Sunday, September 8, 2024

ಆಲೂರು ಸರಕಾರಿ ಪ್ರೌಢಶಾಲೆಯ ಸಾಧಕ ವಿದ್ಯಾರ್ಥಿಗಳಿಗೆ ರಾಜ್ಯಪಾಲರಿಂದ ಗೌರವ

ಕುಂದಾಪುರ: ಮುಖ್ಯ ಚುನಾವಣಾಧಿಕಾರಿಗಳ ಕಛೇರಿ, ಬೆಂಗಳೂರು ಮತ್ತು ಚಂದನ ದೂರದರ್ಶನ (ಡಾ.ನಾ.ಸೋಮೇಶ್ವರ ನೆಡೆಸುವ ಥಟ್ ಅಂತ ಹೇಳಿ) ಜಂಟಿಯಾಗಿ ನಡೆಸಿದ ಚುನಾವಣಾ ರಸಪ್ರಶ್ನೆಯಲ್ಲಿ 33 ಜಿಲ್ಲೆಗಳ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದ ಬೈಂದೂರು ಶೈಕ್ಷಣಿಕ ವಲಯದ ಸರಕಾರಿ ಪ್ರೌಢಶಾಲೆ ಆಲೂರು ಇಲ್ಲಿನ ವಿದ್ಯಾರ್ಥಿನಿಯರಾದ ಗ್ರೀಷ್ಮ ಮತ್ತು ಪ್ರಜ್ಞಾ ಇವರನ್ನು ಬೆಂಗಳೂರು ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತರಾದ ಮನೋಜ್ ಕುಮಾರ್, ಮೀನಾ, ಬಿ.ಬಿ.ಎಂ.ಪಿ ಆಯುಕ್ತರಾದ ತುಷಾರ್ ಗಿರಿನಾಥ್, ಅಪರ ಚುನಾವಣಾ ಆಯುಕ್ತರಾದ ಕೂರ್ಮರಾವ್, ವೆಂಕಟೇಶ ಕುಮಾರ್ ಉಪಸ್ಥಿರಿದ್ದರು.

ಈ ವಿದ್ಯಾರ್ಥಿಗಳಿಗೆ ಶಿಕ್ಷಕ ಉದಯಕುಮಾರ್ ಶೆಟ್ಟಿ ತರಬೇತಿ ನೀಡಿದ್ದರು. ಶಿಕ್ಷಕಿ ಅಮೃತಾ ಸಹಕರಿಸಿದ್ದರು.

ಸರಕಾರಿ, ಗ್ರಾಮೀಣ, ಕನ್ನಡ ಮಾಧ್ಯಮದ ಈ ಹೆಮ್ಮೆಯ ಸಾಧನೆಯನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾಧಿಕಾರಿಗಳಾದ ಡಾ.ವಿದ್ಯಾ ಕುಮಾರಿ, ನಿಕಟಪೂರ್ವ ಜಿಲ್ಲಾದಿಕಾರಿಗಳಾದ ಕೂರ್ಮರಾವ್, ಆಪರ ಜಿಲ್ಲಾಧಿಕಾರಿಗಳಾದ ಮಮತಾದೇವಿ ಜಿ.ಎಸ್ ಪ್ರಶಂಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!