Sunday, September 8, 2024

ಕಲೆಯ ಸಾಕ್ಷಾತ್ಕಾರಕ್ಕೆ ಕಾರಣರಾದ ಕಲಾವಿದರನೇಕರು ಪ್ರಾತಃಸ್ಮರಣಿಯರು- ಎಚ್. ಸುಜಯೀಂದ್ರ ಹಂದೆ

ಕುಂದಾಪುರ: ಕರಾವಳಿ ಮತ್ತು ಮಲೆನಾಡಿನ ಜನರ ಬೌದ್ಧಿಕ ಶ್ರೀಮಂತಿಕೆಗೆ ಕಾರಣವಾದದ್ದು ಯಕ್ಷಗಾನ ಕಲೆ. ಆನಂದದದ ಅನುಭೂತಿಯೊಂದಿಗೆ ಬುದ್ಧಿಯ ವಿಕಸನಕ್ಕೆ ಯಕ್ಷಗಾನ ದಾರಿಯಾಗಿದೆ. ರಂಗಸ್ಥಳದಲ್ಲಿ ಕಲೆಯ ಸಾಕ್ಷಾತ್ಕಾರಕ್ಕೆ ಕಾರಣರಾದ ಕಲಾವಿದರನೇಕರು ಪ್ರಾತಃಸ್ಮರಣಿಯರು. ಅಂತಹ ಮೇರು ಕಲಾವಿದರ ಸಾಲಿನಲ್ಲಿ ಖ್ಯಾತ ಸ್ತ್ರೀವೇಷಧಾರಿ ಅರಾಟೆ ಮಂಜುನಾಥರು ಅಭಿವಂದನೀಯರು. ಕಲಾವಿದನಾಗಿ, ಸಂಘಟಕನಾಗಿ, ಕಲಾವಿದರ ನೋವಿನ ಧ್ವನಿಯಾಗಿ, ಸಿಡಿಲಾಗಿ ಗುರುತಿಸಿಕೊಂಡವರು ಅರಾಟೆಯವರು. ಹಲವು ಕಲಾವಿದರ ಪ್ರತಿಭಾ ಅನಾವರಣಕ್ಕೆ ಕಾರಣರಾದ ಅರಾಟೆಯವರ ಹೆಸರಿನ ಪ್ರಶಸ್ತಿ ಅರ್ಹರಿಗೆ ದೊರೆತಿದೆ ಎಂದು ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್. ಸುಜಯೀಂದ್ರ ಹಂದೆ ಹೇಳಿದರು.

ಗಾವಳಿಯ ಯಕ್ಷ ಕುಟೀರದಲ್ಲಿ ಜನವರಿ 30 ರಂದು ಅರಾಟೆ ಕುಟುಂಬದ ಆಯೋಜನೆಯಲ್ಲಿ ನಡೆದ ಖ್ಯಾತ ಸ್ತ್ರೀವೇಷಧಾರಿ ಅರಾಟೆ ಮಂಜುನಾಥ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸುಜಯೀಂದ್ರ ಹಂದೆ ಮಾತನಾಡಿದರು. ಹಿರಿಯ ಯಕ್ಷಗಾನ ಕಲಾವಿದ ಹೊಸಂಗಡಿ ರಾಜೀವ ಶೆಟ್ಟಿಯವರಿಗೆ ಅರಾಟೆ ಮಂಜುನಾಥ ಗೌರವ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

ಗಣೇಶ್ ಪ್ರಸಾದ್ ಅರಾಟೆ ಅಧ್ಯಕ್ಷತೆವಹಿಸಿದ್ದರು. ಪೆರ್ಡೂರು ಮೇಳದ ಯಜಮಾನ ವೈ. ಕರುಣಾಕರ ಶೆಟ್ಟಿ, ಉದ್ಯಮಿ ಬಿರ್ತಿ ರಾಜೇಶ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಯಾದವ ಯರ್ಮಾಳ್, ಸರಳೆಬೆಟ್ಟು ಮಕ್ಕಳ ಮೇಳದ ಕಮಲಾಕ್ಷ ಪ್ರಭು. ಅರಾಟೆಯವರ ಧರ್ಮಪತ್ನಿ ಜಲಜಾಕ್ಷಿ ಅರಾಟೆ, ಅರಾಟೆ ಕುಟುಂಬದ ಜಯಶ್ರೀ ಆರ್. ಕೆ., ವಾಣಿಶ್ರೀ ಡಿ.ಅಮೀನ್, ವನಿತಾ ಜಿ.ಪಿ. ಉಪಸ್ಥಿತರಿದ್ದರು.

ಮೋಹನೀಸ್ ಜಿ.ಪಿ. ಅರಾಟೆ ಸ್ವಾಗತಿಸಿ, ಪ್ರಶಂತ್ ರಟ್ಟಾಡಿ ವಂದಿಸಿದರು. ವಿದ್ವಾನ್ ಅಶೋಕ್ ಆಚಾರ್ಯ ಸಾಯಿಬ್ರಕಟ್ಟೆ ನಿರ್ವಹಿಸಿದರು. ಬಳಿಕ ಮೆಕ್ಕೆಕಟ್ಟು ಮೇಳದವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!