ್ರಾರು ಕಲಾಭಿಮಾನಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ಬಳಿಕ ಶ್ರೀ ಧರ್ಮಸ್ಥಳ ಮೇಳದವರಿಂದ ಕಾರುಣ್ಯಾಂಬುಧಿ ಶ್ರೀ ರಾಮ ಯಕ್ಷಗಾನ ಬಯಲಾಟ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!