spot_img
Thursday, April 2, 2026
spot_img

ಫೆ.04ಕ್ಕೆ ಸತೀಶ್‌ ಶೆಟ್ಟಿ ವಕ್ವಾಡಿ ಅವರ ʼಕೊನೆಯ ಎರಡು ಎಸೆತಗಳುʼ ಕಥಾ ಸಂಕಲನ ಬಿಡುಗಡೆ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಇಲ್ಲಿನ ಬಿಬಿ ಪಬ್ಲಿಕೇಷನ್ಸ್‌ ಹೊರತರುತ್ತಿರುವ ಸತೀಶ್‌ ಶೆಟ್ಟಿ ವಕ್ವಾಡಿ ಅವರ ಎರಡನೇ ಕಥಾ ಸಂಕಲನ ʼಕೊನೆಯ ಎರಡು ಎಸೆತಗಳುʼ ಕೃತಿಯ ಬಿಡುಗಡೆ ಸಮಾರಂಭ ಇದೇ ಬರುವ ಭಾನುವಾರ (ಫೆ.04)ದಂದು ಪುರವಂಕರ ಸಭಾಂಗಣ, ಸುಚಿತ್ರ, ಬಿ.ವಿ. ಕಾರಂತ ರಸ್ತೆ ಬನಶಂಕರಿ ಎರಡನೇ ಹಂತ, ಬೆಂಗಳೂರಿನಲ್ಲಿ ಬೆಳಗ್ಗೆ ಪೂರ್ವಾಹ್ನ 10:30ರಿಂದ ನಡೆಯಲಿದೆ ಎಂದು ಕೃತಿಕಾರ ಸತೀಶ್‌ ಶೆಟ್ಟಿ ವಕ್ವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡದ ಖ್ಯಾತ ಚಿತ್ರ ಸಾಹಿತಿ ಹಾಗೂ ಕಥೆಗಾರ ಜಯಂತ ಕಾಯ್ಕಿಣಿ ಕೃತಿ ಬಿಡುಗಡೆ ಮಾಡಲಿದ್ದು, ಕಥೆಗಾರ, ಕಾದಂಬರಿಕಾರ ಡಾ. ಅಮರೇಶ ನುಗಡೋಣಿ ಕೃತಿಯ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕುಂದಗನ್ನಡ ಸಾಂಸ್ಕೃತಿಕ ರಾಯಭಾರಿ ಮನು ಹಂದಾಡಿ ಕುಂದಾಪುರ ಕನ್ನಡದ ಸೊಗಸು ಚೆಲ್ಲಲಿದ್ದಾರೆ.

ಕೃತಿ ಬಿಡುಗಡೆ ಕಾರ್ಯಕ್ರಮ ಆದ ಬಳಿಕ ಕೃತಿಕಾರರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು, ಕಥೆಗಾರ ಹಾಗೂ ಪ್ರಕಾಶಕ ಶ್ರೀಧರ ಬನವಾಸಿ ʼಲೇಖಕರೊಂದಿಗೆ ಮಾತುಕತೆʼಯನ್ನು ನಡೆಸಿಕೊಡಲಿದ್ದಾರೆ.

ಬುಕ್‌ ಬ್ರಹ್ಮದ ಪ್ರಧಾನ ಸಂಪಾದಕ ದೇವು ಪತ್ತಾರ ಪ್ರಸ್ತಾವಿಸಿ, ಸ್ವಾಗತಿಸಲಿದ್ದು, ಲೇಖಕಿ ರೇವತಿ ಶೆಟ್ಟಿ ಕೋಟ ಕಾರ್ಯಕ್ರಮ ನಿರೂಪಿಸಿ, ಬುಕ್‌ ಬ್ರಹ್ಮದ ಹಿರಿಯ ಉಪ ಸಂಪಾದಕಿ ಪ್ರಜ್ಞಾ ಬಾರ್ಯ ತಂತ್ರಿ ವಂದನಾರ್ಪಣೆ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ಕೃತಿಕಾರರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!