spot_img
Thursday, April 2, 2026
spot_img

ಮೋದಿ ಬಿಜೆಪಿಯ ಇಂದಿರಾಗಾಂಧಿ : ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌

ಜನಪ್ರತಿನಿಧಿ ವಾರ್ತೆ ( ನವ ದೆಹಲಿ) :  ಜನ ಹೇಗೆ ಇಂದಿರಾಗಾಂಧಿಗೆ ಮತ ಚಲಾಯಿಸಿದ್ದಾರೋ ಹಾಗೆ ಪ್ರಧಾನಿ ಮೋದಿಗೂ ಮತ ಚಲಾಯಿಸುತ್ತಾರೆ. ʼಪ್ರಧಾನಿ ಮೋದಿ ಬಿಜೆಪಿಯ ಇಂದಿರಾಗಾಂಧಿʼ ಎಂದು ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿ ವಾಹಿನಿ ʼಇಂಡಿಯಾ ಟುಡೇʼ ನಡೆಸಿದ ವಿಶೇಷ ಸಂದರ್ಶನದಲ್ಲಿ ಹಿರಿಯ ಪತ್ರಕರ್ತ ರಾಜದೀಪ್‌ ಸರ್ದೇಸಾಯಿ ಕೇಳಿದ ಪ್ರಶ್ನೆವೊಂದಕ್ಕೆ ಪ್ರಶಾಂತ್‌ ಕಿಶೋರ್‌ ಹೀಗೆ ಉತ್ತರಿಸಿದ್ದಾರೆ.

ಜನ ಮೋದಿಯನ್ನು ನೋಡಿ ಮತ ಚಲಾಯಿಸುತ್ತಾರೆ. ರಾಮ, ರಾಮ ಮಂದಿರ, ಹಿಂದುತ್ವ ಎಲ್ಲವೂ ಬ್ರ್ಯಾಂಡ್‌ ಮೋದಿಯಲ್ಲಿ ಅಡಕವಾಗಿದೆ. ಜನ ಮತ್ತೆ ಮೋದಿಗಾಗಿ ತಮ್ಮ ಮತ ಚಲಾಯಿಸುತ್ತಾರೆ. ರಾಮ ಮಂದಿರ ನಿರ್ಮಾಣವಾಗಿದೆ ಎನ್ನುವ ಕಾರಣಕ್ಕೆ ಮತ ಹಾಕುವುದಿಲ್ಲ. ಜನ ಮತ ಹಾಕುವುದು ಮೋದಿಗೆ ಎಂದು ಅವರು ಹೇಳಿದ್ದಾರೆ.

2002ರಲ್ಲಿ ಮೋದಿ ಹಿಂದೂ ಹೃದಯ ಸಾಮ್ರಾಟ್‌ ಆಗಿದ್ದರು, 2007 ರಲ್ಲಿ ʼಗುಜರಾತ್‌ ಮಾಡೆಲ್ʼನೊಂದಿಗೆ ಒಬ್ಬ ಸಮರ್ಥ ಅಭಿವೃದ್ಧಿಯ ಹರಿಕಾರನಾಗಿ ಗುರುತಿಸಿಕೊಂಡರು, 2014 ರಲ್ಲಿ ಭಾರತವನ್ನು ಪ್ರಗತಿಯತ್ತ ಸಾಗಿಸುವ ಹರಿಕಾರನಾಗಿ ಕಾಣಿಸಿಕೊಂಡರು, 2019ರಲ್ಲಿ ದೇಶದ ಬೆಳವಣಿಗೆಗೆ ವೇಗ ತಂದುಕೊಡುವವರಾಗಿ ಗುರುತಿಸಿಕೊಂಡರು.  2024ರಲ್ಲಿ ರಾಮನನ್ನು ಮರಳಿ ತಂದುಕೊಟ್ಟವರಾಗಿ ಕಾಣಿಸಿಕೊಂಡರು. ಜನ ಬಿಜೆಪಿಗಿಂತ ಹೆಚ್ಚಾಗಿ ಮೋದಿಗಾಗಿ ಮತ ಚಲಾಯಿಸುತ್ತಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು, ಕಾಂಗ್ರೆಸ್‌ನ ಅನಿಶ್ಚಿತತೆಯ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್‌ ಇಂದು ಗೆಲ್ಲುವುದಕ್ಕೆ ಹೆಣಗಾಡುತ್ತಿರುವ ಲೋಕಸಭಾ ಕ್ಷೇತ್ರಗಳ ಪೈಕಿ ಶೇ.೩೦ರಷ್ಟು ಸೀಟುಗಳನ್ನು ಪಡೆದುಕೊಂಡರೇ, ದೊಡ್ಡ ಬದಲಾವಣೆಯೇ ಕಾಣಬಹುದು. ಇತ್ತೀಚೆಗೆ ಕಾಂಗ್ರೆಸ್‌ ಗೆದ್ದಿದ್ದು ಬಿಜೆಪಿ ಎದುರು ಅಲ್ಲ ಎನ್ನುವುದು ಇಲ್ಲಿ ಮುಖ್ಯ ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಕಾಂಗ್ರೆಸ್‌ನ ನೇತೃತ್ವ ವಹಿಸಿಕೊಂಡಿಲ್ಲ ಅಂತಾದರೇ, ಕಾಂಗ್ರೆಸ್‌ನ ನೇತೃತ್ವ ವಹಿಸಿಕೊಳ್ಳುವುದಕ್ಕೆ ಬಿಡಬೇಕು. ಕಾಂಗ್ರೆಸ್‌ನನ್ನು ರಾಹುಲ್‌ ಗಾಂಧಿಯವರೇ ಮುನ್ನಡೆಸುತ್ತಿದ್ದಾರೆ. ಆದರೇ, ರಾಹುಲ್‌ ಅದನ್ನು ಹೇಳುತ್ತಿಲ್ಲ. ಇದು ಯಾತ್ರೆ ಮಾಡುವುದಕ್ಕೆ ಸೂಕ್ತ ಸಮಯವೇ ಅಲ್ಲ. ಯಾತ್ರೆ ಏಳೆಂಟು ತಿಂಗಳುಗಳ ಹಿಂದೆಯೇ ಅಥವಾ ವರ್ಷದ ಹಿಂದೆಯೇ ಮುಗಿದಿರಬೇಕಿತ್ತು. ಇದು ನಿಮ್ಮ ಅಂಗ ಪಕ್ಷಗಳೊಂದಿಗೆ ಚುನಾವಣಾ ಸಭೆಗಳನ್ನು ಮಾಡುವ ಸಮಯ. ಈ ಸಮಯದಲ್ಲಿ ನಿಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಅಗತ್ಯವಿದೆ. ಯಾವಾಗ ದೆಹಲಿಯಲ್ಲಿ ಕೂತು ಚುನಾವಣೆಗಾಗಿ ಸಿದ್ಧತೆ ಮಾಡಬೇಕಿತ್ತೋ ಆಗ ರಾಹುಲ್‌ ಯಾತ್ರೆಯಲ್ಲಿದ್ದಾರೆ, ಯಾವಾಗ ಯಾತ್ರೆ ಮಾಡಬೇಕಿತ್ತೋ ಆಗ ರಾಹುಲ್‌ ದೆಹಲಿಯಲ್ಲಿದ್ದರು. ಈ ತಂತ್ರಗಾರಿಕೆಯನ್ನು ಯಾರು ಹೇಳಿದ್ದಾರೋ ಗೊತ್ತಿಲ್ಲ ಎಂದು ಪ್ರಶಾಂತ ಅಪಹಾಸ್ಯದ ಧ್ವನಿಯಲ್ಲಿ ಮಾತನಾಡಿದ್ದಾರೆ.

ಬಿಹಾರದಲ್ಲಿ ನಿತಿಶ್‌ ಕುಮಾರ್‌ ಪಕ್ಷಾಂತರ ಮಾಡುವಾಗ ಕಾಂಗ್ರೆಸ್‌ ಅಧ್ಯಕ್ಷರು ಎಲ್ಲೋ ಇದ್ದರು. ಮಲ್ಲಿಕಾರ್ಜುನ್‌ ಖರ್ಗೆ ನಾನು ಎಲ್ಲಾ ವರದಿಗಳನ್ನು ಗಮನಿಸುತ್ತಿದ್ದೇನೆ, ದೆಹಲಿಗೆ ಬಂದು ಮಾತನಾಡುತ್ತೇನೆ ಎಂದು ಹೇಳುತ್ತಿದ್ದರು. ಅಷ್ಟರಲ್ಲಿ ನಿತೀಶ್‌ ಕುಮಾರ್‌ ಮತ್ತೆ ಬಿಜೆಪಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಆಗಿತ್ತು. ಎಲ್ಲವೂ ಮುಗಿದಿತ್ತು. ಯಾವ ಕಾಲಕ್ಕೆ ಏನು ಮಾಡಬೇಕೋ, ಆ ಸಮಯದಲ್ಲಿ ಮಾಡದಿರುವುದೇ ಕಾಂಗ್ರೆಸ್‌ನ ಮೈನಸ್‌ ಪಾಯಿಂಟ್‌. ರಾಹುಲ್‌ ಗಾಂಧಿ ನಡೆಸುತ್ತಿರುವ ಯಾತ್ರೆ ಕಾಂಗ್ರೆಸ್‌ನದ್ದೋ ಅಥವಾ ʼಇಂಡಿಯಾʼ ಮೈತ್ರಿಯದ್ದೋ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಯಾತ್ರೆ ಕಾಂಗ್ರೆಸ್‌ನದ್ದೇ ಆಗಿದ್ದರೇ ʼಇಂಡಿಯಾʼದ ಯೋಚನೆ ಬಿಟ್ಟುಬಿಡಿ ಎಂದು ಅವರು ಹೇಳಿದ್ದಾರೆ. ಸರಿಯಾದ ಸಮಯಕ್ಕೆ, ಸೂಕ್ತವಾದ ನಿರ್ಣಯ ತೆಗೆದುಕೊಳ್ಳದ ಧೋರಣೆಯೇ ʼಇಂಡಿಯಾʼ ಮೈತ್ರಿಯನ್ನು ಇನ್ನೂ ಅನಿಶ್ಚಿತತೆಯಿಂದ ಇರುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!