spot_img
Wednesday, May 20, 2026
spot_img

ಪಂಚಗಂಗಾ ರೈಲು: ಹೆಚ್ಚುವರಿ ಕೋಚ್ ಹಾಕುವುದಾದರೆ ರೈಲಿನ ಸಮಯ ವ್ಯತ್ಯಾಸವಾಗಬಾರದು-ಗಣೇಶ ಪುತ್ರನ್

ಕುಂದಾಪುರ: ಪಂಚಗಂಗಾ ರೈಲು ಕರಾವಳಿಯ ಉದ್ಯೋಗಿಗಳಿಗೆ ಜೀವನ ರೇಖೆಯಾಗಿದ್ದು ಈ ರೈಲು ಯಶಸ್ವಿಯಾಗಲು ಮೂಲ ಕಾರಣವೇ ಅದರ ಟೈಮ್ ಟೇಬಲ್ .ಹೆಚ್ಚುವರಿ ಕೋಚ್ ಹಾಕಿದರೆ ಬೆಂಗಳೂರು ಮುಟ್ಟುವ ಸಮಯ ವಿಳಂಭವಾಗಲಿದೆ ಎಂಬ ಉತ್ತರ ಹಿಂದಿನಿಂದಲೂ ರೈಲ್ವೇ ನೀಡುತ್ತಾ ಬಂದಿದ್ದು, ಈಗ ಸಂಸದರೂ ಹೆಚ್ಚುವರಿ ಕೋಚ್ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಕೋಚ್ ಹಾಕುವುದಾದರೆ ಯಾವ ಕಾರಣಕ್ಕೂ ರೈಲಿನ ಸಮಯ ಬದಲಾಗ ಬಾರದು ಎಂಬುದು ಕುಂದಾಪುರ ರೈಲು ಪ್ರಯಾಣಿಕರ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಎಚ್ಚರಿಸಿದ್ದಾರೆ.

ಬೆಂಗಳೂರಿಗೆ ಐದೇ ಐದು ನಿಮಿಷ ವಿಳಂಭವಾಗಿ ಹೋದರೂ ಬೆಂಗಳೂರು ಟ್ರಾಪಿಕ್ ನಲ್ಲಿ ಸಿಲುಕಿ ಜನ ಕಚೇರಿಗಳಿಗೆ ರಜೆ ಹಾಕಬೇಕಾದ ದೂರುಗಳಿದ್ದು , ಈ ಹಿನ್ನೆಲೆಯಲ್ಲಿ ಕೊಂಕಣ ನಿಗಮ ಕೆಲವೊಂದು ಖಾಸಗಿ ಲಾಬಿಗಳ ಜತೆ ಶಾಮೀಲಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳು ಬರುತಿದ್ದು , ಹೆಚ್ಚುವರಿ ಬೋಗಿ ಹಾಕಿ ಪಂಚಗಂಗಾ ರೈಲಿನ ಸಮಯ ಹಾಳು ಮಾಡುವ ಸಂಚು ರೂಪಿಸಲಾಗಿದೆಯೇ ಎಂಬ ಅನುಮಾನ ಮೂಡಿದೆ. ಎಷ್ಟೇ ಬೋಗಿ ಹಾಕಿದರೂ ಕೂಡಾ ರೈಲಿನ ಬೇಡಿಕೆ ಕಡಿಮೆಯಾಗದು ಮತ್ತು ಹೊಸ ರೈಲೇ ಈ ಸಮಸ್ಯೆಗೆ ಪರಿಹಾರವಾಗಿದೆ. ಹಾಗು ಘಾಟ್ ಸಮಸ್ಯೆ ಪರಿಹಾರವಾದರೆ ಎಲ್ಲಾ ರೈಲುಗಳೂ ಹೆಚ್ಚು ಬೋಗಿ ಹೊಂದಬಹುದಾಗಿದ್ದು ಈ ಸಮಸ್ಯೆ ಪರಿಹಾರ ಮಾಡದೇ ಪಂಚಗಂಗಾ ರೈಲಿನ ಸಮಯ ಹಾಳು ಮಾಡಿದರೆ ತೀವ್ರ ಪ್ರತಿಭಟನೆ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!