spot_img
Friday, April 3, 2026
spot_img

ಬಿಜೆಪಿ ಸೇರುವುದಕ್ಕೆ ನನಗೂ ಒತ್ತಡವಿದೆ, ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ : ಲಕ್ಷ್ಮಣ ಸವದಿ

ಜನಪ್ರತಿನಿಧಿ ವಾರ್ತೆ (ಬೆಳಗಾವಿ) : ಮತ್ತೆ ಬಿಜೆಪಿ ಸೇರುವುದಕ್ಕೆ ನನಗೂ ದೊಡ್ಡ ಮಟ್ಟದ ಒತ್ತಡವಿದೆ ಆದರೇ ನಾನು ಮತ್ತೆ ಬಿಜೆಪಿ ಸೇರುವುದಿಲ್ಲ, ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.

ಇಂದು (ಶುಕ್ರವಾರ) ವರದಿಗಾರರಿಗರ ಸ್ಪಂದಿಸಿದ ಅವರು, ಕಾಂಗ್ರೆಸ್‌ನನ್ನು ನಾನು ಸೇರ್ಪಡೆಗೊಂಡ ಮೇಲೆ ಯಾವ ಯಾವ ಕ್ಷೇತ್ರಗಳಲ್ಲಿ ಏನೆಲ್ಲಾ ಆಗಿದೆ ಎನ್ನುವುದು ಬಿಜೆಪಿಯವರಿಗೆ ಚೆನ್ನಾಗಿ ಅರಿವಾಗಿದೆ. ಈಗ ನನ್ನನ್ನು ಮರಳಿ ಬಿಜೆಪಿಗೆ ಸೇರ್ಪಡೆಗೊಳ್ಳಲು ಒತ್ತಾಯಿಸುತ್ತಿದ್ದಾರೆ. ಯಾವುದೇ ಒತ್ತಡಕ್ಕೂ ನಾಣು ಮಣಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇನ್ನು, ಕಾಂಗ್ರೆಸ್‌ಗೆ ನಾನು ಮತ್ತು ಜಗದೀಶ್‌ ಶೆಟ್ಟರ್‌ ಒಟ್ಟಿಗೆ ಸೇರಿದ್ದಲ್ಲ. ನಾನು ಅವರಿಗಿಂತ ಮುಂಚೆಯೇ ಸೇರಿದ್ದೆ. ಅವರು ಕಾಂಗ್ರೆಸ್‌ ಬಿಟ್ಟ ಕಾರಣಕ್ಕೆ ನಾನೂ ಕೂಡ ಕಾಂಗ್ರೆಸ್‌ ತೊರೆಯುತ್ತೇನೆ ಎಂದು ಹೇಳುವುದು ಸತ್ಯಕ್ಕೆ ದೂರವಾದ ಮಾತು. ಅಥಣಿ ಜನ ನನ್ನ ಮೇಲೆ ನಂಬಿಕೆ ಇಟ್ಟು ಬಹುಮತದಿಂದ ಆಯ್ಕೆ ಮಾಡಿದ್ದಾರೆ. ವಿಶ್ವಾಸ ಇಟ್ಟುಕೊಂಡು ನಾನು ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಅವರು ಹೇಳಿದ್ದಾರೆ.

ನೀವು ಬಿಜೆಪಿ ಸೇರುವುದಾಗಿ ಬಸವರಾಜ್‌ ಬೊಮ್ಮಾಯಿ ಹಾಗೂ ಕೆ. ಎಸ್‌ ಈಶ್ವರಪ್ಪ ಹೇಳಿಕೆ ನೀಡಿದ್ದಾರಲ್ಲ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ʼಅವರರವರ ಭಾವನೆಗೆ, ಅವರವರ ಭಕುತಿಗೆʼ ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!