Sunday, September 8, 2024

ಭಾರತದ ಡಿಜಿಟಲ್‌ ಕ್ರಾಂತಿ ವಿದೇಶದವರೆಗೂ ಹಬ್ಬಿದೆ, ಶತಮಾನಗಳ ರಾಮ ಮಂದಿರದ ಕನಸು ನನಸಾಗಿದೆ : ರಾಷ್ಟ್ರಪತಿ ಮುರ್ಮು

ಜನಪ್ರತಿನಿಧಿ ವಾರ್ತೆ (ನವದೆಹಲಿ) : ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ದೇಶದ ಜನರ ಹಿತಾಸಕ್ತಿಗೆ ಅನುಗುಣವಾಗಿ ಹಲವು ಮಹತ್ವಕಾಂಕ್ಷಿ ಯೋಜನೆಗಳನ್ನು ನೀಡಿದೆ. ಮಾತ್ರವಲ್ಲದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಶತಮಾನಗಳ ಕನಸು ನನಸಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ಇಂದು ಬುಧವಾರ (ಜ. 31) ನೂತನ ಸಂಸತ್‌ ಭವನದಲ್ಲಿ ನಡೆಯುತ್ತಿರುವ ಮೊದಲ ಬಜೆಟ್‌ ಅಧಿವೇಶನದಲ್ಲಿ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ನೂತನ ಸಂಸತ್‌ ಭವನ ಏಕ ಭಾರತ್‌ ಶ್ರೇಷ್ಠ ಭಾರತದ ಪ್ರತೀಕವಾಗಿದೆ ಎಂದು ಅವರು ಬಣ್ಣಿಸಿದರು.

ದೇಶದಲ್ಲಿನ 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತ್ರಿವಳಿ ತಲಾಖ್‌ ಅನ್ನು ನಿಷೇಧಿಸಿದೆ. ಅಷ್ಟೇ ಅಲ್ಲ ಜಮ್ಮು-ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ್ದಕ್ಕೆ ಪ್ರಧಾನಿ ಮೋದಿ ಅವರನ್ನು ಮುರ್ಮು ಅಭಿನಿಂಧಿಸಿದರು.

ಭಾರತದ ಡಿಜಿಟಲ್‌ ಕ್ರಾಂತಿ ವಿದೇಶದವರೆಗೂ ಹಬ್ಬಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಮುನ್ನುಗ್ಗುತ್ತಿದ್ದು, ವಿಶ್ವದ ಆರ್ಥಿಕತೆಯಲ್ಲಿ ಭಾರತ ದಾಪುಗಾಲಿಟ್ಟಿದೆ. ದೇಶಾದ್ಯಂತ ಬ್ರಾಡ್‌ ಬ್ಯಾಂಡ್‌ ಉಪಯೋಗಿಸುವ ಜನರ ಸಂಖ್ಯೆ ಶೇ.14ರಷ್ಟು ಹೆಚ್ಚಳವಾಗಿದೆ. ದೇಶದಾದ್ಯಂತ 39 ನೂತನ ವಂದೇ ಭಾರತ್‌ ಮಾರ್ಗಗಳನ್ನು ಅನಾವರಣಗೊಳಿಸಲಾಗಿದೆ ಎಂದು ಹೇಳಿದರು.

ಇನ್ನು, ಮೇಕ್‌ ಇನ್‌ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್‌ ನಮ್ಮನ್ನು ಇನ್ನಷ್ಟು ಬಲಿಷ್ಠಗೊಳಿಸಿದೆ. ರಕ್ಷಣಾ ವಲಯದ ಉತ್ಪಾದನೆ ಕೂಡಾ ಒಂದು ಲಕ್ಷ ಕೋಟಿ ರೂ. ಗಡಿ ದಾಟಿದೆ. ಶೇ.80ರಷ್ಟು ಜನರು ಉಚಿತ ಪಡಿತರ ಪಡೆಯುತ್ತಿದ್ದಾರೆ.

ಬಹುತೇಕ ದೇಶದ ಬಹುಪಾಲು ತೆರಿಗೆಯನ್ನು ಯುವಕರ, ಮಹಿಳೆಯರ, ರೈತರ ಹಾಗೂ ಬಡವರ ಸಬಲೀಕರಣಕ್ಕೆ ಬಳಕೆ ಮಾಡಲಾಗುತ್ತಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿದೆ.

ನಕ್ಸಲ್‌ ಸಂಬಂಧಿತ ಹಿಂಸಾಚಾರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ದೇಶದ ರೈತರ ಆದಾಯ ಕೂಡಾ ದ್ವಿಗುಣವಾಗಿದೆ. ಗಡಿಭಾಗಗಳಲ್ಲಿ ಸರ್ಕಾರ ಆಧುನಿಕ ಮೂಲಭೂತ ಸೌಕರ್ಯವನ್ನು ಒದಗಿಸಿದೆ. ಭಯೋತ್ಪಾದನೆ ವಿರುದ್ಧ ಸೇನಾಪಡೆಗಳು ತಕ್ಕ ಉತ್ತರ ನೀಡಿವೆ ಎಂದು ಶ್ಲಾಘಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!