Sunday, September 8, 2024

ಜೇಸಿ‌ಐ ಕುಂದಾಪುರದ 50ನೇ ವರ್ಷದ ಘಟಕ ಅಧ್ಯಕ್ಷರಾಗಿ ಜೆ.ಎಫ್.ಎಮ್. ಚಂದನ್ ಗೌಡ

ಕುಂದಾಪುರ: ಭಾರತೀಯ ಜೇಸಿಸ್ ನ ವಲಯ 15ರ ಹಿರಿಯ ಹಾಗೂ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೇಸಿ‌ಐ ಕುಂದಾಪುರದ 50ನೇ ವರ್ಷದ (ಸುವರ್ಣ ಮಹೋತ್ಸವ ವರ್ಷ) ಘಟಕ ಅಧ್ಯಕ್ಷರಾಗಿ ಜೆ.ಎಫ್.ಎಮ್. ಚಂದನ್ ಗೌಡ ಆಯ್ಕೆಯಾಗಿದ್ದಾರೆ.

2007ರಲ್ಲಿ ಜೂನಿಯರ್ ಜೇಸಿ ಸದಸ್ಯರಾಗಿ ಘಟಕಕ್ಕೆ ಸೇರ್ಪಡೆಗೊಂಡು ವಿವಿಧ ಹುದ್ದೆಗಳನ್ನು ನಿರ್ವಹಿಸಿ, 2020 ರಲ್ಲಿ ಜೂನಿಯರ್ ಜೇಸಿ ಅಧ್ಯಕ್ಷರಾಗಿ ಅತ್ಯುತ್ತಮ ಯುವ ಜೇಸಿ ಅಧ್ಯಕ್ಷ ಪ್ರಶಸ್ತಿ ವಿಜೇತರಾದವರು, 2011 ರಲ್ಲಿ ಜೇಸಿ‌ಐ ಕುಂದಾಪುರದ ಸದಸ್ಯರಾಗಿ ಘಟಕದ ಯುವ ಜೇಸಿ ವಿಭಾಗದ ಸಂಯೋಜಕರಾಗಿ, ಕಾರ್ಯಕ್ರಮಗಳ ನಿರ್ದೇಶಕರಾಗಿ, ಸಪ್ತಾಹದ ಯೋಜನಾಧಿಕಾರಿಯಾಗಿ, ಕ್ರೀಡಾ ಸಂಯೋಜಕರಾಗಿ, ಕೋಶಾಧಿಕಾರಿಯಾಗಿ, ಆಡಳಿತ ವಿಭಾಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು 10 ಜೇಸಿ‌ಐ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಹಾಗೂ 12 ವಲಯ ಜೇಸಿ‌ಐ ಸಮ್ಮೇಳನಗಳಲ್ಲಿ ಭಾಗವಹಿಸುತ್ತಾರೆ.

ಉತ್ತಮ ಶಟಲ್ ಬ್ಯಾಡ್ಮಿಂಟನ್ ಆಟಗಾರರಾಗಿ ಹಲವಾರು ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ ಎಂದು ಜೇಸಿ‌ಐ ಕುಂದಾಪುರ ಅಧ್ಯಕ್ಷರಾದ ಜೇಸಿ ಸುಧಾಕರ್ ಕಾಂಚನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!