spot_img
Sunday, March 8, 2026
spot_img

ಯೂನೂಸ್ ಖಾಝಿ ಭಟ್ಕಳ ಅವರಿಗೆ ವಿಶ್ವಮಾನ್ಯ ಅಂತರರಾಷ್ಟ್ರೀಯ ಪ್ರಶಸ್ತಿ-2024

ಭಟ್ಕಳ: ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಮತ್ತು ಅನಿವಾಸಿ ಕನ್ನಡಿಗರ ವೇದಿಕೆ ಸೌದಿ ಅರೇಬಿಯ ಒಟ್ಟಾಗಿ ಮೊದಲ ಬಾರಿಗೆ ಸೌದಿ ಅರೇಬಿಯದ ದಮಾಮ್ ನಲ್ಲಿ ಫೆಬ್ರವರಿ 8, 9 ರಂದು ನಡೆಯುವ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಅನಿವಾಸಿ ಭಾರತೀಯ ಭಟ್ಕಳದಹೆಸರಾಂತ ಅಂಜುಮಾನ್ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ಸದಸ್ಯರು, ಸನ್ ಸಿಟಿ ಅರೇಬಿಯ ಮತ್ತು ಪಾರ್ಟ್ ನರ್ಸ್ ಟ್ರೇಡಿಂಗ್ ಕಂಪೆನಿಯ ಮುಖ್ಯಸ್ಥರು, ಭಟ್ಕಳ ಕರಾವಳಿ ಕರ್ನಾಟಕ NRI ಫೋರಂನ ಅಧ್ಯಕ್ಷರು ಆಗಿರುವ ಯೂನೂಸ್ ಖಾಝಿ ಅವರಿಗೆ ಸಮಾಜ ಸೇವೆ, ಶಿಕ್ಷಣ ಕ್ಷೇತ್ರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಅಪಾರ ಸೇವೆಯನ್ನು ಪರಿಗಣಿಸಿ ವಿಶ್ವ ಮಾನ್ಯ ಪ್ರಶಸ್ತಿ 2024 (GLOBAL MAN AWARD 2024) ನ್ನು ನೀಡಿ ಗೌರವಿಸಲಾಗುತ್ತದೆ ಎಂದು ಸಮ್ಮೇಳನ ಸಮಿತಿ ತಿಳಿಸಿದೆ.

ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿ, ಬಾಷೆಯನ್ನು ಅನಿವಾಸಿ ಕನ್ನಡಿಗರಲ್ಲಿ ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು. ಈ ಕಾರ್ಯಕ್ರಮದಲ್ಲಿ ಉದ್ಯಮ ಗೋಷ್ಠಿ, ಕವಿಗೋಷ್ಠಿ .ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಕರ್ನಾಟಕದಿಂದ ಕಲಾವಿದರು, ಸಾಹಿಗಳು, ಸಚಿವರು ಸೇರಿದಂತೆ ಅನೇಕ ಕಲಾ ತಂಡಗಳು ಭಾಗವಹಿಸುತ್ತಿದ್ದು ಈ ಸಮ್ಮೇಳನವನ್ನು 2004 ರಿಂದ ವಿವಿಧ ದೇಶಗಳಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸಮ್ಮೇಳನ ಸಮಿತಿ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!